ADVERTISEMENT
Thursday, June 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Sports IPL 2020

ಐಪಿಎಲ್ 2020- ನೈಟ್ ರೈಡರ್ಸ್ ಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್

admin by admin
October 8, 2020
in IPL 2020, Newsbeat, ಐಪಿಎಲ್ 2020, ಕ್ರೀಡೆ
mahendra singh dhoni csk ipl 2020 saakshatv
Share on FacebookShare on TwitterShare on WhatsappShare on Telegram

ಐಪಿಎಲ್ 2020- ನಡೆಯದ ಧೋನಿಯ ಲೆಕ್ಕಾಚಾರ… ನೈಟ್ ರೈಡರ್ಸ್  ಗೆ ಶರಣಾದ ಚೆನ್ನೈ ಸೂಪರ್ ಕಿಂಗ್ಸ್

rahul tripati  ipl 2020 kkr saakshatvಐಪಿಎಲ್ ಟೂರ್ನಿಯ 21ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 10 ರನ್ ಗಳಿಂದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಪರಾಭವಗೊಳಿಸಿದೆ.
ಅಬುಧಾಬಿಯಲ್ಲಿ ಟಾಸ್ ಗೆದ್ದ ಕೆಕೆಆರ್ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಶುಬ್ಮನ್ ಗಿಲ್ ಜೊತೆಗೆ ರಾಹುಲ್ ತ್ರಿಪಾಠಿ ಅವರು ಆರಂಭಿಕನಾಗಿ ಕಣಕ್ಕಿಳಿದ್ರು.

ಶುಬ್ಮನ್ ಗಿಲ್ 11 ರನ್ ಗಳಿಸುವಷ್ಟರಲ್ಲಿ ಬ್ರೇವೋ ಅವರಿಗೆ ವಿಕೆಟ್ ಒಪ್ಪಿಸಿದ್ರು. ಮತ್ತೊಂದೆಡೆ ರಾಹುಲ್ ತ್ರಿಪಾಠಿ ಅವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡ್ರು. ಆದ್ರೆ ಕೆಕೆಆರ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮೆನ್ ಗಳು ಸರಿಯಾಗಿ ಸಾಥ್ ನೀಡಲಿಲ್ಲ.
ನಿತೀಶ್ ರಾಣಾ 9 ರನ್, ಸುನೀಲ್ ನರೇನ್ 17 ರನ್, ಇಯಾನ್ ಮೊರ್ಗಾನ್ 7 ರನ್, ಆಂಡ್ರೆ ರಸೆಲ್ 2 ರನ್ , ದಿನೇಶ್ ಕಾರ್ತಿಕ್ 12 ರನ್ ಗಳಿಸಿ ನಿರಾಸೆ ಮೂಡಿಸಿದ್ರು.
ಮತ್ತೊಂದೆಡೆ ಆರಂಭಿಕ ರಾಹುಲ್ ತ್ರಿಪಾಠಿ ಅವರು ಅಬ್ಬರದ ಬ್ಯಾಟಿಂಗ್ ನಡೆಸಿದ್ರು. ಚೆನ್ನೈ ಬೌಲರ್ ಗಳಿಗೆ ಸವಾಲಾಗಿ ಪರಿಣಮಿಸಿದ್ದ ರಾಹುಲ್ ತ್ರಿಪಾಠಿ ಅವರು 51 ಎಸೆತಗಳಲ್ಲಿ ಎಂಟು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 81 ರನ್ ಸಿಡಿಸಿದ್ರು.

ಐಪಿಎಲ್ 2020- ಮಂಕಾಗುತ್ತಿರುವ ಈ ಐದು ಬ್ಯಾಟ್ಸ್ ಮೆನ್ ಗಳು.. ಫ್ರಾಂಚೈಸಿಗಳಿಗೆ ದೊಡ್ಡ ತಲೆನೋವು..!

ಇನ್ನುಳಿದಂತೆ ಬ್ರೇವೋ ಅವರ ಮಾರಕ ದಾಳಿಗೆ ಕಮಲೇಶ್ ನಾಗರ್ಕೋಟಿ, ಶಿವಮ್ ಮಾವಿ ಮತ್ತು ವರುಣ್ ಚಕ್ರವರ್ತಿ ಶೂನ್ಯ ಸುತ್ತಿದ್ರು. ಪ್ಯಾಟ್ ಕಮಿನ್ಸ್ ಅವರು ಅಜೇಯ 17 ರನ್ ಗಳಿಸಿದ್ರು. ಅಂತಿಮವಾಗಿ ಕೆಕೆಆರ್ ತಂಡ 20 ಓವರ್ ಗಳಲ್ಲಿ 167 ರನ್ ಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತ್ತು.

