ADVERTISEMENT
Monday, April 13, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

IPL 2021 | ಶಾರ್ಜಾದಲ್ಲಿ ಮುಂದುವರೆದ ಧೋನಿ ಮ್ಯಾಜಿಕ್

Mahesh M Dhandu by Mahesh M Dhandu
October 1, 2021
in IPL 2021, Newsbeat, ಐಪಿಎಲ್ 2021
m s dhoni csk saakshatv ipl
Share on FacebookShare on TwitterShare on WhatsappShare on Telegram

ಚೆನ್ನೈ ಸೂಪರ್​​ ಕಿಂಗ್ಸ್​​ ಸುಲಭವಾಗಿ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಸನ್​ರೈಸರ್ಸ್​ ಬೌಲರ್​​ಗಳು ಕಂ ಬ್ಯಾಕ್​​ ಮಾಡಿದ್ರು.

ಆದ್ರೆ ಧೋನಿ ಕೊನೆಯ ಓವರ್​ನಲ್ಲಿ ಸಿಕ್ಸರ್​​ ಸಿಡಿಸಿ ತಂಡವನ್ನು ಪ್ಲೇ-ಆಫ್​​ಗೆ ಏರಿಸಿದ್ರು. ಸನ್​ರೈಸರ್ಸ್​ ಅಧಿಕೃತವಾಗಿ ಟೂರ್ನಿಯಿಂದ ಹೊರಬಿತ್ತು.

Related posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

April 13, 2026
ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

April 13, 2026

ಸ್ಲೋ ಪಿಚ್​​ನಲ್ಲಿ ಬ್ಯಾಟಿಂಗ್​​ ಆರಂಭಿಸಿದ ಜೇಸನ್​ ರಾಯ್​​ ಮತ್ತು ವೃದ್ಧಿಮಾನ್​​ ಸಾಹಾ ಉತ್ತಮ ಆರಂಭ ತಂದುಕೊಡಲಿಲ್ಲ. ರಾಯ್​​ ಹ್ಯಾಜಲ್​​ವುಡ್​​ ಎಸೆತದಲ್ಲಿ ಧೋನಿಗೆ ಕ್ಯಾಚ್​​ ನೀಡಿ ಔಟಾದರು.

ಕೇನ್​​ ವಿಲಿಯಮ್ಸನ್​​,  ಸಾಹಾ ಜೊತೆಗೂಡಿ ಇನ್ನಿಂಗ್ಸ್​​ ಕಟ್ಟುವ ಯೋಚನೆಯಲ್ಲಿದ್ದರು. ಆದರೆ ದಾಳಿಗಿಳಿದ ಬ್ರಾವೋ 11 ರನ್​ಗಳಿಸಿದ್ದ ವಿಲಿಯಮ್ಸನ್​​ ವಿಕೆಟ್​​​ ಪಡೆದು ಹೈದ್ರಾಬಾದ್​​ಗೆ ಶಾಕ್​ ನೀಡಿದರು. ಇಷ್ಟು ಸಾಲದು ಎಂಬಂತೆ ಪ್ರಿಯಂ ಗರ್ಗ್​ ಕೂಡ ಬ್ರಾವೋ ಮ್ಯಾಜಿಕ್​​ಗೆ ವಿಕೆಟ್​​ ಒಪ್ಪಿಸಿದರು.

ಸಾಹಾ ಯುವ ಆಟಗಾರ ಅಭಿಷೇಕ್​​ ಶರ್ಮಾ ಜೊತೆಗೂಡಿ ಇನ್ನಿಂಗ್ಸ್​ ಕಟ್ಟು ಯೋಚನೆ ಮಾಡಿದರು. ಆದರೆ ಜಡೇಜಾ 46 ಎಸೆತಗಳಲ್ಲಿ 4 ರನ್​ಗಳಿಸಿದ್ದ ಸಾಹಾರನ್ನು ಧೋನಿಗೆ ಕ್ಯಾಚ್​​ ಕೊಡುವಂತೆ ಮಾಡಿದ್ರು.

ಸ್ಲಾಗ್​​ ಓವರುಗಳಲ್ಲಿ ಅಭಿಷೇಕ್​​ ಶರ್ಮಾ ಮತ್ತು ಅಬ್ದುಲ್​​ ಸಮದ್​​​ ಬಿರುಸಿನ ಆಟ ಆಡುವ ಪ್ರಯತ್ನ ಮಾಡಿದ್ರೂ ಹ್ಯಾಜಲ್​​ ವುಡ್​​ ಬಿಡಲಿಲ್ಲ. ಶರ್ಮಾ 18 ರನ್​ಗಳಿಸಿ ಡುಪ್ಲೆಸಿಸ್​​ಗೆ ಕ್ಯಾಚ್​​ ನೀಡಿದರೆ, ಸಮದ್​​ ಕೂಡ 18 ರನ್​​ಗಳಿಸಿ ಮೊಯಿನ್​​ ಅಲಿಗೆ ಕ್ಯಾಚ್​ ಕೊಟ್ರು.

