ಇನ್ಮುಂದೆ ಚೆನ್ನೈ ಪರ ಆಡುತ್ತೀನೋ ಇಲ್ವೋ ಗೊತ್ತಿಲ್ಲ : ಎಂ.ಎಸ್.ಧೋನಿ
ದುಬೈ : ಕೆಲ ದಿನಗಳಿಂದೆ ಚೆನ್ನೈನ ಚೆಪಾಕ್ ಅಂಗಳದಲ್ಲಿ ನನ್ನ ಕೊನೆಯ ಐಪಿಎಲ್ ಪಂದ್ಯವಾಡುತ್ತೇನೆ ಎಂದಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂ.ಎಸ್.ಧೋನಿ ಇದೀಗ ಅಚ್ಚರಿ ಹೇಳಿಕೆ ನೀಡಿ, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.
ಪಂಜಾಬ್ ವಿರುದ್ಧದ ಟಾಸ್ ವೇಳೆ ಎಂ.ಎಸ್.ಡಿ ಮಾತನಾಡುತ್ತಾ, ಇನ್ಮುಂದೆ ನನ್ನನ್ನು ಹಳದಿ ಜೆರ್ಸಿತೊಟ್ಟು ಚೆನ್ನೈ ಪರ ನೋಡುತ್ತಿರೋ ಇಲ್ಲವೋ ಗೊತ್ತಿಲ್ಲ ಎಂದು ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಮುಂದಿನ ವರ್ಷ ಮೆಗಾ ಆಕ್ಷನ್ ನಡೆಯಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಧೋನಿ ಈ ಮೇಲಿನ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಅವರೇ ಹೇಳಿದ್ದು, ಮುಂದಿನ ಐಪಿಎಲ್ ಆವೃತ್ತಿಗೆ 2 ಹೊಸ ತಂಡಗಳು ಸೇರ್ಪಡೆಗೊಳ್ಳುವುದರಿಂದಾಗಿ ಹಲವು ಬದಲಾವಣೆಗಳು ಸಂಭವಿಸಲಿದೆ. ಫ್ರಾಂಚೈಸಿಗಳು ಎಷ್ಟು ವಿದೇಶಿ ಆಟಗಾರರು ಮತ್ತು ಎಷ್ಟು ಭಾರತೀಯ ಆಟಗಾರರನ್ನು ಉಳಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ.
ಹಾಗಾಗಿ ಮುಂದಿನ ಐಪಿಎಲ್‍ನಲ್ಲಿ ಏನಾಗುತ್ತದೆ ಎಂಬುದನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.
ಧೋನಿಯ ಈ ರೀತಿಯ ಹೇಳಿಕೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಯಾಕೆಂದರೇ ಸದ್ಯ ಚೆನ್ನೈ ಟೀಮ್ ನಲ್ಲಿ ಇರುವವರ ಪೈಕಿ ರವೀಂದ್ರ ಜಡೇಜಾ, ಫಾಪ್ ಡುಪ್ಲಸೀಸ್, ರುತುರಾಜ್ ಗಾಯಕ್ವಾಡ್ ಅವರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಫಿಕ್ಸ್ ಆಗಿದೆ. ಇನ್ನುಳಿದಂತೆ ಇನ್ನೊಂದು ಸ್ಥಾನದಲ್ಲಿ ಯಾರನ್ನ ಉಳಿಸಿಕೊಳ್ಳುತ್ತಾರೆ ಅನ್ನೋ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಅದರಲ್ಲೂ ಧೋನಿ ಕೂಡ ಮೊದಲಿನ ಚಾರ್ಮ್ ಕಳೆದುಕೊಂಡಿರುವುದರಿಂದ ಹಾಗೂ ತಂಡದ ಮುಂದಿನ ಭವಿಷ್ಯದಿಂದ ಹೊಸ ನಾಯಕನ ಹುಡುಕಾಟದಲ್ಲೂ ಸಿಎಸ್ ಕೆ ಇರಬಹುದು.