ಸೆಪ್ಟಂಬರ್ 20, 2020 ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯ. ಕೊನೆಯ ಮೂರು ಎಸೆತಗಳಲ್ಲಿ ಗೆಲುವಿಗಾಗಿ ಬೇಕಿದ್ದಿದ್ದು ಒಂದೇ ಒಂದು ರನ್. ಮಾಯಾಂಕ್ ಅಗರ್ವಾಲ್ ಕ್ರೀಸ್ನಲ್ಲಿದ್ರು. ಪಂದ್ಯ ಗೆಲ್ಲೋದು ಗ್ಯಾರೆಂಟಿ ಅಂಟಿ ಪಂಜಾಬ್ ಅಂದುಕೊಂಡಿತ್ತು. ಆದರೆ ಮುಂದಿನ ಎಸೆತದಲ್ಲಿ ಮಾಯಾಂಕ್ ಔಟ್.ಪಂದ್ಯ ಟೈ. ಸೂಪರ್ ಓವರ್ನಲ್ಲಿ ಸೋಲು.
ಅಕ್ಟೋಬರ್ 10, 2020 ಕೆಕೆಆರ್ ವಿರುದ್ಧದ ಪಂದ್ಯ. ಕೊನೆಯ 3 ಓವರುಗಳಲ್ಲಿ ಪಂಜಾಬ್ ಗೆಲುವಿಗೆ ಬೇಕಿದ್ದಿದ್ದು ಜಸ್ಟ್ 22 ರನ್. ಕೆ.ಎಲ್.ರಾಹುಲ್ ಬ್ಯಾಟಿಂಗ್ ಮಾಡ್ತಿದ್ರು. 9 ವಿಕೆಟ್ಗಳು ಕೂಡ ಕೈಯಲ್ಲಿದ್ದವು. ಆದ್ರೆ ಪಂದ್ಯ ಅಂತ್ಯ ಕಂಡಾಗ ಪಂಜಾಬ್ ಸೋತಿತ್ತು. ಪ್ಲೇ-ಆಫ್ಗೇರಿದ ನಾಲ್ಕನೇ ತಂಡಕ್ಕಿಂತ ಉತ್ತಮ ರನ್ರೇಟ್ ಹೊಂದಿದ್ದರೂ 2 ಅಂಕಗಳ ಕೊರತೆ ಪಂಜಾಬ್ ತಂಡವನ್ನು ಪ್ಲೇ-ಆಫ್ನಿಂದ ಹೊರಗಿಟ್ಟಿತ್ತು.
ಸೆಪ್ಟಂಬರ್ 21, 2021. ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯ. ಕೊನೆಯ ಓವರ್ನಲ್ಲಿ ನಾಲ್ಕೇ ನಾಲ್ಕು ರನ್ ಬೇಕಿತ್ತು. ನಿಕೊಲಸ್ ಪೂರನ್ ಮತ್ತು ಏಡಿಯನ್ ಮಾರ್ಕ್ರಾಂ ಅದ್ಭುತ ಫಾರ್ಮ್ನಲ್ಲಿದ್ದರು. ಆದರೂ ಪಂಜಾಬ್ ಪಂದ್ಯ ಗೆಲ್ಲಲಿಲ್ಲ.
ಹೀಗೆ ಕಿಂಗ್ಸ್ ಪಂಜಾಬ್ ಗೆಲ್ಲಬೇಕಿರುವ ಪಂದ್ಯಗಳನ್ನು ಸೋತು ಚೋಕರ್ಸ್ ಪಟ್ಟ ಕಟ್ಟಿಕೊಂಡಿದೆ. ಕಿಂಗ್ಸ್ ತಂಡದ ಗೇಮ್ ಪ್ಲಾನ್ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅದೃಷ್ಟ ಮತ್ತು ದುರಾದೃಷ್ಟದ ಬಗ್ಗೆ ವಿಶ್ಲೇಷಣೆ ನಡೆಯುತ್ತಿವೆ. ಆದರೆ ಈಗ ಅದೆಲ್ಲವನ್ನೂ ಮರೆಯುವ ಸಮಯ ಕಿಂಗ್ಸ್ಗೆ ಎದುರಾಗಿದೆ. ರಾಯಲ್ಸ್ ವಿರುದ್ಧದ ಪಂದ್ಯ ಮರೆತು ಸನ್ರೈಸರ್ಸ್ ವಿರುದ್ಧದ ಪಂದ್ಯಕ್ಕೆ ಸಿದ್ಧವಾಗಬೇಕಿದೆ. ಸನ್ರೈಸರ್ಸ್ ಪಾಯಿಂಟ್ ಟೇಬಲ್ನಲ್ಲಿ 8ನೇ ಸ್ಥಾನ ಪಡೆದಿದ್ದರೆ, ಪಂಜಾಬ್ 7ನೇ ಸ್ಥಾನದಲ್ಲಿದೆ.
ಇನ್ನು ಸನ್ರೈಸರ್ಸ್ ತಂಡ ಯಾವ ಪ್ರಯೋಗ ಮಾಡಿದ್ರು ಯಶಸ್ಸು ಕಾಣುತ್ತಿಲ್ಲ. ಡೇವಿಡ್ ವಾರ್ನರ್ ಬ್ಯಾಟಿಂಗ್ ಫಾರ್ಮ್ ಬಗ್ಗೆಯೂ ಚಿಂತೆಯಿದೆ. ಹೀಗಾಗಿ ಸಣ್ಣಪುಟ್ಟ ಬದಲಾವಣೆಯ ಜೊತೆಗೆ ಸನ್ರೈಸರ್ಸ್ ಕಣಕ್ಕಿಲಿಯಲಿದೆ. ಎರಡೂ ತಂಡಕ್ಕೂ ಪ್ಲೇ-ಆಫ್ ಸದ್ಯದ ಮಟ್ಟಿಗೆ ದೂರದ ಮಾತಾದ್ರೂ, ಇನ್ನೂ ಬಾಗಿಲು ಸಂಪೂರ್ಣವಾಗಿ ಮುಚ್ಚಲಿದೆ. ಆದರೆ ಈ ಪಂದ್ಯದಲ್ಲಿ ಸೋತ ತಂಡ ಪ್ಲೇ-ಆಫ್ ಆಸೆಯನ್ನು ಖಚಿತವಾಗಿ ಕೈ ಬಿಡಬೇಕಾಗುತ್ತದೆ. ಕಳೆದ 17 ಪಂದ್ಯಗಳ ಪೈಕಿ 12 ಪಂದ್ಯಗಳಲ್ಲಿ ಸನ್ ರೈಸರ್ಸ್ ಪಂಜಾಬ್ ಕಿಂಗ್ಸ್ ವಿರುದ್ಧ ಮೇಲುಗೈ ಸಾಧಿಸಿರುವುದರಿಂದ ಹೈದ್ರಾಬಾದ್ ಮ್ಯಾಜಿಕ್ ನಿರೀಕ್ಷೆಯಲ್ಲಿದೆ. ಶಾರ್ಜಾದ ಬ್ಯಾಟಿಂಗ್ ಸ್ವರ್ಗದಲ್ಲಿ ಪಂದ್ಯ ನಡೆಯುತ್ತಿರುವುದರಿಂದ ಬೌಂಡರಿ, ಸಿಕ್ಸರ್ಗಳ ನಿರೀಕ್ಷೆ ಹೆಚ್ಚಿದೆ.
ಸಂಭಾವ್ಯ XI
ಸನ್ರೈಸರ್ಸ್ ಹೈದ್ರಾಬಾದ್
ಡೇವಿಡ್ ವಾರ್ನರ್, 2.ವೃದ್ಧಿಮಾನ್ ಸಾಹಾ, 3. ಕೇನ್ ವಿಲಿಯಮ್ಸನ್, 4, ಮನೀಶ್ ಪಾಂಡೆ, 5. ಕೇಧಾರ್ ಜಾಧವ್,6. ಅಬ್ದುಲ್ ಸಮದ್, 7. ಜೇಸನ್ ಹೋಲ್ಡರ್, 8 ರಶೀದ್ ಖಾನ್, 9. ಭುವನೇಶ್ವರ್ ಕುಮಾರ್, 10. ಸಂದೀಪ್ ಶರ್ಮಾ, 11. ಖಲೀಲ್ ಅಹ್ಮದ್
ಕಿಂಗ್ಸ್ XI ಪಂಜಾಬ್
ಕೆ.ಎಲ್. ರಾಹುಲ್, 2. ಮಾಯಾಂಕ್ ಅಗರ್ವಾಲ್, 2 ಏಡಿಯನ್ ಮಾರ್ಕ್ರಾಂ, 4.ನಿಕೋಲಸ್ ಪೂರನ್, 5. ದೀಪಕ್ ಹೂಡ, 6. ಫ್ಯಾಬಿಯನ್ ಅಲೆನ್, 7. ಆದಿಲ್ ರಶೀದ್, 8. ಹಪ್ರೀತ್ ಬ್ರಾರ್, 9. ಅರ್ಶದೀಪ್ ಸಿಂಗ್, 10. ಮೊಹಮ್ಮದ್ ಶಮಿ, 11. ಇಶಾನ್ ಪೊರೆಲ್