ಐಪಿಎಲ್ 2020 – ಎರಡನೇ ಸೂಪರ್ ಓವರ್ ನಲ್ಲಿ ಕಿಂಗ್ಸ್ ಇಲೆವೆನ್ ಗೆ ರೋಚಕ ಗೆಲುವು
ಒಂದಲ್ಲ… ಎರಡಲ್ಲ… ಮೂರು ಬಾರಿ… ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದಂತಹ ಪಂದ್ಯ.
ನಿಗದಿತ ಓವರ್ ನ ಪಂದ್ಯ ಟೈ… ಮೊದಲ ಸೂಪರ್ ಓವರ್ ಟೈ…
ಅಬ್ಬಾ… ಅದ್ಭುತವಾದ ಪಂದ್ಯ. ಎರಡನೇ ಸೂಪರ್ ಓವರ್ ಕೂಡ ರೋಮಾಂಚನಗೊಳ್ಳುವಂತೆ ಮಾಡಿದ್ದ ಪಂದ್ಯ.
ಕೊನೆಗೂ ಮುಂಬೈ ಇಂಡಿಯನ್ಸ್ ವಿರುದ್ಧ ಕಿಂಗ್ಸ್ ಇಲೆವೆನ್ ತಂಡಕ್ಕೆ ಅಮೋಘ ಜಯ ಸಿಕ್ಕಿತ್ತು.
ಹಾಗೇ ನೋಡಿದ್ರೆ ಕಿಂಗ್ಸ್ ಇಲೆವೆನ್ ತಂಡಕ್ಕೆ ಗೆಲುವು ಮುನಿಸಿಕೊಂಡಂತೆ ಇತ್ತು.
ಕೊನೆಗೂ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡ ಕಿಂಗ್ಸ್ ಇಲೆವೆನ್ ತಂಡ ಐಪಿಎಲ್ ಟೂರ್ನಿಯಲ್ಲಿ ಎರಡನೇ ಗೆಲುವನ್ನು ದಾಖಲಿಸಿಕೊಂಡಿತ್ತು.
ದುಬೈ ನಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ನಲ್ಲಿ ಆರು ವಿಕೆಟ್ ನಷ್ಟಕ್ಕೆ 176 ರನ್ ದಾಖಲಿಸಿತು.
ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ 9 ರನ್ ಗೆ ಔಟಾದ್ರು. ಮತ್ತೊಂದೆಡೆ ಸೂರ್ಯಕುಮಾರ್ ಯಾದವ್ ಶೂನ್ಯ ಸುತ್ತಿದ್ರು.
ಹಾಗೇ ಇಶಾನ್ ಕಿಶಾನ್ 7 ರನ್ ಗೆ ಸೀಮಿತವಾದ್ರು,.
ಮತ್ತೊಂದೆಡೆ ಕ್ವಿಂಟನ್ ಡಿ ಕಾಕ್ ಅವರು 43 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಆಕರ್ಷಕ 53 ರನ್ ದಾಖಲಿಸಿದ್ರು.
ಹಾಗೇ ಕೃನಾಲ್ ಪಾಂಡ್ಯ 30 ಎಸೆತಗಳಲ್ಲಿ 34 ರನ್ ಸಿಡಿಸಿ ತಂಡದ ರನ್ ಗತಿಯನ್ನು ಏರಿಸಿದ್ರು.
ಹಾರ್ದಿಕ್ ಪಾಂಡ್ಯ ಆರ್ಭಟ 8 ರನ್ ಗೆ ಕೊನೆಗೊಂಡಿತ್ತು.
ಕೊನೆಯ ಕ್ಷಣಗಳಲ್ಲಿ ಸ್ಫೋಟಕ ಆಟವನ್ನಾಡಿದ್ದು ಕಿರಾನ್ ಪೊಲಾರ್ಡ್ ಮತ್ತು ನಥಾನ್ ಕಲ್ಟರ್ ನೇಲ್
ಪೊಲಾರ್ಡ್ 12 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡ್ರಿಯ ನೆರವಿನಿಂದ ಅಜೇಯ 34 ರನ್ ಗಳಿಸಿದ್ರು.
ಹಾಗೇ ನಥಾನ್ ಕಲ್ಟರ್ ನೇಲ್ 12 ಎಸೆತಗಳಲ್ಲಿ 24 ರನ್ ದಾಖಲಿಸಿದ್ರು.
