ಅಬುಧಾಬಿ : ಐಪಿಎಲ್ 13ನೇ ( IPL 2020 ) ಸೀಸನ್ ನಲ್ಲಿ ಲೀಗ್ ಪಂದ್ಯಗಳು ಮುಕ್ತಾಯದ ಹಂತಕ್ಕೆ ತಲುಪುತ್ತಿದೆ. ಪ್ಲೆ-ಆಫ್ ಲೆಕ್ಕಾಚಾರ ರೋಚಕಗೊಳ್ಳುತ್ತಿದ್ದು, ಕೊನೆಯ ಪಂದ್ಯದಲ್ಲಿ ಕೆಲ ತಂಡಗಳ ಭವಿಷ್ಯ ನಿರ್ಧಾರವಾಗಲಿದೆ. ಅದರಲ್ಲಿ ಪಂಜಾಬ್ ತಂಡವೂ ಕೂಡ ಒಂದು. ಇಂದು ಪಂಜಾಬ್ ತಂಡ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ಅಬುಧಾಮಿಯಲ್ಲಿ ನಡೆಯಲಿರುವ ಈ ಪಂದ್ಯ ಪಂಜಾಬ್ ತಂಡಕ್ಕೆ ಪ್ಲೇ-ಆಪ್ ಲೆಕ್ಕಾಚಾರ ಹಿನ್ನೆಲೆ ಬಹು ಮುಖ್ಯವಾಗಿದೆ. 13 ಪಂದ್ಯಗಳಿಂದ 12 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದರಷ್ಟೇ ಪ್ಲೇ ಆಫ್ ರೇಸ್ ನಲ್ಲಿ ಜೀವಂತವಾಗಿರಲಿದೆ. ಇನ್ನು ಈಗಾಗಲೇ ಪ್ಲೆ-ಆಫ್ ರೇಸ್‍ನಿಂದ ಹೊರಬಿದ್ದಿರುವ ಚೆನ್ನೆ ಸೂಪರ್ ಕಿಂಗ್ಸ್‍ಗೆ ಇದೊಂದು ಔಪಚಾರಿಕ ಪಂದ್ಯವಾಗಿದೆ.
ಪಂಜಾಬ್ ಬಲ ಏನು..?
ಮೊದಲಾರ್ಧದಲ್ಲಿ ಉತ್ತಮ ಆಟದ ನಡುವೆ ಪಂದ್ಯಗಳನ್ನು ಸೋತಿದ್ದ ಪಂಜಾಬ್ ಎರಡನೇ ಹಂತದಲ್ಲಿ ಫಿನ್ನಿಕ್ಸ್ ನಂತೆ ಕಂಬ್ಯಾಕ್ ಮಾಡಿದೆ. ಸತತ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ಎದುರಾಳಿಗಳಲ್ಲಿ ಭಯ ಮೂಡಿಸಿದೆ. ಕ್ರಿಸ್ ಗೇಲ್, ರಾಹುಲ್, ಪೂರನ್ ಉತ್ತಮ ಫಾರ್ಮ್ ನಲ್ಲಿರುವುದು ತಂಡಕ್ಕೆ ವರವಾಗಿದೆ.
ಮೊಹಮ್ಮದ್ ಶಮಿ ಮತ್ತು ರವಿ ಬಿಷ್ಣೋಯಿ, ಎಂ.ಅಶ್ವಿನ್, ಅರ್ಷ್ ದೀಪ್ ಸಿಂಗ್, ಕ್ರಿಸ್ ಜೋರ್ಡನ್ ಬೌಲಿಂಗ್ ನಲ್ಲಿ ಕಮಾಲ್ ಮಾಡುತ್ತಿದ್ದು, ಪಂಜಾಬ್ ಗೆ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದಾರೆ..
