ಐಪಿಎಲ್ ಮೊದಲ 3 ಪಂದ್ಯಗಳ ಅಂಕಿ ಅಂಶಗಳ ಪ್ರಕಾರ ವಿರಾಟ್ ಸಾಧನೆ ಕಳಪೆ..ಕಳಪೆ..ಕಳಪೆ..!
ವಿರಾಟ್ ಕೊಹ್ಲಿ ಮನುಷ್ಯ.. ಮೆಷಿನ್ ಅಲ್ಲ. ಪ್ರತಿ ಪಂದ್ಯದಲ್ಲೂ ರನ್ ಗಳಿಸುತ್ತನೇ ಇರಬೇಕು ಎಂಬುದು ಅವರ ಅಭಿಮಾನಿಗಳ ಆಸೆ. ಅಭಿಮಾನಿಗಳ ಆಸೆಯನ್ನು ವಿರಾಟ್ ನಿರಾಸೆ ಮೂಡಿಸಿದ್ದು ಬಹುತೇಕ ಕಡಿಮೆ. ಸ್ಥಿರ ಪ್ರದರ್ಶನ ನೀಡುತ್ತಲೇ ದಾಖಲೆ ಮೇಲೆ ದಾಖಲೆ ಬರೆದಿರುವ ವಿರಾಟ್ ಕೊಹ್ಲಿಗೆ ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದ ಮೂರು ಪಂದ್ಯಗಳಲ್ಲಿ ಭಾರಿ ನಿರಾಸೆ ಮೂಡಿಸಿದ್ದಾರೆ.
ಹೌದು, ವಿರಾಟ್ ತನ್ನ 13 ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಈ ರೀತಿಯ ವೈಫಲ್ಯ ಎಂದೂ ಕೂಡ ಅನುಭವಿಸಿಲ್ಲ. ಸದ್ಯದ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ಮೂರು ಪಂದ್ಯಗಳನ್ನು ಆಡಿದ್ದಾರೆ. ಈ ಪಂದ್ಯಗಳಲ್ಲಿ ಕ್ರಮವಾಗಿ 14, 1 ಮತ್ತು ಮೂರು ರನ್ ಗಳಿಸಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರವನ್ನುಂಟು ಮಾಡಿದ್ರೆ, ಕ್ರಿಕೆಟ್ ಪಂಡಿತರು ವಿರಾಟ್ ಬ್ಯಾಟಿಂಗ್ ವೈಖರಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ,
ಇನ್ನು ಅಂಕಿ ಅಂಶಗಳ ಪ್ರಕಾರ ವಿರಾಟ್ ಕೊಹ್ಲಿ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಲ್ಲಿ ಎಡವಿ ಬಿದ್ದಿರೋದು ಹೆಚ್ಚು. ಆದ್ರೆ ಈ ಮಟ್ಟದ ವೈಫಲ್ಯವನ್ನು ಅವರು ಎರಡನೇ ಬಾರಿ ಅನುಭವಿಸುತ್ತಿದ್ದಾರೆ. 2010 ಐಪಿಎಲ್ ಟೂರ್ನಿಯ ಮೊದಲ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ 18 ರನ್ ಗಳಿಸಿದ್ದರು. ಅದನ್ನು ಬಿಟ್ರೆ 2008ರ ಮೊದಲ ಮೂರು ಪಂದ್ಯಗಳಲ್ಲಿ 37 ರನ್, 2019ರ ಮೊದಲ ಮೂರು ಪಂದ್ಯಗಳಲ್ಲಿ 55 ರನ್ ಗಳಿಸಿದ್ದರು.
ಒಟ್ಟಾರೆಯಾಗಿ ವಿರಾಟ್ ಕೊಹ್ಲಿ ಒತ್ತಡಕ್ಕೆ ಸಿಲುಕಿದ್ದಾರೆ. ಬ್ಯಾಟಿಂಗ್ ಲಯ ಕಂಡುಕೊಳ್ಳಲು ಒದ್ದಾಟ ನಡೆಸುತ್ತಿದ್ದಾರೆ. ಆದ್ರೆ ನೆನಪಿಡಿ. ವಿರಾಟ್ ಕೊಹ್ಲಿ ಯಾವುದೇ ಹಂತದಲ್ಲೂ ಎದುರಾಳಿ ತಂಡಕ್ಕೆ ಅಪಾಯವನ್ನುಂಟು ಮಾಡಬಹುದು. ವಿರಾಟ್ ಪ್ರತಿಭೆ, ಸಾಮಥ್ರ್ಯದ ಬಗ್ಗೆ ಪ್ರಶ್ನೆ ಮಾಡೋಕೆ ಹೋದ್ರೆ ಬ್ಯಾಟ್ ನಿಂದಲೇ ಉತ್ತರ ನೀಡ್ತಾರೆ ಎಂಬುದನ್ನು ಮರೆಯುವ ಹಾಗಿಲ್ಲ.
ಕಳೆದ 13 ಐಪಿಎಲ್ ಟೂರ್ನಿಗಳ ಆರಂಭದ ಮೂರು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಸಾಧನೆಯ ಅಂಕಿ ಅಂಶ ಈ ರೀತಿ ಇದೆ.
ಕೃಪೆ- ಹಿಂದೂಸ್ತಾನ್ ಟೈಮ್ಸ್