ಮಹಮ್ಮದ್ ಶಮಿ ಮತ್ತು ಆರ್ಶಾದೀಪ್ ಸಿಂಗ್ ತಲಾ ಎರಡು ವಿಕೆಟ್ ಉರುಳಿಸಿದ್ರು.
ಸವಾಲನ್ನು ಬೆನ್ನಟ್ಟಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಸ್ಥಿರ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯ್ತು.
ಮಯಾಂಕ್ ಆಗರ್ ವಾಲ್ 24 ರನ್ ಗಳಿಸಿ ಹೋರಾಟವನ್ನು ಮುಗಿಸಿದ್ರು.
ಹಾಗೇ ಕ್ರಿಸ್ ಗೇಲ್ ಮತ್ತು ನಿಕೊಲಾಸ್ ಪೂರನ್ 24 ರನ್‍ಗೆ ಸೀಮಿತವಾದ್ರು.
ಗ್ಲೇನ್ ಮ್ಯಾಕ್ಸ್ ವೆಲ್ ಅವರು ಶೂನ್ಯ ಸುತ್ತಿ ಮತ್ತೊಮ್ಮೆ ತನ್ನ ಆಯ್ಕೆಯನ್ನು ಪ್ರಶ್ನೆ ಮಾಡುವಂತೆ ಮಾಡಿದ್ದರು.
ಇನ್ನೊಂದೆಡೆ ಲೋಕೇಶ್ ರಾಹುಲ್ ಆಕರ್ಷಕ 77 ರನ್ ಗಳಿಸಿ ತಂಡವನ್ನು ಗೆಲುವಿನ ಸಮೀಪಕ್ಕೆ ತಂದ್ರು.
ಆದ್ರೆ ಬೂಮ್ರಾ ಅವರ ಎಸೆತವನ್ನು ಅರ್ಥ ಮಾಡಿಕೊಳ್ಳಲು ವಿಫಲರಾದ್ರು.
ಕೊನೆಯ ಕ್ಷಣದಲ್ಲಿ ದೀಪಕ್ ಹೂಡ ಮತ್ತು ಕ್ರಿಸ್ ಜೋರ್ಡಾನ್ ಅವರು ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಯಶಸ್ವಿಯಾದ್ರು.
ದೀಪಕ್ ಹೂಡಾ ಅಜೇಯ 23 ರನ್ ಮತ್ತು ಕ್ರಿಸ್ ಜೊರ್ಡಾನ್ ಅಜೇಯ 13 ರನ್ ಗಳಿಸಿದ್ರು.
ಜಸ್ಪ್ರಿತ್ ಬೂಮ್ರಾ ಮೂರು ವಿಕೆಟ್ ಪಡೆದ್ರೆ, ರಾಹುಲ್ ಚಾಹರ್ 2 ವಿಕೆಟ್ ಕಬಳಿಸಿದ್ರು.
ಇನ್ನೂ ಸೂಪರ್ ಓವರ್ ನಲ್ಲಿ ನಾಟಕೀಯ ಅಂತ್ಯಗೊಂಡು ಕಿಂಗ್ಸ್ ಇಲೆವೆನ್ ತಂಡ ರೋಚಕ ಜಯ ಸಾಧಿಸಿತ್ತು.
ಸೂಪರ್ ಓವರ್ ನಲ್ಲಿ ಜಸ್ಪ್ರಿತ್ ಬೂಮ್ರಾ ಮತ್ತು ಮಹಮ್ಮದ್ ಶಮಿ ಅದ್ಭುತ ಬೌಲಿಂಗ್ ಮಾಡಿ ಮೊದಲ ಸೂಪರ್ ಓವರ್ ಅನ್ನು ಟೈಗೊಳ್ಳುವಂತೆ ಮಾಡಿದ್ದರು.
ಆದ್ರೆ ಎರಡನೇ ಸೂಪರ್ ಓವರ್ ನಲ್ಲಿ ಕ್ರಿಸ್ ಗೇಲ್ ಮತ್ತು ಮಯಾಂಕ್ ಸ್ಪೋಟಕ ಆಟಕ್ಕೆ ಮುಂಬೈ ಇಂಡಿಯನ್ಸ್ ಸೋಲು ಅನುಭವಿಸಿತ್ತು.