Related posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

June 11, 2026
ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

June 11, 2026

ravindra jadeja ipl 2020 csk saakshatvಗೆಲ್ಲಲು 168 ರನ್ ಗಳ ಸವಾಲನ್ನು ಸ್ವೀಕರಿಸಿದ್ದ ಚೆನ್ನೈ ತಂಡ ಪಂದ್ಯ 3.4 ನೇ ಓವರ್ ನಲ್ಲಿ ಫಾಪ್ ಡುಪ್ಲೇಸಸ್ 17 ರನ್ ಗಳಿಸಿ ಪೆವಿಲಿಯನ್ ದಾರಿ ಹಿಡಿದ್ರು.

ನಂತರ ಶೇನ್ ವಾಟ್ಸನ್ ಜೊತೆ ಸೇರಿದ ಅಂಬಟಿ ರಾಯುಡು ತಂಡವನ್ನು ಗೆಲುವಿನ ದಡ ಸೇರಿಸುವ ಪ್ರಯತ್ನ ನಡೆಸಿದ್ರು.

ಈ ಹಂತದಲ್ಲಿ 30 ರನ್ ಗಳಿಸಿದ್ದ ಅಂಬಟಿ ರಾಯುಡು ಅವರು ನಾಗರ್ಕೋಟಿ ಅವರಿಗೆ ಬಲಿಯಾದ್ರು. ಹಾಗೇ ಶೇನ್ ವಾಟ್ಸನ್ ಅವರು 50 ರನ್ ಗಳಿಸಿದ್ದಾಗ ಸುನೀಲ್ ನರೇನ್ ಅವರ ಎಲ್‍ಬಿ ಬಲೆಗೆ ಬಿದ್ರು.

ಬಳಿಕ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಕೆಕೆಆರ್ ಬೌಲರ್ ಗಳು ಕಂಟಕವಾಗಿ ಪರಿಣಮಿಸಿದ್ರು. ಮಹೇಂದ್ರ ಸಿಂಗ್ ಧೋನಿ 11 ರನ್ ಗಳಿಸಿದ್ದಾಗ ವರುಣ್ ಚಕ್ರವರ್ತಿಗೆ ಬೌಲ್ಡಾದ್ರೆ, ಸ್ಯಾಮ್ ಕುರನ್ 17 ರನ್ ಗಳಿಸಿ ಪೆವಿಲಿಯನ್‍ಗೆ ಹಿಂತಿರುಗಿದ್ರು.
ಕೊನೆಯಲ್ಲಿ ಕೇದಾರ್ ಜಾಧವ್12 ಎಸೆತಗಳಲ್ಲಿ ಅಜೇಯ ಏಳು ರನ್ ಹಾಗೂ ರವೀಂದ್ರ ಜಡೇಜಾ ಎಂಟು ಎಸೆತಗಳಲ್ಲಿ 21 ರನ್ ಗಳಿಸಿದ್ರು. ಆದ್ರೆ ಕೆಕೆಆರ್ ತಂಡದ ಶಿಸ್ತುಬದ್ಧ ಬೌಲಿಂಗ್ ದಾಳಿಯ ಮುಂದೆ ಸಿಎಸ್‍ಕೆ ತಂಡದ ಅಬ್ಬರ ನಡೆಯಲಿಲ್ಲ.

ಹೀಗಾಗಿ ಕೆಕೆಆರ್ ತಂಡ 10 ರನ್ ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು. ಚೆನ್ನೈ ಸೂಪರ್ ಕಿಂಗ್ಸ್ 5 ವಿಕೆಟ್ ಕಳೆದುಕೊಂಡು 157 ರನ್ ಗಳಿಸಲಷ್ಟೇ ಶಕ್ತವಾಯ್ತು.
ಸಿಎಸ್‍ಕೆ ಟೂರ್ನಿಯಲ್ಲಿ ನಾಲ್ಕನೇ ಸೋಲು ಕಂಡ್ರೆ, ಕೆಕೆಆರ್ ತಂಡ ಮೂರನೇ ಗೆಲುವು ದಾಖಲಿಸಿತು. ಭರ್ಜರಿ ಬ್ಯಾಟಿಂಗ್ ಮಾಡಿದ್ದ ರಾಹುಲ್ ತ್ರಿಪಾಠಿ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.

