ರಾಜಸ್ಥಾನ ರಾಯಲ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್, ಈ ಎರಡು ತಂಡಗಳಿಗೂ ಇದು ಫೈನಲ್ ಲೀಗ್ ಮ್ಯಾಚ್. ಕೆಕೆಆರ್ ಗೆದ್ದರೆ ಆಲ್ಮೋಸ್ಟ್ ಪ್ಲೇ-ಆಫ್ ಸ್ಥಾನಕ್ಕೆ ಹತ್ತಿರ ಆದಂತೆಯೇ. ಆದರೆ ಮುಂಬೈ ತನ್ನ ಕೊನೆಯ ಲೀಗ್ ಮ್ಯಾಚ್ನಲ್ಲಿ ಎಸ್ಆರ್ಎಚ್ ವಿರುದ್ಧ ಗೆಲ್ಲಬಾರದಷ್ಟೇ.
ಒಂದು ವೇಳೆ ಮುಂಬೈ ಗೆದ್ದರೂ ದೊಡ್ಡ ಅಂತರದಿಂದ ಗೆಲ್ಲಬಾರದು. ಒಂದು ವೇಳೆ ಕೆಕೆಆರ್ ಸೋತರೆ ಮುಂಬೈ ಕೊನೆಯ ಪಂದ್ಯದಲ್ಲಿ ಗೆದ್ದರಷ್ಟೇ ಸಾಕು. ಒಟ್ಟಿನಲ್ಲಿ ಕೆಕೆಆರ್ ಮತ್ತು ರಾಯಲ್ಸ್ ನಡುವಿನ ಕೊನೆಯ ಲೀಗ್ ಮ್ಯಾಚ್ನಲ್ಲಿ ಹಲವು ಲೆಕ್ಕಾಚಾರಗಳು ಅಡಗಿವೆ.
ಕೆಕೆಆರ್ ಕೊನೆಯ ಲೀಗ್ ಪಂದ್ಯಕ್ಕೂ ಮುನ್ನ ಸಾಕಷ್ಟು ವಿಶ್ವಾಸಗಳಿಸಿಕೊಂಡಿದೆ. ಗಾಯಗೊಂಡಿದ್ದ ಆ್ಯಂಡ್ರೆ ರಸೆಲ್ ಮತ್ತು ಲೂಕಿ ಫರ್ಗ್ಯೂಸನ್ ಫಿಟ್ ಆಗಿದ್ದಾರೆ.
ಹೀಗಾಗಿ ತಂಡಕ್ಕೆ ಮರಳಲಿದ್ದಾರೆ. ಗಿಲ್ ಮತ್ತು ಅಯ್ಯರ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ. ರಾಣಾ ಮತ್ತು ತ್ರಿಪಾಠಿ ಕೂಡ ರನ್ ಬೇಟೆಯಲ್ಲಿದ್ದಾರೆ.
ಕ್ಯಾಪ್ಟನ್ ಮೊರ್ಗಾನ್ ಬಗ್ಗೆ ಚಿಂತೆಯಿದ್ದರೂ ಕಾರ್ತಿಕ್, ರಸೆಲ್ ಮತ್ತು ಶಕೀಬ್ ಅದನ್ನು ದೂರ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಬೌಲಿಂಗ್ನಲ್ಲಿ ವರುಣ್ ಚಕ್ರವರ್ತಿ, ನರೈನ್ ಮತ್ತು ಲೂಕಿ ಫರ್ಗ್ಯೂಸನ್ ಚಿಂತೆ ದೂರ ಮಾಡಲಿದ್ದಾರೆ.
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ರಾಯಲ್ಸ್ ಮುಂಬೈ ಇಂಡಿಯನ್ಸ್ ವಿರುದ್ಧ ಹೀನಾಯವಾಗಿ ಮುಗ್ಗರಿಸಿ ಪ್ಲೇ-ಆಫ್ ರೇಸ್ನಿಂದ ಹೊರ ಬಿದ್ದಿದೆ.
ಕೊನೆಯ ಲೀಗ್ ಪಂದ್ಯದಲ್ಲಿ ಗೆದ್ದು ಟೂರ್ನಿಗೆ ಗುಡ್ ಬೈ ಹೇಳುವ ಲೆಕ್ಕಾಚಾರ ರಾಯಲ್ಸ್ ತಂಡದ್ದು. ಲೆವಿಸ್, ಜೈಸ್ವಾಲ್, ಸ್ಯಾಮ್ಸನ್ ಮತ್ತು ದುಬೆ ಬ್ಯಾಟಿಂಗ್ ಶಕ್ತಿಗಳು. ಮುಸ್ತಫಿಝುರ್ ಮತ್ತು ಸಕಾರಿಯಾ ಬೌಲಿಂಗ್ ಟ್ರಂಪ್ಕಾರ್ಡ್ಗಳು. ಸಾಂಘೀಕ ಹೋರಾಟವೇ ರಾಯಲ್ಸ್ ಶಕ್ತಿ.
ಶಾರ್ಜಾದ ಪಿಚ್ ಸ್ಲೋ ಅಂಡ್ ಲೋ ಇರುವುದರಿಂದ ಬ್ಯಾಟ್ಸ್ಮನ್ಗಳಿಗೆ ರನ್ಗಳಿಸಲು ಕಷ್ಟವಾಗುತ್ತಿದೆ. ಹೀಗಾಗಿ ಬೌಲರ್ಗಳು ಈ ಪಂದ್ಯದಲ್ಲಿ ತಂಡದ ಸೋಲು ಮತ್ತು ಗೆಲುವಿನ ಹಣೆಬರಹ ಬರೆಯಲಿದ್ದಾರೆ.
ಸಂಭಾವ್ಯ XI
ರಾಜಸ್ಥಾನ ರಾಯಲ್ಸ್:
- ಎವಿಲ್ ಲೆವಿಸ್, 2. ಯಶಸ್ವಿ ಜೈಸ್ವಾಲ್, 3. ಸಂಜು ಸ್ಯಾಮ್ಸನ್, 4. ಶಿವಂ ದುಬೆ, 5. ಗ್ಲೆನ್ ಫಿಲಿಪ್ಸ್, 6. ಡೇವಿಡ್ ಮಿಲ್ಲರ್, 7. ರಾಹುಲ್ ತೆವಾಟಿಯಾ, 8. ಶ್ರೇಯಸ್ ಗೋಪಾಲ್, 9. ಕಲ್ದೀಪ್ ಯಾದವ್, 10. ಮುಸ್ತಾಫಿಝುರ್ ರೆಹಮಾನ್, 11. ಚೇತನ್ ಸಕಾರಿಯ
ಕೊಲ್ಕತ್ತಾ ನೈಟ್ರೈಡರ್ಸ್:
- ಶುಭ್ಮನ್ ಗಿಲ್, 2. ವೆಂಕಟೇಶ್ ಅಯ್ಯರ್, 3. ರಾಹುಲ್ ತ್ರಿಪಾಠಿ, 5. ನಿತೀಶ್ ರಾಣಾ, 5. ಇಯಾನ್ ಮೊರ್ಗಾನ್, 6. ಆಂಡ್ರೆ ರಸೆಲ್, 7. ದಿನೇಶ್ ಕಾರ್ತಿಕ್, 8. ಸುನೀಲ್ ನರೈನ್, 9. ಲೂಕಿ ಫರ್ಗ್ಯೂಸನ್, 10. ವರುಣ್ ಚಕ್ರವರ್ತಿ, 11. ಪ್ರಸಿಧ್ ಕೃಷ್ಣ