Dhoni saaksha tv

ಶಾರ್ದೂಲ್​​ ಠಾಕೂರ್​​ ಜೇಸನ್​​ ಹೋಲ್ಡರ್​​ ವಿಕೆಟ್​​ ಪಡೆದರು.  ನಿಗದಿತ 20 ಓವರುಗಳಲ್ಲಿ ಸನ್​​ರೈಸರ್ಸ್​ ಹೈದ್ರಾಬಾದ್​​ 7 ವಿಕೆಟ್​​ ಕಳೆದುಕೊಂಡು 134ರನ್​​ಗಳಿಸಿತ್ತು.

ಚೇಸ್​ ಮಾಡಲು ಹೊರಟ ಚೆನ್ನೈ ಸೂಪರ್​​ ಕಿಂಗ್ಸ್​​​ ಕೂಡ ನಿಧಾನಗತಿಯ ಪಿಚ್​​ನಲ್ಲಿ ರನ್​ಗಾಗಿ ಪರದಾಡಿದ್ದು ಸುಳ್ಳಲ್ಲ. ಆದರೆ ರುತುರಾಜ್​​ ಗಾಯಕ್ವಾಡ್​ ಮತ್ತು ಫಾಫ್​​ ಡು ಪ್ಲೆಸಿಸ್​​ ತಮ್ಮ ಅದ್ಭುತ ಫಾರ್ಮ್​ ಮುಂದುವರೆಸಿದ್ರು.

ಪವರ್​​ ಪ್ಲೇ ಲಾಭವನ್ನು ಪಡೆದುಕೊಂಡರು. ಮೊದಲ ವಿಕೆಟ್​​ಗೆ ಈ ಜೋಡಿ 75 ರನ್​​ಗಳನ್ನು ಸೇರಿಸಿತ್ತು.  38 ಎಸೆತಗಳಲ್ಲಿ 4 ಫೋರ್​​​​, 2 ಸಿಕ್ಸರ್​​ ನೆರವಿನಿಂದ 45 ರನ್​ಗಳಿಸಿದ್ದ ಗಾಯಕ್ವಾಡ್​​ ಔಟಾದಾಗ ಚೆನ್ನೈ ಗೆಲುವಿನ ಕಡೆ ದೃಷ್ಟಿ ನೆಟ್ಟಾಗಿತ್ತು.

ಡುಪ್ಲಿಸಿಸ್​​ ಜೊತೆ ಆಟಕ್ಕಿಳಿದ ಮೊಯಿನ್​​ ಅಲಿ 17 ಎಸೆತಗಳಲ್ಲಿ 17 ರನ್​ಗಳಿಸಿ ಔಟಾದರು. ಮೊದಲ 15 ಓವರುಗಳಲ್ಲಿ ಸಿಎಸ್​ಕೆ 2 ವಿಕೆಟ್​​ ಕಳೆದುಕೊಂಡು 105 ರನ್​​ಗಳಿಸಿತ್ತು.

16ನೇ ಓವರ್​​ನ ಅರಂಭದಲ್ಲಿ ಸುರೇಶ್​​ ರೈನಾ ಜೇಸನ್​​ ಹೋಲ್ಡರ್​​​ ಎಸೆತದಲ್ಲಿ ಎಲ್​​​ಬಿ ಬಲೆಗೆ ಬಿದ್ರು. ಅದೇ ಓವರ್​ನಲ್ಲಿ 36 ಎಸೆತಗಳಲ್ಲಿ 41 ರನ್​​ಗಳಿಸಿದ್ದ ಫಾಫ್​​ ಕೂಡ ಔಟಾದರು.

ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಸಿಎಸ್​​ಕೆಗೆ ಆಘಾತ. ಆದರೆ ರಾಯುಡು, ಧೋನಿ ಮೇಲಿದ್ದ ಒತ್ತಡ ಕಡಿಮೆ ಮಾಡಿದ್ರು. 19ನೇ ಓವರ್​​ನಲ್ಲಿ ಒಂದು ಸಿಕ್ಸರ್​​​​​​​​ ಮತ್ತು ಬೌಂಡರಿ ಸಿಡಿಸಿದ ರಾಯುಡು, ಕೊನೆಯ ಓವರ್​​ನ ಥ್ರಿಲ್ಲರ್​​ಗೆ ಸ್ಕ್ರಿಪ್ಟ್​​ ರೆಡಿ ಮಾಡಿದ್ದರು.

ಕೊನೆಯ ಓವರ್​​ನ 4ನೇ ಎಸೆತವನ್ನು ಸಿಕ್ಸರ್​​ಗೆ ಅಟ್ಟಿದ ಧೋನಿ ಸಿಎಸ್​​ಕೆ 6 ವಿಕೆಟ್​​ಗಳ ಗೆಲುವು ತಂದುಕೊಟ್ಟರು. ಸಿಎಸ್​​ಕೆ ಮೊದಲ ತಂಡವಾಗಿ ಪ್ಲೇ-ಆಫ್​​ ಪ್ರವೇಶ ಪಡೆಯಿತು.

