ಡೆಲ್ಲಿ ಗೆಲುವಿನ ಸವಾರಿಗೆ ಬ್ರೇಕ್ ಹಾಕ್ತಾರಾ ಕಿಂಗ್ಸ್ ಪಂಜಾಬ್
ಐಪಿಎಲ್ ಟೂರ್ನಿಯ 38ನೇ ಪಂದ್ಯ. ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳು ಕಾದಾಟ ನಡೆಸಲಿವೆ.
ಈಗಾಗಲೇ ಕಿಂಗ್ಸ್ ಇಲೆವೆನ್ ತಂಡ ಪ್ಲೇ ಆಫ್ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.
ಟೂರ್ನಿಯ ಎರಡನೇ ಹಂತದಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ರಾಹುಲ್ ಬಳಗ ಈಗ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದೆ.
ಮುಂಬೈ ಇಂಡಿಯನ್ಸ್ ವಿರುದ್ಧದ ಎರಡನೇ ಸೂಪರ್ ಓವರ್ ಗೆಲುವು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ಆದ್ರೆ ಮಾಡಿರುವ ತಪ್ಪುಗಳನ್ನು ಸರಿಪಡಿಸಿಕೊಳ್ಳಬೇಕಿದೆ. ರಾಹುಲ್ ಮತ್ತು ಅಗರ್‍ವಾಲ್, ಕ್ರಿಸ್ ಗೇಲ್ ಹೊರತುಪಡಿಸಿ ಇನ್ನುಳಿದ ಬ್ಯಾಟ್ಸ್ ಮೆನ್ ಗಳಿಂದ ರನ್ ಗಳು ಬರುತ್ತಿಲ್ಲ.
ಇದು ತಂಡಕ್ಕೆ ದೊಡ್ಡ ಹೊಡೆತವನ್ನು ನೀಡುತ್ತಿದೆ.
ಅದೇ ರೀತಿ ಬೌಲಿಂಗ್ ನಲ್ಲಿ ಮಹಮ್ಮದ್ ಶಮಿ ಮತ್ತು ರವಿ ಬಿಸ್ನೋಯ್ ಮಾತ್ರ ಪರಿಣಾಮಕಾರಿಯಾಗುತ್ತಿದ್ದಾರೆ.
ಉಳಿದಂತೆ ಕಿಂಗ್ಸ್ ತಂಡ ಮಧ್ಯಮ ಕ್ರಮಾಂಕವನ್ನು ಬಲಪಡಿಸಿಕೊಳ್ಳಬೇಕಿದೆ. ಗೆಲುವಿನ ಅಂಚಿನಲ್ಲಿ ಸೋಲುತ್ತಿರುವುದು ತಂಡಕ್ಕೆ ಹಿನ್ನಡೆಯಾಗುತ್ತಿದೆ.
ಇಂದಿನ ಪಂದ್ಯದಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ ಬದಲು ಜೇಮ್ಸ್ ನಿಶಾಮ್ 11ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಉಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾವುದೇ ಚಿಂತೆ ಇಲ್ಲ.
ಗೆಲುವಿನ ಓಟವನ್ನು ಮುಂದುವರಿಸಿಕೊಂಡು ಹೋಗುವ ತವಕದಲ್ಲಿದೆ. ಆದ್ರೂ ತಂಡದಲ್ಲಿ ನಿರೀಕ್ಷಿತ ಮಟ್ಟದ ಬ್ಯಾಟಿಂಗ್ ಪ್ರದರ್ಶನ ಬರುತ್ತಿಲ್ಲ.
ಪೃಥ್ವಿ ಶಾ ಅವರು ಸತತವಾಗಿ ವಿಫಲರಾಗುತ್ತಿದ್ದಾರೆ. ಹಾಗೇ ತಂಡದ ಬ್ಯಾಟ್ಸ್ ಮೆನ್ ಗಳಿಂದ ಏಕಾಂಗಿ ಪ್ರದರ್ಶನ ಬರುತ್ತಿದೆ.
ಹೀಗಾಗಿ ತಂಡಕ್ಕೆ ಹೆಚ್ಚಿನ ತೊಂದರೆಯಾಗುತ್ತಿಲ್ಲ.
ಇನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡ ಬೌಲಿಂಗ್ ಬಗ್ಗೆ ಹೇಳುವುದೇ ಬೇಡ.
ರಬಾಡ, ಅನ್ರಿಚ್, ಮಾರ್ಕಸ್ ಸ್ಟೋನಿಸ್, ಅಕ್ಷರ್ ಪಟೇಲ್, ಅಶ್ವಿನ್, ತುಷಾರ್ ದೇಶಪಾಂಡೆ ಅತ್ಯುತ್ತಮ ಲಯದಲ್ಲಿದ್ದಾರೆ.
ಹಾಗೇ ರಿಷಬ್ ಪಂತ್ ಫಿಟ್‍ನೆಸ್ ಬಗ್ಗೆ ಇನ್ನೂ ನಿಖರವಾದ ಮಾಹಿತಿ ಇಲ್ಲ.
ಒಂದು ವೇಳೆ ರಿಷಬ್ ಪಂತ್ ಫಿಟ್ ಆಗಿದ್ರೆ, ಅಲೆಕ್ಸ್ ಕ್ಯಾರೆ ಹೊರಗುಳಿಯಬೇಕಾಗುತ್ತದೆ. ಇಲ್ಲದಿದ್ರೆ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ಸಂಭವನೀಯ ತಂಡ
ಶ್ರೇಯಸ್ ಅಯ್ಯರ್ (ನಾಯಕ), ಪೃಥ್ವಿ ಶಾ, ಶಿಖರ್ ಧವನ್, ಅಜ್ಯಂಕ್ಯಾ ರಹಾನೆ, ಮಾರ್ಕಸ್ ಸ್ಟೋನಿಸ್,
ಅಕ್ಷರ್ ಪಟೇಲ್, ಅಶ್ವಿನ್, ಅಲೆಕ್ಸ್ ಕ್ಯಾರೆ, ಕಾಗಿಸೊ ರಬಾಡ, ಅನ್ರಿಚ್ ನೊರ್ಟೆಜ್, ತುಷಾರ್ ದೇಶಪಾಂಡೆ.
ಕಿಂಗ್ಸ್ ಇಲೆವೆನ್ ಪಂಜಾಬ್ ಸಂಭವನೀಯ ತಂಡ
ಕೆ.ಎಲ್. ರಾಹುಲ್ (ನಾಯಕ), ಮಯಾಂಕ್ ಅಗರ್ ವಾಲ್, ಕ್ರಿಸ್ ಗೇಲ್, ನಿಕೊಲಾಸ್ ಪೂರನ್, ದೀಪಕ್ ಹೂಡಾ,
ಜೇಮ್ಸ್ ನಿಶಾಮ್, ಕ್ರಿಸ್ ಜೋರ್ಡಾನ್, ಮುರುಗನ್ ಅಶ್ವಿನ್, ಮಹಮ್ಮದ್ ಶಮಿ, ರವಿ ಬಿಸ್ನೋಯ್, ಆರ್ಶದೀಪ್ ಸಿಂಗ್.