ಐಪಿಎಲ್ 2020- ಭರ್ಜರಿ ಜಯದೊಂದಿಗೆ ಪ್ಲೇ ಆಫ್‍ಗೆ ಎಂಟ್ರಿ ಪಡೆದ ಎಸ್ ಆರ್ ಎಚ್
ಐಪಿಎಲ್ ಟೂರ್ನಿಯ 56ನೇ ಪಂದ್ಯ. ಎಸ್ ಆರ್ ಎಚ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯ
ಮುಂಬೈಗೆ ಔಪಚಾರಿಕ ಪಂದ್ಯ. ಆದ್ರೆ ಎಸ್ ಆರ್ ಎಚ್‍ಗೆ ಮಾಡು ಇಲ್ಲವೇ ಮಡಿ ಪಂದ್ಯ.
ಪ್ಲೇ ಆಫ್ ಗೆ ಎಂಟ್ರಿ ಪಡೆಯಲೇಬೇಕಾಗಿದ್ದ ಎಸ್ ಆರ್ ಎಚ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡವನ್ನು 10 ವಿಕೆಟ್ ಗಳಿಂದ ಪರಾಭವಗೊಳಿಸಿತು.
ಟಾಸ್ ಗೆದ್ದ ಸನ್ ರೈಸರ್ಸ್ ಹೈದ್ರಬಾದ್ ತಂಡ ಮೊದಲು ಫೀಲ್ಟಿಂಗ್ ಆಯ್ಕೆ ಮಾಡಿಕೊಂಡಿತ್ತು.
ಗಾಯದಿಂದ ಚೇತರಿಸಿಕೊಂಡು ಮತ್ತೆ ತಂಡದ ಸಾರಥ್ಯ ವಹಿಸಿದ್ದ ರೋಹಿತ್ ಶರ್ಮಾ ಹಾಗೂ ಅವರ ಬಳಗಕ್ಕೆ ಎಸ್ ಆರ್ ಎಚ್ ಬೌಲರ್ ಗಳು ಸವಾಲಾಗಿ ಪರಿಣಮಿಸಿದ್ರು.
ಆರಂಭದಲ್ಲೇ ಎಸ್ ಆರ್ ಎಚ್ ವೇಗಿ ಸಂದೀಪ್ ಶರ್ಮಾ ಅವರು ಮಾರಕವಾಗಿ ಕಾಡಿದ್ರು. ಸಂದೀಪ್ ಶರ್ಮಾ ಅವರ ಅದ್ಭುತ ದಾಳಿಗೆ ರೋಹಿತ್ ಶರ್ಮಾ 4 ರನ್ ಹಾಗೂ ಕ್ವಿಂಟನ್ ಡಿಕಾಕ್ ಅವರು 25 ರನ್ ಗಳಿಸಿ ಬಲಿಯಾದ್ರು.
ಇನ್ನು ಆಂಗ್ರಿ ಯಂಗ್ ಮ್ಯಾನ್ ಸೂರ್ಯ ಕುಮಾರ್ ಯಾದವ್ 36 ರನ್ ಗಳಿಸಿ ಔಟಾದ್ರು.
ಹಾಗೇ ಇಶಾನ್ ಕಿಶಾನ್ ಕೂಡ 33 ರನ್ ದಾಖಲಿಸಿ ತನ್ನ ಹೋರಾಟವನ್ನು ಮುಗಿಸಿದ್ರು.
ಕೃನಾಲ್ ಪಾಂಡ್ಯ ಶೂನ್ಯ ಸುತ್ತಿದ್ರೆ, ಸೌರಭ್ ತಿವಾರಿ 1 ರನ್ ಗೆ ಸೀಮಿತವಾದ್ರು.
ಈ ನಡುವೆ ಕಿರಾನ್ ಪೊಲಾರ್ಡ್ ಅವರು 25 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳ ಸಹಾಯದಿಂದ 41 ರನ್ ಸಿಡಿಸಿದ್ರು. ಪರಿಣಾಮ ಮುಂಬೈ ಇಂಡಿಯನ್ಸ್ ತಂಡ 20 ಓವರ್ ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 149 ರನ್ ದಾಖಲಿಸಿತ್ತು.