Tags: #Saaksha TVCricketcskipl 2021SHR
ShareTweetSendShare
Join us on:

Related Posts

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

ಎಸಿ ತಂಪು ಒಳಿತಲ್ಲ ಎಚ್ಚರ: ಸಮ್ಮರ್ ಕೋಲ್ಡ್ ಎಂಬ ಮಾರಿಗೆ ಬಲಿಯಾಗಬೇಡಿ, ತಜ್ಞ ವೈದ್ಯರ ಎಚ್ಚರಿಕೆ ಇದು

by Shwetha
April 13, 2026
0

ಬೇಸಿಗೆಯ ಸುಡುವ ಬಿಸಿಲಿನಿಂದ ರಕ್ಷಣೆ ಪಡೆಯಲು ಇಂದು ಪ್ರತಿಯೊಬ್ಬರೂ ಎಸಿ ಮೊರೆ ಹೋಗುತ್ತಿದ್ದಾರೆ. ಮನೆ, ಕಚೇರಿ ಮಾತ್ರವಲ್ಲದೆ ಪ್ರಯಾಣದ ವೇಳೆಯೂ ಎಸಿ ಅನಿವಾರ್ಯವಾಗಿದೆ. ಆದರೆ ಈ ತಂಪಾದ...

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

ದಾಖಲೆಗಳ ಸರದಾರ ಸಿದ್ದರಾಮಯ್ಯರಿಗೆ ನಾಲವಾರ ಮಠದ ವಿಶೇಷ ಗೌರವ: ಬಜೆಟ್ ಕಿಂಗ್ ಗೆ ಚಿನ್ನದ ಉಂಗುರ ತೊಡಿಸಿದ ಶ್ರೀಗಳು

by Shwetha
April 13, 2026
0

ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಪ್ರಸಿದ್ಧ ಧಾರ್ಮಿಕ ಕೇಂದ್ರವಾದ ನಾಲವಾರದ ಶ್ರೀ ಕೋರಿಸಿದ್ದೇಶ್ವರ ಮಠಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮಠದ...

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

ಮೂಕ ಜೀವಿಗಳ ಸಂಕಷ್ಟಕ್ಕೆ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ ಕಣ್ಣೀರು : ನಾಯಿಗಳ ಮೇಲೆ ಅಮಾನವೀಯ ದೌರ್ಜನ್ಯ ಫ್ರೀಡಂ ಪಾರ್ಕ್ ನಲ್ಲಿ ಪ್ರಾಣಿ ಪ್ರೇಮಿಗಳ ಬೃಹತ್ ಆಕ್ರೋಶ

by Shwetha
April 13, 2026
0

ಬೆಂಗಳೂರು ನಗರದ ಹೃದಯಭಾಗದಲ್ಲಿರುವ ಫ್ರೀಡಂ ಪಾರ್ಕ್ ಇಂದು ಮೂಕ ಪ್ರಾಣಿಗಳ ಪರವಾಗಿ ಮೊಳಗಿದ ಆಕ್ರೋಶದ ಧ್ವನಿಗೆ ಸಾಕ್ಷಿಯಾಯಿತು. ಕಗ್ಗದಾಸಪುರದ ಡಿಆರ್ ಡಿಒ ಸಂಕೀರ್ಣದಲ್ಲಿ ನಡೆದ ಬೀದಿ ನಾಯಿಗಳ...

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

ದಾವಣಗೆರೆ ಉಪಚುನಾವಣೆ ಕಿಚ್ಚು ಕಾಂಗ್ರೆಸ್ ನಲ್ಲಿ ಭಿನ್ನಮತೀಯರ ಬೇಟೆ ಆರಂಭ ಇಬ್ಬರು ಪ್ರಮುಖ ಮುಸ್ಲಿಂ ನಾಯಕರ ವಿಕೆಟ್ ಪತನ

by Shwetha
April 13, 2026
0

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯು ರಾಜ್ಯ ಕಾಂಗ್ರೆಸ್ ಘಟಕದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಚುನಾವಣಾ ಕಣದಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯ ವಿರುದ್ಧ ಬಂಡಾಯಕ್ಕೆ ಕುಮ್ಮಕ್ಕು ನೀಡಿದ...

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

ಹಸ್ತ ಪಾಳಯದಲ್ಲಿ ಬಿರುಗಾಳಿ ಅಲ್ಪಸಂಖ್ಯಾತ ಘಟಕಕ್ಕೆ ಡಿಕೆಶಿ ಮೇಜರ್ ಸರ್ಜರಿ ಸಚಿವ ಜಮೀರ್ ಮತ್ತು ನಸೀರ್ ಅಹಮ್ಮದ್ ಗೆ ಹೈಕಮಾಂಡ್ ಶಾಕ್

by Shwetha
April 13, 2026
0

ದಾವಣಗೆರೆ ದಕ್ಷಿಣ ಉಪಚುನಾವಣೆಯ ಫಲಿತಾಂಶದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನದ ಸ್ಫೋಟ ಸಂಭವಿಸಿದೆ. ಟಿಕೆಟ್ ವಂಚಿತರಾದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಜಬ್ಬಾರ್...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram