ಐಪಿಎಲ್ 2020- ಐಸಿಸಿ ನಿಯಮ ಉಲ್ಲಂಘಿಸಿದ್ದ ರಾಬಿನ್ ಉತ್ತಪ್ಪ
ರಾಬಿನ್ ಉತ್ತಪ್ಪ.. ದಶಕಗಳ ಹಿಂದೆ ಹೊಡಿಬಡಿ ಆಟಗಾರ. ಆದ್ರೆ ಈಗ ರಾಬಿನ್ ಉತ್ತಪ್ಪ ಅವರು ತನ್ನ ಬ್ಯಾಟಿಂಗ್ ಲಯವನ್ನು ಕಳೆದುಕೊಂಡಿದ್ದಾರೆ. ಈ ಬಾರಿಯ ಐಪಿಎಲ್ ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ಪರ ಆಡುತ್ತಿರುವ ರಾಬಿನ್ ಉತ್ತಪ್ಪ ತೀರಾ ಕಳಪೆ ಪ್ರದರ್ಶನವನ್ನು ನೀಡುತ್ತಿದ್ದಾರೆ.
ಈ ನಡುವೆ, ರಾಬಿನ್ ಉತ್ತಪ್ಪ ವಿರುದ್ಧ ಐಸಿಸಿ ನಿಯಮ ಉಲ್ಲಂಘಿಸಿದ್ದಾರೆ. ಚೆಂಡಿಗೆ ಎಂಜಲು ಬಳಸುವ ಮೂಲಕ ಐಸಿಸಿ ನಿಯವನ್ನು ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಅವರು ಚೆಂಡಿಗೆ ಎಂಜಲು ಬಳಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ಕೆಕೆಆರ್ ವಿರುದ್ಧದ ಪಂದ್ಯದ ಮೂರನೇ ಓವರ್ ನಲ್ಲಿ ಜಯದೇವ್ ಉನಾದ್ಕಟ್‍ಗೆ ಚೆಂಡನ್ನು ನೀಡುವ ಮುನ್ನ ರಾಬಿನ್ ಉತ್ತಪ್ಪ ಅವರು ಎಂಜಲು ಬಳಸಿ ಚೆಂಡಿನ ಹೊಳಪು ಕಮ್ಮಿ ಮಾಡುವ ಪ್ರಯತ್ನ ಮಾಡಿದ್ದರು. ಇದು ಅಭ್ಯಾಸ ಬಲದಿಂದ ಮಾಡಿದ್ರೂ ಕೂಡ ಇದೀಗ ಐಸಿಸಿ ನಿಯಮಕ್ಕೆ ವಿರುದ್ಧವಾಗಿದೆ.
ಕೋವಿಡ್ ವೈರಸ್ ನಿಂದಾಗಿ ಐಸಿಸಿ ಹೊಸ ನಿಯಮವನ್ನು ಜಾರಿಗೆ ತಂದಿದೆ. ಕೋವಿಡ್ ಮಾರ್ಗಸೂಚಿಯ ಪ್ರಕಾರ ಆಟಗಾರರು ಚೆಂಡಿಗೆ ಎಂಜಲು ಬಳಸಬಾರದು ಅಂತ ಎಚ್ಚರಿಕೆಯನ್ನು ನೀಡಿದೆ. ಈಗಾಗಲೇ ಬಿಸಿಸಿಐ ಕೋವಿಡ್ ಮಾರ್ಗಸೂಚಿಯ ಪ್ರಕಾರ ಜೈವಿಕ ಸುರಕ್ಷತೆಯೊಂದಿಗೆ ಟೂರ್ನಿಯನ್ನು ಆಯೋಜನೆ ಮಾಡುತ್ತಿದೆ.