ಮಂಬೈ ವಿರುದ್ಧ ಆರ್ ಆರ್ ಮುಖದಲ್ಲಿ ಗೆಲುವಿನ ಮಂದಹಾಸ ಮೂಡಿಸಿದ ಸಂಜು ಮತ್ತು ಸ್ಟೋಕ್ಸ್..
ಬಲಿಷ್ಠ ಮುಂಬೈ ಇಂಡಿಯನ್ಸ್ ಗೆ ಶಾಕ್ ನೀಡಿದ ರಾಜಸ್ತಾನ ರಾಯಲ್ಸ್..
ಬೆನ್ ಸ್ಟೋಕ್ಸ್ ಸ್ಟ್ರೋಕ್ಗೆ ಬೆಚ್ಚಿ ಬಿದ್ದ ಮುಂಬೈ ಬೌಲರ್ ಗಳು
ಮುಂಬೈ ವಿರುದ್ಧ ಸವಾರಿ ನಡೆಸಿದ ಸಂಜು ಸಾಮ್ಸನ್..!
ಸ್ಟೋಕ್ಸ್ ಆಟದ ಮುಂದೆ ಮಂಕಾದ ಹಾರ್ದಿಕ್ ಪಾಂಡ್ಯ ಅಬ್ಬರ
ಇದು ಐಪಿಎಲ್ ಟೂರ್ನಿಯ 45ನೇ ಪಂದ್ಯದ ಹೈಲೈಟ್ಸ್
ಅಬುಧಾಬಿಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಆದ್ರೆ ಮುಂಬೈ ಇಂಡಿಯನ್ಸ್ ತಂಡದ ಲೆಕ್ಕಚಾರವನ್ನು ಆರ್ಚೆರ್ ಬುಡಮೇಲು ಮಾಡಿದ್ದರು.
ಕ್ವಿಂಟನ್ ಡಿಕಾಕ್ ಆರು ರನ್ ಗೆ ಸೀಮಿತವಾದ್ರು. ಆದ್ರೆ ಇಶಾನ್ ಕಿಶನ್ ಮತ್ತು ಸೂರ್ಯಕುಮಾರ್ ಯಾದವ್ ಎರಡನೇ ವಿಕೆಟ್ ಗೆ 83 ರನ್ ಕಲೆ ಹಾಕಿದ್ರು.
ಇಶಾನ್ ಕಿಶನ್ 37 ರನ್ ಗಳಿಸಿದ್ರೆ, ಸೂರ್ಯಕುಮಾರ್ ಯಾದವ್ 40 ರನ್ ಸಿಡಿಸಿದ್ರು.
ಆದ್ರೆ ಹಂಗಾಮಿ ನಾಯಕ ಪೊಲಾರ್ಡ್ 6 ರನ್ ಗೆ ತನ್ನ ಹೋರಾಟವನ್ನು ಮುಗಿಸಿದ್ರು.
ಇನ್ನೊಂದೆಡೆ ಸೌರಬ್ ತಿವಾರಿ 34 ರನ್ ದಾಖಲಿಸಿದ್ರು.
ಆದ್ರೆ ರಾಜಸ್ತಾನ ರಾಯಲ್ಸ್ ಬೌಲರ್ ಗಳನ್ನು ಬೆಚ್ಚಿ ಬೀಳಿಸಿದ್ದು ಹಾರ್ದಿಕ್ ಪಾಂಡ್ಯ.
ಹಾರ್ದಿಕ್ ಪಾಂಡ್ಯ ಮನಬಂದಂತೆ ಬ್ಯಾಟ್ ಬೀಸಿದ್ರು. ಕೇವಲ 21 ಎಸೆತಗಳಲ್ಲಿ ಏಳು ಸಿಕ್ಸರ್ ಮತ್ತು ಎರಡು ಬೌಂಡರಿಗಳ ಸಹಾಯದಿಂದ ಅಜೇಯ 60 ರನ್ ದಾಖಲಿಸಿದ್ರು.
ಅಂತಿಮವಾಗಿ ಮುಂಬೈ ಇಂಡಿಯನ್ಸ್ ತಂಡ ಐದು ವಿಕೆಟ್ ಗೆ 195 ರನ್ ದಾಖಲಿಸಿತ್ತು.
ಕಠಿಣ ಸವಾಲನ್ನು ಬೆನ್ನಟ್ಟಿದ್ದ ರಾಜಸ್ತಾನ ರಾಯಲ್ಸ್ ತಂಡ ಆರಂಭದಲ್ಲೇ ಆಘಾತ ಅನುಭವಿಸಿತ್ತು.
ರಾಬಿನ್ ಉತ್ತಪ್ಪ 13 ರನ್ ಗಳಿಸಿದ್ರೆ, ಸ್ಟೀವನ್ ಸ್ಮಿತ್ 11 ರನ್ ಗೆ ಔಟಾದ್ರು.
ನಂತರ ಮುಂಬೈ ಇಂಡಿಯನ್ಸ್ ಬೌಲರ್ ಗಳನ್ನು ಕಾಡಿದ್ದು ಬೆನ್ ಸ್ಟೋಕ್ಸ್ ಮತ್ತು ಸಂಜು ಸಾಮನ್ಸ್.
ಇವರಿಬ್ಬರು ಮೂರನೇ ವಿಕೆಟ್ ಗೆ 152 ರನ್ ಗಳಿಸಿ ತಂಡಕ್ಕೆ ರೋಚಕ ಜಯ ಒದಗಿಸಿದ್ರು.
ಜವಾಬ್ದಾರಿಯ ಜೊತೆಗೆ ಮಿಂಚಿನ ಆಟವನ್ನಾಡಿದ್ದ ಬೆನ್ ಸ್ಟೋಕ್ಸ್ ಅವರು 60 ಎಸೆತಗಳಲ್ಲಿ 14 ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 107 ರನ್ ಸಿಡಿಸಿದ್ರು.
ಮತ್ತೊಂದೆಡೆ ಸಂಜು ಸಾಮ್ಸನ್ ಟೀಕೆ ಮಾಡಿದವರಿಗೆ ತಕ್ಕ ಉತ್ತರವನ್ನು ನೀಡಿದ್ರು.
31 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್ ಗಳ ಸಹಾಯದಿಂದ ಅಜೇಯ 54 ರನ್ ದಾಖಲಿಸಿದ್ರು.
ಅದ್ಭುತ ಬ್ಯಾಟಿಂಗ್ ಮೂಲಕ ಗಮನ ಸೆಳೆದ ಬೆನ್ ಸ್ಟೋಕ್ಸ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದ್ರು.