ಐಪಿಎಲ್ 2021- ರಾಜಸ್ತಾನ ರಾಯಲ್ಸ್ ಗೆ ಆಘಾತ.. ಟೂರ್ನಿಯಲ್ಲಿ ಆಡುತ್ತಿಲ್ಲ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್..!

1 min read
benstockes ipl rajastan royals saakshatv

ಐಪಿಎಲ್ 2021- ರಾಜಸ್ತಾನ ರಾಯಲ್ಸ್ ಗೆ ಆಘಾತ.. ಟೂರ್ನಿಯಲ್ಲಿ ಆಡುತ್ತಿಲ್ಲ ಸ್ಟಾರ್ ಆಟಗಾರ ಬೆನ್ ಸ್ಟೋಕ್ಸ್..!

benstockes ipl rajastan royals saakshatvರಾಜಸ್ತಾನ ರಾಯಲ್ಸ್ ತಂಡಕ್ಕೆ ಮತ್ತೊಂದು ಆಘಾತವಾಗಿದೆ. 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ತಾನ ರಾಯಲ್ಸ್ ತಂಡ ನಾಲ್ಕು ರನ್ ಗಳಿಂದ ಪಂಜಾಬ್ ಕಿಂಗ್ಸ್ ತಂಡದ ವಿರುದ್ಧ ವಿರೋಚಿತ ಸೋಲು ಅನುಭವಿಸಿತ್ತು. ನಾಯಕ ಸಂಜು ಸಾಮ್ಸನ್ ಅವರ ಆಕರ್ಷಕ ಶತಕದ ನಡುವೆಯೂ ಸೋಲು ಅನುಭವಿಸಿದ್ದ ತಂಡಕ್ಕೆ ಅದೇ ಪಂದ್ಯದಲ್ಲಿ ಮತ್ತೊಂದು ಶಾಕ್ ಅನುಭವಿಸಿದೆ.

IPL 2021 Ben Stokes out of IPL with broken finger
ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಅವರು ಕೈಬೆರಳಿಗೆ ಗಾಯ ಮಾಡಿಕೊಂಡು ಐಪಿಎಲ್ ಟೂರ್ನಿಯಿಂದ ಹೊರನಡೆದಿದ್ದಾರೆ. ಬೆನ್ ಸ್ಟೋಕ್ಸ್ ಅವರು ಪಂಜಾಬ್ ಕಿಂಗ್ಸ್ ತಂಡದ ಕ್ರಿಸ್ ಗೇಲ್ ಅವರ ಕ್ಯಾಚ್ ಹಿಡಿದಾಗ ಬೆನ್ ಸ್ಟೋಕ್ಸ್ ಕೈ ಬೆರಳಿಗೆ ಗಂಭೀರವಾಗಿ ಗಾಯವಾಗಿದೆ.
ಬೆನ್ ಸ್ಟೋಕ್ಸ್ ಅವರು ಕೈಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಐಪಿಎಲ್ ಟೂರ್ನಿಯ ಇನ್ನುಳಿದ ಪಂದ್ಯಗಳನ್ನು ಆಡುತ್ತಿಲ್ಲ ಎಂದು ರಾಜಸ್ತಾನ ರಾಯಲ್ಸ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd