ಐಪಿಎಲ್ 2020- ಸಿಎಸ್ಕೆಯ ರುತುರಾಜ್ ಗಾಯಕ್ವಾಡ್ ಗೆ ಮತ್ತೆರಡು ಕೋವಿಡ್ ಟೆಸ್ಟ್…!
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್ ಮೆನ್ ರುತುರಾಜ್ ಗಾಯಕ್ವಾಡ್ ಅವರು 2020ರ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ.
ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ ಅವರು ಇನ್ನೂ ಎರಡು ಪರೀಕ್ಷೆಗೆ ಒಳಪಡಬೇಕಿದೆ. ಭಾನುವಾರ ಮೊದಲ ಪರೀಕ್ಷೆ ನಡೆದಿದ್ದು, ಸೋಮವಾರ ಇನ್ನೊಂದು ಪರೀಕ್ಷೆ ನಡೆಯಲಿದೆ. ಹೀಗಾಗಿ ರುತುರಾಜ್ ಅವರು ಉದ್ಘಾಟನಾ ಪಂದ್ಯ ಸೇರಿದಂತೆ ಆರಂಭದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ಯುಎಇ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಹಾಗೂ 11 ಸಿಬ್ಬಂದಿಗಳು ಕೋವಿಡ್ ಸೋಂಕಿಗೆ ಒಳಪಟ್ಟಿದ್ದರು. ಇದೀಗ 11 ಸಿಬ್ಬಂದಿಗಳು ಮತ್ತು ದೀಪಕ್ ಚಾಹರ್ ಅವರು ಜೈವಿಕ ಸುರಕ್ಷತೆಗೆ ಸೇರಿಕೊಂಡಿದ್ದಾರೆ.
ಕೋವಿಡ್ ಮಾರ್ಗಸೂಚಿಯ ಪ್ರಕಾರ ರುತುರಾಜ್ ಅವರು ಎರಡು ಟೆಸ್ಟ್ ಗಳಲ್ಲಿ ನೆಗೆಟಿವ್ ಬಂದ ಮೇಲೆ ಅವರು ಒಂದು ವಾರಗಳ ಬಳಿಕ ತಂಡವನ್ನು ಸೇರಿಕೊಳ್ಳಲಿದ್ದಾರೆ. ಇನ್ನುಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕೋವಿಡ್ ಆತಂಕದಿಂದ ದೂರವಾಗಿದ್ದು ಕಠಿಣ ಅಭ್ಯಾಸವನ್ನು ನಡೆಸುತ್ತಿದೆ.
https://youtu.be/_st-YDZlTCE?t=27
ಸೆಪ್ಟಂಬರ್ 19ರಂದು ನಡೆಯಲಿರುವ 2020ರ ಐಪಿಎಲ್ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಕಾದಾಟ ನಡೆಸಲಿವೆ.
ಚೆನ್ನೈ ತಂಡಕ್ಕೆ ಸುರೇಶ್ ರೈನಾ ಅವರ ಅಲಭ್ಯತೆ ಕಾಡುವ ಸಾಧ್ಯತೆ ಇದೆ. ಸುರೇಶ್ ರೈನಾ ಚೆನ್ನೈ ತಂಡದ ಪ್ರಮುಖ ಆಟಗಾರನಾಗಿದ್ದರು. ಆದ್ರೆ ವೈಯಕ್ತಿಕ ಕಾರಣದಿಂದ ರೈನಾ ಅವರು ತಂಡದಿಂದ ಹೊರನಡೆದಿದ್ದರು. ಇದೀಗ ಮತ್ತೆ ತಂಡವನ್ನು ಸೇರಿಕೊಳ್ಳುವ ಇರಾದೆಯಲ್ಲಿದ್ರೂ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮ್ಯಾನೇಜ್ ಮೆಂಟ್ ಇನ್ನೂ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ.