ಬ್ಯಾಟಿಂಗ್ ಸ್ವರ್ಗದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ VS ರಾಯಲ್ ಚಾಲೆಂಜರ್ಸ್ ಫೈಟ್
ಮಾತಲ್ಲಿ ಹೇಳುವಾಗ, ದಾಖಲೆಗಳಲ್ಲಿ ಮಾತನಾಡುವಾಗ ಇದು ಎರಡು ಬಲಿಷ್ಠ ತಂಡಗಳ ನಡುವಿನ ಹೋರಾಟ. ಐಪಿಎಲ್ 14ನೇ ಸೀಸನ್ನಲ್ಲಿ ಈ ಎರಡು ತಂಡು ಉತ್ತಮ ಪ್ರದರ್ಶನವನ್ನೇ ನೀಡಿವೆ. ಆದರೆ ಐಪಿಎಲ್ 2ನೇ ಇನ್ನಿಂಗ್ಸ್ನ ಆರಂಭದಲ್ಲಿ ಎರಡೂ ತಂಡಗಳಿಂದ ಭಿನ್ನ ಪ್ರದರ್ಶನ ಬಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಮೊದಲ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಹೀನಾಯವಾಗಿ ಮುಗ್ಗರಿಸಿದ್ದರೆ, ಚೆನ್ನೈ ಬಲಿಷ್ಠ ಮುಂಬೈ ತಂಡಕ್ಕೆ ಸೋಲಿನ ಪಾಠ ಕಲಿಸಿತ್ತು. ಆದರೆ ಪಾಯಿಂಟ್ಸ್ ಟೇಬಲ್ನಲ್ಲಿ ಈ ಎರಡು ತಂಡಗಳ ನಡುವಿನ ಅಂತರ ಕೇವಲ ಎರಡೇ ಎರಡು ಪಾಯಿಂಟ್ಗಳಷ್ಟೇ.
ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಕಂಪ್ಲೀಟ್ ಆಗಿ ಮಿಸ್ ಆಗಿತ್ತು. ಎಬಿಡಿ ವಿಲಿಯರ್ಸ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಭಾರತದಲ್ಲಿ ನೀಡಿದ್ದ ಪ್ರದರ್ಶನವನ್ನು ನೀಡಲಿಲ್ಲ. ವಿರಾಟ್, ದೇವದತ್ ರನ್ ಬರ ದುಬಾರಿ ಆಯಿತು. ಲೋ ಸ್ಕೋರ್ ಮುಂದೆ ಬೌಲರ್ಗಳ ಪ್ರದರ್ಶನವೂ ಗಮನಸೆಳೆಯುವಂತೆ ಇರಲಿಲ್ಲ. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್ಸಿಬಿ ಬ್ಯಾಟಿಂಗ್ ಪವರ್ ತೋರಿಸಿಬೇಕಿದೆ. ಕೆಲವೊಂದು ಬದಲಾವಣೆಯೂ ಮಾಡಬೇಕಿದೆ. ಲೆಗ್ಸ್ಪಿನ್ ಆಲ್ರೌಂಡರ್ ಹಸರಂಗ ಬದಲು ಸ್ಪೋಟಕ ಬ್ಯಾಟ್ಸ್ಮನ್ ಕಂ ಮಧ್ಯಮ ವೇಗಿ ಟಿಮ್ ಡೇವಿಡ್ರನ್ನು ಕಣಕ್ಕಿಳಿಸಬೇಕಿದೆ. ಸಚಿನ್ ಬೇಬಿ ಬದಲು ಮೊಹಮ್ಮದ್ ಅಜರುದ್ದೀನ್ಗೆ ಅವಕಾಶ ಕೊಟ್ರೆ ಬ್ಯಾಟಿಂಗ್ ಬಲ ಹೆಚ್ಚುತ್ತದೆ.
ಇನ್ನೊಂದು ಕಡೆಯಲ್ಲಿಸ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಬ್ಯಾಟಿಂಗ್ ಬಗ್ಗೆ ಹೆಚ್ಚು ಯೋಚನೆ ಮಾಡಬೇಕಿದೆ. ಮೊದಲ ಪಂದ್ಯದಲ್ಲಿ ರುತುರಾಜ್ ಗಾಯಕ್ವಾಡ್ ಅಬ್ಬರದ ನಡೆಯದೇ ಇದ್ದಿದ್ರೆ ಸಿಎಸ್ಕೆ ಕಥೆಯೇ ಬೇರೆ ಆಗುತ್ತಿತ್ತು. ಹೀಗಾಗಿ ತಂಡದಲ್ಲಿ ಬದಲಾವಣೆ ಮಾಡಿದ್ರೂ ಅಚ್ಚರಿ ಇಲ್ಲ. ಸ್ಯಾಮ್ ಕರ್ರನ್ ಕ್ವಾರಂಟೈನ್ ಮುಗಿಸಿರುವುದರಿಂದ ಆಡುವುದು ಖಚಿತ. ಹೀಗಾಗಿ ಪಾಫ್ ಡು ಪ್ಲೆಸಿಸ್ ಅಥವಾ ಜೋಶ್ ಹ್ಯಾಜಲ್ವುಡ್ ಜಾಗ ಖಾಲಿ ಮಾಡಬೇಕಾಗಬಹುದು. ಅಂಬಟಿ ರಾಯುಡು ಫಿಟ್ ನೆಸ್ ಬಗ್ಗೆಯೂ ಚಿಂತೆ ಇದೆ. ರಾಯುಡು ಫಿಟ್ ಆಗದೇ ಇದ್ದಲ್ಲಿ ರಾಬಿನ್ ಉತ್ತಮ ಆಡೋದು ಬಹುತೇಕ ಖಚಿತ.
ಶಾರ್ಜಾ ಯುಎಇ ಪಿಚ್ಗಳ ಪೈಕಿ ಇರುವ ಬ್ಯಾಟಿಂಗ್ ಸ್ವರ್ಗ. ಚಿಕ್ಕ ಮೈದಾನ ಮತ್ತು ಬ್ಯಾಟಿಂಗ್ ಫ್ರೆಂಡ್ಲಿ ಪಿಚ್ ಬೌಲರ್ಗಳ ಮಾರಣ ಹೋಮಕ್ಕೆ ಅಖಾಡವಾಗಬಹುದು ಅನ್ನುವ ಮಾತುಗಳಿವೆ. ಡ್ಯು ಫ್ಯಾಕ್ಟರ್ ಕೂಡ ಫಲಿತಾಂಶದ ಮೇಲೆ ಪ್ರಭಾವ ಬೀರುವುದು ಖಚಿತ.
ಸಂಭಾವ್ಯ XI
ಚೆನ್ನೈ ಸೂಪರ್ ಕಿಂಗ್ಸ್
1. ರುತುರಾಜ್ ಗಾಯಕ್ವಾಡ್, 2.ಮೊಯಿನ್ ಅಲಿ, 3.ಸುರೇಶ್ ರೈನಾ, 4.ಅಂಬಟಿ ರಾಯುಡು/ರಾಬಿನ್ ಉತ್ತಪ್ಪ, 5. ಎಂ.ಎಸ್.ಧೋನಿ, 6. ರವೀಂದ್ರ ಜಡೇಜಾ, 7.ಸ್ಯಾಮ್ ಕರ್ರನ್, 8. ಡ್ವೈನ್ ಬ್ರಾವೋ, 9.ಶಾರ್ದೂಲ್ ಠಾಕೂರ್, 10. ದೀಪಕ್ ಚಹರ್, 11. ಜೋಶ್ ಹ್ಯಾಜಲ್ವುಡ್
ರಾಯಲ್ ಚಾಲೆಂಜರ್ಸ್ ಬೆಂಗಳೂರು
1. ವಿರಾಟ್ ಕೊಹ್ಲಿ, 2. ದೇವದತ್ ಪಡಿಕಲ್, 3.ಕೆ.ಎಸ್. ಭರತ್, 4.ಗ್ಲೆನ್ ಮ್ಯಾಕ್ಸ್ವೆಲ್, 5. ಎ.ಬಿ.ಡಿವಿಲಿಯರ್ಸ್, 6. ಮೊಹಮ್ಮದ್ ಅಜರುದ್ದೀನ್, 7.ಕೈಲ್ ಜೇಮಿಸನ್, 8. ವಹಿಂಡು ಹಸರಂಗ/ಟಿಮ್ ಡೇವಿಡ್, 9. ಹರ್ಷಲ್ ಪಟೇಲ್, 10. ಮೊಹಮ್ಮದ್ ಸಿರಾಜ್, 11.ಯಜುವೇಂದ್ರ ಚಹಲ್