ಎಸ್ ಆರ್ ಎಚ್ ತಂಡದ ಪರ ಸಂದೀಪ್ ಶರ್ಮಾ 34ಕ್ಕೆ ಮೂರು ವಿಕೆಟ್ ಕಬಳಿಸಿದ್ರು. ಹಾಗೇ ಜೇಸನ್ ಹೋಲ್ಡರ್ 2 ವಿಕೆಟ್ ಹಾಗೂ ಶಹಬಾಝ್ ನದೀಮ್ 2 ವಿಕೆಟ್ ಪಡೆದ್ರು.
ಇನ್ನು ಮುಂಬೈ ಇಂಡಿಯನ್ಸ್ ಪ್ರಮುಖ ಬೌಲರ್ ಗಳಾದ ಜಸ್ಪ್ರಿತ್ ಬೂಮ್ರಾ ಮತ್ತು ಟ್ರೆಂಟ್ ಬೌಲ್ಟ್ ಅವರಿಗೆ ವಿಶ್ರಾಂತಿ ನೀಡಿತ್ತು.
ಇದ್ರ ಲಾಭ ಪಡೆದ ಎಸ್ ಆರ್ ಎಚ್ ತಂಡದ ಆರಂಭಿಕ ಹಾಗೂ ನಾಯಕ ಡೇವಿಡ್ ವಾರ್ನರ್ ಮತ್ತು ವೃದ್ದಿಮಾನ್ ಸಾಹ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು.
ಮುಂಬೈ ಬೌಲಿಂಗ್ ದಾಳಿಗೆ ದಿಟ್ಟ ಉತ್ತರವನ್ನು ನೀಡಿದ ವಾರ್ನರ್ ಮತ್ತು ಸಾಹ ಅವರು ಜವಾಬ್ದಾರಿಯುತವಾದ ಆಟವನ್ನಾಡಿದ್ರು.
ಅಲ್ಲದೆ ಮೊದಲ ವಿಕೆಟ್ ಗೆ ಅಜೇಯ 151 ರನ್ ಪೇರಿಸಿ ತಂಡದ ಭರ್ಜರಿ ಗೆಲುವಿನ ರೂವಾರಿಗಳಾದ್ರು.
ನಾಯಕ ಡೇವಿಡ್ ವಾರ್ನರ್ 58 ಎಸೆತಗಳಲ್ಲಿ 10 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಅಜೇಯ 85 ರನ್ ದಾಖಲಿಸಿದ್ರು.
ಇನ್ನೊಂದೆಡೆ ವೃದ್ದಿಮಾನ್ ಸಾಹ ಅವರು 45 ಎಸೆತಗಳಲ್ಲಿ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಸಹಾಯದಿಂದ ಅಜೇಯ 58 ರನ್ ಗಳಿಸಿದ್ರು.
ಟೂರ್ನಿಯಲ್ಲಿ ಏಳನೇ ಗೆಲುವನ್ನು ದಾಖಲಿಸಿದ್ದ ಎಸ್ ಆರ್ ಎಚ್ ತಂಡ ಪ್ಲೇ ಆಫ್‍ಗೆ ಎಂಟ್ರಿಪಡೆಯಿತ್ತು. ಹೀಗಾಗಿ ಕೆಕೆಆರ್ ತಂಡದ ಪ್ಲೇ ಆಫ್ ಕನಸು ಭಗ್ನಗೊಂಡಿತ್ತು.
ಇದೀಗ ಪ್ಲೇ ಆಫ್ ನಲ್ಲಿ ಎಸ್ ಆರ್ ಎಚ್ ಮತ್ತು ಆರ್ ಸಿಬಿ ತಂಡಗಳು ಕಾದಾಟ ನಡೆಸಲಿವೆ.