ಚೆನ್ನೈಗೆ ಔಪಚಾರಿಕ ಪಂದ್ಯ
ಈಗಾಗಲೇ ಪ್ಲೇ ಆಪ್ ರೇಸ್ ನಿಂದ ಹೊರ ಬಿದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಇದೊಂದು ಔಪಚಾರಿಕ ಪಂದ್ಯ. ಚೆನ್ನೈ ಸೂಪರ್ ಕಿಂಗ್ಸ್ ತಂಡ 13 ಪಂದ್ಯಗಳನ್ನಾಡಿದ್ದು 5 ಗೆಲುವು ಹಾಗೂ 8 ಸೋಲುಗಳೊಂದಿಗೆ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಯುವ ಆಟಗಾರ ರುತುರಾಜ್ ಗಾಯಕ್ವಾಡ್, ಪ್ಲೆಸಿಸ್, ರಾಯುಡು ಮತ್ತು ಧೋನಿ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಬೌಲಿಂಗ್‍ನಲ್ಲಿ ದೀಪಕ್ ಚಾಹರ್, ಸ್ಯಾಮ್ ಕರ್ರನ್, ಸ್ಯಾಂಟ್ನರ್, ಕರಣ್ ಶರ್ಮಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ.
ಇದನ್ನೂ ಓದಿ : ಪಂದ್ಯ ಸೋತರೂ ಕನ್ನಡಿಗರ ಹೃದಯ ಗೆದ್ದ ಆರ್ ಸಿಬಿ
ಪಂಜಾಬ್ ಸೋತ್ರೆ ಆರ್ ಸಿಬಿ ಸೇಫ್
ಹೌದು…! ಇಂದಿನ ಪಂದ್ಯದಲ್ಲಿ ಪಂಜಾಬ್ ತಂಡ ಸೋತ್ರೆ ನಮ್ಮ ಬೆಂಗಳೂರು ತಂಡಕ್ಕೆ ಸಹಾಯವಾಗಲಿದೆ. ಹೇಗೆಂದ್ರೆ 13 ಪಂದ್ಯಗಳಿಂದ 12 ಪಾಯಿಂಟ್ಸ್ ಪಡೆದು ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಪಂಜಾಬ್ ಇಂದಿನ ಪಂದ್ಯ ಗೆದ್ದರೇ 14 ಅಂಕಗಳನ್ನು ಪಡೆದುಕೊಳ್ಳುತ್ತೆ. ಆಗ ರನ್ ರೇಟ್ ಆಧಾರದ ಮೇಲೆ ಪಾಯಿಂಟ್ ಟೇಬಲ್ ನಲ್ಲಿ 2ನೇ ಸ್ಥಾನಕ್ಕೇರುತ್ತೆ. ಯಾಕೆಂದ್ರೆ ಆರ್ ಸಿಬಿ ತಂಡಕ್ಕಿಂತ ಪಂಜಾಬ್ ರನ್ ರೇಟ್ ತುಸು ಉತ್ತಮವಾಗಿದೆ.
ಒಂದು ವೇಳೆ ಇಂದಿನ ಪಂದ್ಯದಲ್ಲಿ ಪಂಜಾಬ್ ಸೋತ್ರೆ 12 ಅಂಕಗಳೊಂದಿಗೆ ಪ್ಲೇ ಆಪ್ ರೇಸ್ ನಿಂದ ಹೊರ ಬೀಳಲಿದೆ.
ಐಪಿಎಲ್ 2020- ರಾಜಸ್ತಾನ ರಾಯಲ್ಸ್ ಗೆ ತಲೆಬಾಗಿದ ಕಿಂಗ್ಸ್ ಇಲೆವೆನ್ ಪಂಜಾಬ್
ಆಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಪಂದ್ಯದಲ್ಲಿ ಸೋಲುಂಡರೂ ಕಡೇ ಪಕ್ಷ 3 ಅಥವಾ 4ನೇ ಸ್ಥಾನದಲ್ಲಿರುತ್ತೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel