ಐಪಿಎಲ್ 2020- 22ನೇ ಪಂದ್ಯದಲ್ಲಿ ಕಿಂಗ್ಸ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ಮುಖಾಮುಖಿ
ಐಪಿಎಲ್ ಟೂರ್ನಿಯ 22ನೇ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್ ರೈಸರ್ಸ್ ಹೈದ್ರಬಾದ್ ತಂಡಗಳು ಕಾದಾಟ ನಡೆಸಲಿವೆ.
ಈಗಾಗಲೇ ಉಭಯ ತಂಡಗಳು ಆಡಿರುವ ಐದು ಪಂದ್ಯಗಳಲ್ಲಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿವೆ. ಮೂರು ಪಂದ್ಯಗಳನ್ನು ಸೋತಿವೆ. ಹೀಗಾಗಿ ಎರಡು ತಂಡಗಳು ಇಂದಿನ ಪಂದ್ಯದಲ್ಲಿ ಗೆಲುವನ್ನು ಎದುರು ನೋಡುತ್ತಿವೆ.
ಮುಖ್ಯವಾಗಿ ಕಿಂಗ್ಸ್ ಇಲೆವೆನ್ ತಂಡ ಗೆಲುವಿನ ಟ್ರ್ಯಾಕ್‍ಗೆ ಮರಳಬೇಕಿದೆ. ಸತತ ಎರಡು ಪಂದ್ಯಗಳನ್ನು ಗೆದ್ದು ಬೀಗುತ್ತಿದ್ದ ಕಿಂಗ್ಸ್ ಪಂಜಾಂಬ್ ತಂಡ ಹಾಗೇ ಸತತ ಮೂರು ಪಂದ್ಯಗಳನ್ನು ಸೋತಿರುವುದು ತಂಡದ ಆತ್ಮವಿಶ್ವಾಸಕ್ಕೆ ಪೆಟ್ಟು ಬಿದ್ದಿದೆ.
ಕಿಂಗ್ಸ್ ತಂಡದ ಬ್ಯಾಟ್ಸ್ ಮೆನ್ ಗಳು ಮಧ್ಯಮ ಕ್ರಮಾಂಕದ ವೈಫಲ್ಯವನ್ನು ಅನುಭವಿಸುತ್ತಿದೆ. ಹೀಗಾಗಿ ಇಂದಿನ ಪಂದ್ಯಕ್ಕೆ 11 ರಬಳಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಗ್ಲೇನ್ ಮ್ಯಾಕ್ಸ್ ವೆಲ್ ಬದಲು ಕ್ರಿಸ್ ಗೇಲ್ 11 ರ ಬಳಗದಲ್ಲಿ ಕಾಣಿಸಿಕೊಳ್ಳಬಹುದು.
ಹಾಗೇ ಕರುಣ್ ನಾಯರ್ ಬದಲು ಮನದೀಪ್ ಸಿಂಗ್ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಬಹುದು. ಮತ್ತೊಂದೆಡೆ ಮುಜೀಬ್ ಉರ್ ರಹಮಾನ್ ಕೂಡ ಆಡುವ ಬಳಗದಲ್ಲಿ ಅವಕಾಶ ಪಡೆಯಬಹುದು.
ಕಿಂಗ್ಸ್ ಪಂಜಾಬ್ ತಂಡ –
ಕೆ.ಎಲ್. ರಾಹುಲ್ (ನಾಯಕ), ಕ್ರಿಸ್ ಗೇಲ್, ಮಯಾಂಕ್ ಅಗರ್ ವಾಲ್, ಮನದೀಪ್ ಸಿಂಗ್, ನಿಕೊಲಾಸ್ ಪೂರನ್, ಸಫ್ರಾಝ್ ಖಾನ್, ಹರ್ ಪ್ರೀತ್ ಬಾರ್/ ಮುರುಗನ್ ಅಶ್ವಿನ್, ಮುಜೀಬ್ ಉರ್ ರಹಮಾನ್, ರವಿ ಬಿಸ್ನೋಯ್, ಮಹಮ್ಮದ್ ಶಮಿ, ಶೆಲ್ಡನ್ ಕಾಟ್ರೆಲ್/ ಹರ್ಡೂಸ್ ವಿಜಿಯೊನ್.
ಇನ್ನು ಹೈದ್ರಬಾದ್ ತಂಡದಲ್ಲಿ ಭುವನೇಶ್ವರ್ ಟೂರ್ನಿಯಿಂದಲೇ ಹೊರನಡೆದಿರುವುದು ತಂಡಕ್ಕೆ ದೊಡ್ಡ ಪೆಟ್ಟು ನೀಡಿದಂತಾಗಿದೆ.
ಭುವಿ ಬದಲು ಸಂದೀಪ್ ಶರ್ಮಾ ತಂಡದಲ್ಲಿ ಸ್ಥಾನ ಪಡೆದುಕೊಳ್ಳಬಹುದು. ಇನ್ನುಳಿದಂತೆ ತಂಡದಲ್ಲಿ ಯಾವುದೇ ಬದಲಾವಣೆ ಆಗುವ ಸಾಧ್ಯತೆಗಳಿಲ್ಲ.
ಸನ್ ರೈಸರ್ಸ್ ಹೈದ್ರಬಾದ್ ತಂಡ
ಡೇವಿಡ್ ವಾರ್ನರ್ (ನಾಯಕ), ಜೋನಿ ಬೇರ್ ಸ್ಟೋ, ಮನೀಷ್ ಪಾಂಡೆ, ಕೇನ್ ವಿಲಿಯಮ್ಸನ್, ಪ್ರಿಯಮ್ ಗರ್ಗ್, ಅಭಿಷೇಕ್ ಶರ್ಮಾ, ಅಬ್ದುಲ್ ಸಮಾದ್, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ. ನಟರಾಜನ್, ಸಿದ್ಧಾರ್ಥ್ ಕೌಲ್ / ಖಲೀಲ್ ಅಹಮ್ಮದ್.
https://youtu.be/tQjvknZGuoY?t=3