ಐಪಿಎಲ್ 2021 ಪ್ರಾಯೋಜಕತ್ವ- ಡ್ರೀಮ್ ಇಲೆವೆನ್, ಅನ್ ಆಕಾಡೆಮಿ ನಡುವೆ ಸ್ಪರ್ಧೆ ?
2021ರ ಐಪಿಎಲ್ ಪ್ರಾಯೋಜಕತ್ವಕ್ಕೆ ಪೈಪೋಟಿ ನಡೆಯುತ್ತಿದೆ. 2020ರ ಐಪಿಎಲ್ ಟೂರ್ನಿಗೆ ಡ್ರೀಮ್ ಇಲೆವೆನ್ ಕಂಪೆನಿಯು ಪ್ರಾಯೋಜಕತ್ವ ವಹಿಸಿತ್ತು. ಇದೀಗ 2021ರ ಐಪಿಎಲ್ ಪ್ರಾಯೋಜಕತ್ವಕ್ಕೆ ಡ್ರೀಮ್ ಇಲೆವೆನ್ ಕಂಪೆನಿಗೆ ಇದು ಟೆಕ್ ಸ್ಟಾರ್ಟ್ ಅನ್ ಆಕಾಡೆಮಿ ಕಂಪೆನಿಯೂ ಸ್ಪರ್ಧೆ ಒಡ್ಡುತ್ತಿದೆ.
ಇನ್ನೊಂದೆಡೆ ಭಾರತ ಮತ್ತು ಚೀನಾ ನಡುವಿನ ರಾಜಕೀಯ ಬಿಕ್ಕಟ್ಟಿನಿಂದಾಗಿ ವಿವೋ ಕಂಪೆನಿಯು 2020ರ ಐಪಿಎಲ್ ಪ್ರಾಯೋಜಕತ್ವದಿಂದ ಹಿಂದೆ ಸರಿದಿತ್ತು. ಬಿಸಿಸಿಐ ಜೊತೆ ಐದು ವರ್ಷಗಳ ಒಪ್ಪಂದ ಮಾಡಿಕೊಂಡಿದ್ದ ವಿವೋ ಕಂಪೆನಿಯು ಪ್ರತಿ ವರ್ಷ 440 ರೂ ಕೋಟಿ ರೂಪಾಯಿ ನೀಡುತ್ತಿತ್ತು. ಆದ್ರೆ 2020ರ ಐಪಿಎಲ್ ಟೂರ್ನಿಗೆ ಡ್ರೀಮ್ ಇಲೆವೆನ್ ಕಂಪೆನಿಯು 222 ರೂಪಾಯಿ ಪ್ರಾಯೋಜಕತ್ವ ನೀಡಿತ್ತು. ಹಾಗೇ ಈ ಬಾರಿಯ ಐಪಿಎಲ್ ಟೂರ್ನಿಗೂ ಬಿಸಿಸಿಐಗೆ ವಿವೋ ಕಂಪೆನಿಯು ನೀಡುತ್ತಿದ್ದ 440 ಕೋಟಿ ರೂಪಾಯಿ ಪ್ರಾಯೋಜಕತ್ವ ಬರುತ್ತಿಲ್ಲ. ಆದ್ರೆ ಕಳೆದ ಬಾರಿಗಿಂತ ಹೆಚ್ಚಿನ ಮೊತ್ತ ಬರುವ ನಿರೀಕ್ಷೆಯನ್ನು ಬಿಸಿಸಿಐ ಹೊಂದಿದೆ.
ಈ ನಡುವೆ ವಿವೋ ಕಂಪೆನಿಯ ಜೊತೆಗಿನ ಒಪ್ಪಂದವನ್ನು ಬಿಸಿಸಿಐ ರದ್ದುಗೊಳಿಸುವುದು ಬಹುತೇಕ ಖಚಿತವಾಗಿದೆ. ಆದ್ರೆ ಕೆಲವೊಂದು ತಾಂತ್ರಿಕ ಸಮಸ್ಯೆಗಳಿವೆ. ಹೀಗಾಗಿ ಫೆಬ್ರವರಿ 18ರಂದು ನಡೆಯಲಿರುವ ಐಪಿಎಲ್ ಬಿಡ್ಡಿಂಗ್ ವೇಳೆ ವಿವೋ ಕಂಪೆನಿಯ ಲೋಗೋ ವನ್ನು ಬಳಸಿಕೊಳ್ಳುವ ಸಾಧ್ಯತೆಗಳಿವೆ.
ಈ ನಡುವೆ ಈ ಬಾರಿಯ ಐಪಿಎಲ್ ಬಿಡ್ಡಿಂಗ್ ನಲ್ಲಿ 61 ಆಟಗಾರರನ್ನು ಹರಾಜಿಂನಲ್ಲಿ ಮಾರಾಟವಾಗಲಿದ್ದಾರೆ. ಒಟ್ಟು 1000 ಕ್ಕೂ ಹೆಚ್ಚು ಆಟಗಾರರು ಬಿಡ್ಡಿಂಗ್ ನಲ್ಲಿ ಭಾಗಿಯಾಗಲಿದ್ದಾರೆ.