ಚೆನ್ನೈ ಸೂಪರ್ ಕಿಂಗ್ಸ್ ಸುಲಭವಾಗಿ ಪಂದ್ಯ ಗೆಲ್ಲಬಹುದು ಅನ್ನುವ ಲೆಕ್ಕಾಚಾರವಿತ್ತು. ಆದರೆ ಸನ್ರೈಸರ್ಸ್ ಬೌಲರ್ಗಳು ಕಂ ಬ್ಯಾಕ್ ಮಾಡಿದ್ರು.
ಆದ್ರೆ ಧೋನಿ ಕೊನೆಯ ಓವರ್ನಲ್ಲಿ ಸಿಕ್ಸರ್ ಸಿಡಿಸಿ ತಂಡವನ್ನು ಪ್ಲೇ-ಆಫ್ಗೆ ಏರಿಸಿದ್ರು. ಸನ್ರೈಸರ್ಸ್ ಅಧಿಕೃತವಾಗಿ ಟೂರ್ನಿಯಿಂದ ಹೊರಬಿತ್ತು.
ಸ್ಲೋ ಪಿಚ್ನಲ್ಲಿ ಬ್ಯಾಟಿಂಗ್ ಆರಂಭಿಸಿದ ಜೇಸನ್ ರಾಯ್ ಮತ್ತು ವೃದ್ಧಿಮಾನ್ ಸಾಹಾ ಉತ್ತಮ ಆರಂಭ ತಂದುಕೊಡಲಿಲ್ಲ. ರಾಯ್ ಹ್ಯಾಜಲ್ವುಡ್ ಎಸೆತದಲ್ಲಿ ಧೋನಿಗೆ ಕ್ಯಾಚ್ ನೀಡಿ ಔಟಾದರು.
ಕೇನ್ ವಿಲಿಯಮ್ಸನ್, ಸಾಹಾ ಜೊತೆಗೂಡಿ ಇನ್ನಿಂಗ್ಸ್ ಕಟ್ಟುವ ಯೋಚನೆಯಲ್ಲಿದ್ದರು. ಆದರೆ ದಾಳಿಗಿಳಿದ ಬ್ರಾವೋ 11 ರನ್ಗಳಿಸಿದ್ದ ವಿಲಿಯಮ್ಸನ್ ವಿಕೆಟ್ ಪಡೆದು ಹೈದ್ರಾಬಾದ್ಗೆ ಶಾಕ್ ನೀಡಿದರು. ಇಷ್ಟು ಸಾಲದು ಎಂಬಂತೆ ಪ್ರಿಯಂ ಗರ್ಗ್ ಕೂಡ ಬ್ರಾವೋ ಮ್ಯಾಜಿಕ್ಗೆ ವಿಕೆಟ್ ಒಪ್ಪಿಸಿದರು.
ಸಾಹಾ ಯುವ ಆಟಗಾರ ಅಭಿಷೇಕ್ ಶರ್ಮಾ ಜೊತೆಗೂಡಿ ಇನ್ನಿಂಗ್ಸ್ ಕಟ್ಟು ಯೋಚನೆ ಮಾಡಿದರು. ಆದರೆ ಜಡೇಜಾ 46 ಎಸೆತಗಳಲ್ಲಿ 4 ರನ್ಗಳಿಸಿದ್ದ ಸಾಹಾರನ್ನು ಧೋನಿಗೆ ಕ್ಯಾಚ್ ಕೊಡುವಂತೆ ಮಾಡಿದ್ರು.
ಸ್ಲಾಗ್ ಓವರುಗಳಲ್ಲಿ ಅಭಿಷೇಕ್ ಶರ್ಮಾ ಮತ್ತು ಅಬ್ದುಲ್ ಸಮದ್ ಬಿರುಸಿನ ಆಟ ಆಡುವ ಪ್ರಯತ್ನ ಮಾಡಿದ್ರೂ ಹ್ಯಾಜಲ್ ವುಡ್ ಬಿಡಲಿಲ್ಲ. ಶರ್ಮಾ 18 ರನ್ಗಳಿಸಿ ಡುಪ್ಲೆಸಿಸ್ಗೆ ಕ್ಯಾಚ್ ನೀಡಿದರೆ, ಸಮದ್ ಕೂಡ 18 ರನ್ಗಳಿಸಿ ಮೊಯಿನ್ ಅಲಿಗೆ ಕ್ಯಾಚ್ ಕೊಟ್ರು.