Tags: #dinesh karthik#shene watsonchennai super kingsCricketcsk fans clubIPLIPL 2020kkr fans clubKolkata Knight RidersMahendra Singh DhoniRahul Tripathiravindra jadejasharukh khan
ShareTweetSendShare
Join us on:

Related Posts

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

ದೇವೇಗೌಡರ ಕುರಿತು ಕಾಂಗ್ರೆಸ್ ನಾಯಕರ ಮೊಸಳೆ ಕಣ್ಣೀರು: ಬಿವೈ ವಿಜಯೇಂದ್ರ

by Shwetha
June 11, 2026
0

ಮಾಜಿ ಪ್ರಧಾನಿ H. D. ದೇವೇಗೌಡ ಅವರಿಗೆ ರಾಜ್ಯಸಭಾ ಟಿಕೆಟ್ ಸಿಗದ ವಿಚಾರವಾಗಿ ಕಾಂಗ್ರೆಸ್ ನಾಯಕರು ವ್ಯಕ್ತಪಡಿಸುತ್ತಿರುವ ಕಾಳಜಿಯನ್ನು ಬಿಜೆಪಿ ರಾಜ್ಯಾಧ್ಯಕ್ಷ B. Y. ವಿಜಯೇಂದ್ರ ತೀವ್ರವಾಗಿ...

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

ಜೂನ್ 13ರಿಂದ ಪ್ರಧಾನಿ ಮೋದಿ ಯುರೋಪ್ ಪ್ರವಾಸ; ಫ್ರಾನ್ಸ್-ಸ್ಲೋವಾಕಿಯಾ ಭೇಟಿ

by Shwetha
June 11, 2026
0

ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 13ರಿಂದ 18ರವರೆಗೆ ಯುರೋಪ್ ಪ್ರವಾಸ ಕೈಗೊಳ್ಳಲಿದ್ದು, ಪ್ರಮುಖ ರಾಷ್ಟ್ರಗಳಾದ ಫ್ರಾನ್ಸ್ ಹಾಗೂ ಸ್ಲೋವಾಕಿಯಾ ಗೆ ಭೇಟಿ ನೀಡಲಿದ್ದಾರೆ. ಭಾರತದ ಜಾಗತಿಕ...

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

ತೃಣಮೂಲ ಬಿಟ್ಟು ಕಾಂಗ್ರೆಸ್ ಸೇರಲು ಮಮತಾ ಬ್ಯಾನರ್ಜಿ ಒಲವು? ದೆಹಲಿ ರಾಜಕಾರಣದಲ್ಲಿ ತಲ್ಲಣ!

by Shwetha
June 11, 2026
0

ಭಾರತದ ರಾಜಕೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದಂತಹ ಬೃಹತ್ ಸಂಚಲನವೊಂದು ಸೃಷ್ಟಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಪಶ್ಚಿಮ ಬಂಗಾಳದ ಅಧಿಪತಿ, ತೃಣಮೂಲ ಕಾಂಗ್ರೆಸ್ ಅಧಿನಾಯಕಿ ಮಮತಾ ಬ್ಯಾನರ್ಜಿ ಅವರು ಶೀಘ್ರದಲ್ಲೇ...

ಗೃಹಲಕ್ಷ್ಮಿಯರಿಗೆ ಬಯೋಮೆಟ್ರಿಕ್ ಕಡ್ಡಾಯ? ಇಲ್ಲದಿದ್ದರೆ ₹2,000 ಜಮೆಯಾಗದ ಸಾಧ್ಯತೆ

ಗೃಹಲಕ್ಷ್ಮಿಯರು ಯೋಜನೆಯಿಂದ ಹೊರಕ್ಕೆ; ಸಾವಿರಾರು ಅನರ್ಹರ ಹೆಸರು ಕೈಬಿಟ್ಟ ಸರ್ಕಾರ

by Shwetha
June 11, 2026
0

ರಾಜ್ಯದ ಮಹತ್ವಾಕಾಂಕ್ಷಿ 'ಗೃಹಲಕ್ಷ್ಮಿ' ಯೋಜನೆಯಲ್ಲಿ ಅನರ್ಹ ಫಲಾನುಭವಿಗಳನ್ನು ಗುರುತಿಸುವ ಕಾರ್ಯ ಮುಂದುವರಿದಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ಸಾವಿರಾರು ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ ಮಾಹಿತಿಯ...

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ:  ಪ್ರಿಯಾಂಕ್ ಖರ್ಗೆ

ನೆಹರೂ ಎಲ್ಲಿ ಮೋದಿ ಎಲ್ಲಿ? ಮೋದಿಯವರ 12 ವರ್ಷದ 12 ಸಾಧನೆಗಳನ್ನು ಪಟ್ಟಿ ಮಾಡಿ ತೋರಿಸಿ: ಪ್ರಿಯಾಂಕ್ ಖರ್ಗೆ

by Shwetha
June 11, 2026
0

ದೇಶದ ಮೊದಲ ಪ್ರಧಾನಿ ಜವಾಹರ್ ಲಾಲ್ ನೆಹರೂ ಆಡಳಿತದ ಅವಧಿಯ ದಾಖಲೆಯನ್ನು ಪ್ರಧಾನಿ ಮೋದಿ ಮುರಿದಿದ್ದಾರೆ ಎಂದು ಬಿಜೆಪಿ ಮುಖಂಡರು, ಮೋದಿಯವರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ, ಮೋದಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram