ಐಪಿಎಲ್ : ಹಾವ ಭಾವದ ಮೂಲಕ ಖ್ಯಾತಿಯ ಪಡೆದ ಸುಂದ್ರಿಯರು.!
ದಿನಾಂಕ ಅಕ್ಟೋಬರ್ 18
ಸ್ಥಳ – ದುಬೈ ಕ್ರೀಡಾಂಗಣ
ಪಂದ್ಯ ಮುಂಬೈ ಇಂಡಿಯನ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್
ಅದು ರೋಚಕವಾಗಿ ಅಂತ್ಯಕಂಡ ಪಂದ್ಯ. ಐಪಿಎಲ್ ಇತಿಹಾಸದಲ್ಲೇ ನಡೆದಿರುವ ಮೊಟ್ಟ ಮೊದಲ ರೋಚಕ ಪಂದ್ಯ.
ನಿಗದಿತ 20 ಓವರ್ ಗಳ ಪಂದ್ಯ ಟೈ. ಗೆಲುವನ್ನು ನಿರ್ಧರಿಸಲು ಸೂಪರ್ ಓವರ್ ಮೊರೆ ಹೋಗಬೇಕಾಯ್ತು. ಮೊದಲ ಸೂಪರ್ ಓವರ್ ನ ಪಂದ್ಯ ಕೂಡ ಟೈ.
ನಂತರ ಎರಡನೇ ಸೂಪರ್ ಓವರ್.. ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದಂತಹ ಪಂದ್ಯದಲ್ಲಿ ಕೊನೆಗೂ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಗೆಲುವಿನ ನಗೆ ಬೀರಿತ್ತು.
ಆದ್ರೆ ಆ ಒಂದೇ ಒಂದು ಫೋಟೋದಿಂದ ಕಿಂಗ್ಸ್ ಇಲೆವೆನ್ ತಂಡದ ಹೋರಾಟ, ಗೆಲುವಿನ ಸಂಭ್ರಮ ಅಷ್ಟೊಂದು ಸುದ್ದಿಯಾಗಲಿಲ್ಲ.
ಮಹಮ್ಮದ್ ಶಮಿ, ಜಸ್ಪ್ರಿತ್ ಬೂಮ್ರಾ, ಕೆ.ಎಲ್. ರಾಹುಲ್, ಕ್ರಿಸ್ ಗೇಲ್, ಮಯಾಂಕ್ ಅಗರ್ ವಾಲ್ ಈ ಸೂಪರ್ ಓವರ್ ನಲ್ಲಿ ಅದ್ಭುತ ಆಟವನ್ನೇ ಪ್ರದರ್ಶನ ನೀಡಿದ್ದರು.
ಆದ್ರೆ ಅಲ್ಲಿ ಸುದ್ದಿಯಾಗಿದ್ದು ಆ ಒಂದು ಹುಡುಗಿ.
ಹೌದು, ಪಂದ್ಯದ ರೋಚಕತೆಯನ್ನು ಆ ಹುಡುಗಿ ತನಗೆ ಗೊತ್ತಿಲ್ಲದೆ ಹಾವಭಾವಗಳನ್ನು ವ್ಯಕ್ತಪಡಿಸಿದ್ದಳು.
ಅಂದ ಹಾಗೇ ಆ ಹುಡುಗಿ ಕೂಡ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಅಭಿಮಾನಿಯಾಗಿದ್ದಳು.
ಆದ್ರೆ ಕೊನೆಯ ಕ್ಷಣದಲ್ಲಿ ಪಂಜಾಬ್ ತಂಡ ಸೋಲುತ್ತೆ ಅನ್ನೋ ಭೀತಿಯಲ್ಲಿ ಅರಿವಿಲ್ಲದೆ ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತಿದ್ದ
ಹುಡುಗಿ ತನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದಳು. ಆಗ ಟಿವಿ ಕ್ಯಾಮೆರಾಕಣ್ಣು ಆ ಹುಡುಗಿಯತ್ತ ಬಿತ್ತು ಅಷ್ಟೇ..
ಇದೀಗ ಆ ಹುಡುಗಿಯದ್ದೇ ಸುದ್ದಿ. ಯಾರು ಆ ಚೆಲುವೆ. ಸೂಪರ್ ಓವರ್ ಗರ್ಲ್ ಅಂತನೇ ಫೇಮಸ್ ಆಗಿರುವ ಆ ಸುಂದರಿ ಈಗ
ಸಾಮಾಜಿಕ ಜಾಲ ತಾಣದಲ್ಲಿ ತನ್ನ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾಳೆ.
ಅಂದ ಹಾಗೇ ಆ ಚೆಲುವೆಯ ಹೆಸರು ರಿಯಾನಾ ಲಾಲ್ವಾನಿ.
ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿರುವ ರಿಯಾನಾ ಲಾಲ್ವಾನಿ ಫೋಟೋಗಳು ರಾತ್ರೋ ರಾತ್ರಿ ಖ್ಯಾತಿಯ ಉತ್ತುಂಗಕ್ಕೇರಿದ್ರು.
ಇದೀಗ ರಿಯಾನಾ ಲಾಲ್ವಾನಿ ಅವರು ತನ್ನ ಚಿತ್ರವಿರುವ ಮೀಮ್ಸ್ ಗಳನ್ನು ಹಂಚಿಕೊಂಡಿದ್ದಾರೆ.
ಚೆನ್ನೈ ಲಾಸ್ಟ್ ಸೂಪರ್ ಕಿಂಗ್ಸ್ ರೈನಾ… ಪಂಜಾಬ್ ಫೌಂಡ್ ಸೂಪರ್ ಓವರ್ ರಿಯಾನಾ
2019ರಲ್ಲಿ ಆರ್ ಸಿಬಿಯ ಅಭಿಮಾನಿಯಾಗಿರುವ ದೀಪಿಕಾ ಘೋಸ್ ಕೂಡ ರಿಯಾನಾ ಲಾಲ್ವಾನಿ ಅವರಂತೆ ಖ್ಯಾತಿಯ ಉತ್ತುಂಗಕ್ಕೇರಿದ್ದರು.