ಶಾರ್ದೂಲ್ ಠಾಕೂರ್ ಜೇಸನ್ ಹೋಲ್ಡರ್ ವಿಕೆಟ್ ಪಡೆದರು. ನಿಗದಿತ 20 ಓವರುಗಳಲ್ಲಿ ಸನ್ರೈಸರ್ಸ್ ಹೈದ್ರಾಬಾದ್ 7 ವಿಕೆಟ್ ಕಳೆದುಕೊಂಡು 134ರನ್ಗಳಿಸಿತ್ತು.
ಚೇಸ್ ಮಾಡಲು ಹೊರಟ ಚೆನ್ನೈ ಸೂಪರ್ ಕಿಂಗ್ಸ್ ಕೂಡ ನಿಧಾನಗತಿಯ ಪಿಚ್ನಲ್ಲಿ ರನ್ಗಾಗಿ ಪರದಾಡಿದ್ದು ಸುಳ್ಳಲ್ಲ. ಆದರೆ ರುತುರಾಜ್ ಗಾಯಕ್ವಾಡ್ ಮತ್ತು ಫಾಫ್ ಡು ಪ್ಲೆಸಿಸ್ ತಮ್ಮ ಅದ್ಭುತ ಫಾರ್ಮ್ ಮುಂದುವರೆಸಿದ್ರು.
ಪವರ್ ಪ್ಲೇ ಲಾಭವನ್ನು ಪಡೆದುಕೊಂಡರು. ಮೊದಲ ವಿಕೆಟ್ಗೆ ಈ ಜೋಡಿ 75 ರನ್ಗಳನ್ನು ಸೇರಿಸಿತ್ತು. 38 ಎಸೆತಗಳಲ್ಲಿ 4 ಫೋರ್, 2 ಸಿಕ್ಸರ್ ನೆರವಿನಿಂದ 45 ರನ್ಗಳಿಸಿದ್ದ ಗಾಯಕ್ವಾಡ್ ಔಟಾದಾಗ ಚೆನ್ನೈ ಗೆಲುವಿನ ಕಡೆ ದೃಷ್ಟಿ ನೆಟ್ಟಾಗಿತ್ತು.
ಡುಪ್ಲಿಸಿಸ್ ಜೊತೆ ಆಟಕ್ಕಿಳಿದ ಮೊಯಿನ್ ಅಲಿ 17 ಎಸೆತಗಳಲ್ಲಿ 17 ರನ್ಗಳಿಸಿ ಔಟಾದರು. ಮೊದಲ 15 ಓವರುಗಳಲ್ಲಿ ಸಿಎಸ್ಕೆ 2 ವಿಕೆಟ್ ಕಳೆದುಕೊಂಡು 105 ರನ್ಗಳಿಸಿತ್ತು.
16ನೇ ಓವರ್ನ ಅರಂಭದಲ್ಲಿ ಸುರೇಶ್ ರೈನಾ ಜೇಸನ್ ಹೋಲ್ಡರ್ ಎಸೆತದಲ್ಲಿ ಎಲ್ಬಿ ಬಲೆಗೆ ಬಿದ್ರು. ಅದೇ ಓವರ್ನಲ್ಲಿ 36 ಎಸೆತಗಳಲ್ಲಿ 41 ರನ್ಗಳಿಸಿದ್ದ ಫಾಫ್ ಕೂಡ ಔಟಾದರು.
ಸುಲಭ ಗೆಲುವಿನ ಲೆಕ್ಕಾಚಾರದಲ್ಲಿದ್ದ ಸಿಎಸ್ಕೆಗೆ ಆಘಾತ. ಆದರೆ ರಾಯುಡು, ಧೋನಿ ಮೇಲಿದ್ದ ಒತ್ತಡ ಕಡಿಮೆ ಮಾಡಿದ್ರು. 19ನೇ ಓವರ್ನಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿ ಸಿಡಿಸಿದ ರಾಯುಡು, ಕೊನೆಯ ಓವರ್ನ ಥ್ರಿಲ್ಲರ್ಗೆ ಸ್ಕ್ರಿಪ್ಟ್ ರೆಡಿ ಮಾಡಿದ್ದರು.
ಕೊನೆಯ ಓವರ್ನ 4ನೇ ಎಸೆತವನ್ನು ಸಿಕ್ಸರ್ಗೆ ಅಟ್ಟಿದ ಧೋನಿ ಸಿಎಸ್ಕೆ 6 ವಿಕೆಟ್ಗಳ ಗೆಲುವು ತಂದುಕೊಟ್ಟರು. ಸಿಎಸ್ಕೆ ಮೊದಲ ತಂಡವಾಗಿ ಪ್ಲೇ-ಆಫ್ ಪ್ರವೇಶ ಪಡೆಯಿತು.