ಐಪಿಎಲ್ 2021 | ಮೊದಲ ದಂಗಲ್ ನಲ್ಲಿ ಗೆಲುವು ಯಾರಿಗೆ..?

1 min read
ipl-2021

ಐಪಿಎಲ್ 2021 | ಮೊದಲ ದಂಗಲ್ ನಲ್ಲಿ ಗೆಲುವು ಯಾರಿಗೆ..?

ಬೆಂಗಳೂರು : ಇಂದಿನಿಂದ ಐಪಿಎಲ್ ಹಂಗಾಮ ಆರಂಭವಾಗಲಿದ್ದು, ಮೊದಲ ದಂಗಲ್ ನಲ್ಲಿ ಐಪಿಎಲ್ ನ ಮದಗಜಗಳಾದ ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿವೆ.

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದ್ದು, ಸಂಜೆ 7.30 ಪಂದ್ಯ ಆರಂಭವಾಗಲಿದೆ. ವಿರಾಟ್ ಕೊಹ್ಲಿ ಆರ್‍ಸಿಬಿ ತಂಡವನ್ನು ಮುನ್ನಡೆಸುತ್ತಿದ್ದು, ರೋಹಿತ್ ಶರ್ಮಾ ಮುಂಬೈ ತಂಡದ ನಾಯಕನಾಗಿದ್ದಾರೆ.

ತಂಡಗಳ ಬಲಾಬಲ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಆರ್ ಸಿಬಿ ತಂಡ ಎಂದಿನಂತೆ ಈ ಬಾರಿ ಕೂಡ ಕಪ್ ಗೆಲ್ಲುವ ವಿಶ್ವಾಸದಲ್ಲೇ ಕಣಕ್ಕಿಳಿಯಲಿದೆ. ಈ ಬಾರಿ ತಂಡದಲ್ಲಿ ಒಂದಿಷ್ಟು ಬದಲಾವಣೆಗಳು ನಿರೀಕ್ಷಿಸಲಾಗಿದೆ. 2016 ರ ಬಳಿಕ ನಾಯಕ ವಿರಾಟ್ ಕೊಹ್ಲಿ ಈ ಬಾರಿ ಓಪನ್ ಮಾಡಲಿದ್ದಾರೆ. ಜತೆಗೆ ದೇವದತ್ತ ಪಡಿಕ್ಕಲ್ ಓಪನ್ ಮಾಡಲಿದ್ದಾರೆ. ಇದಾದ ಬಳಿಕ ಮಾಕ್ಸ್ ವೆಲ್ ಬರುವ ಸಾಧ್ಯತೆಗಳಿವೆ. ಮುಖ್ಯವಾಗಿ ಈ ಬಾರಿ ತಂಡಕ್ಕೆ ಮ್ಯಾಕ್ಸ್ ವೆಲ್ ಆಗಮಿಸಿರುವುದು ತಂಡಕ್ಕೆ ಆನೆ ಬಲಬಂದಂತಾಗಿದೆ. ಇನ್ನುಳಿದಂತೆ ಎ ಬಿ ಡಿವಿಲಿಯರ್ಸ್, ಯಜುವೇಂದ್ರ ಚಹಲ್, ಜೆಮಿನ್ಸನ್ ಕೂಡ ಆರ್‍ಸಿಬಿ ಬೆಂಬಲಕ್ಕಿದ್ದಾರೆ. ಈ ಬಾರಿ ತಂಡಕ್ಕೆ ಆಲ್ ರೌಂಡರ್ ಗಳ ಬಲ ಕೂಡ ಹೆಚ್ಚಾಗಿದೆ.

ಒಟ್ಟಾರೆ ತಂಡ ಈ ಬಾರಿ ಈ ಮೊದಲಿಗಿಂತಲೂ ಸಮತೋಲನವಾಗಿದೆ.

ipl-2021

ಮುಂಬೈ ಇಂಡಿಯನ್ಸ್ ತಂಡದಲ್ಲಿ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಹಾರ್ಧಿಕ್ ಪಾಂಡ್ಯ ಸೇರಿದಂತೆ ಮ್ಯಾಚ್ ವಿನ್ನರ್ ಗಳ ದಂಡೇ ಇದೆ. ಎಂತಹ ಪರಿಸ್ಥಿತಿಯಲ್ಲಾದರೂ ತಂಡವನ್ನ ಸೋಲಿನ ದವಡೆಯಿಂದ ಗೆಲುವಿನ ಹಂತಕ್ಕೆ ಕರೆದೊಯ್ಯುವ ದಾಂಡಿಗರೇ ತಂಡದಲ್ಲಿದ್ದಾರೆ.

ಆದ್ರೆ ಎಲ್ಲೋ ಒಂದು ಕಡೆ ತಂಡದ ಬೌಲಿಂಗ್ ವಿಭಾಗ ಅಷ್ಟಾಗಿ ಬಲಿಷ್ಠವಾಗಿಲ್ಲ ಅಂತ ಹೇಳಬಹುದು. ಯಾಕೆಂದ್ರೆ ಬೂಮ್ರಾ ಬೋಲ್ಟ್ ಬಿಟ್ಟರೇ ಬೇರೆಯಾವ ಬೌಲರ್ ಕೂಡ ಇಂಪ್ರೆಸ್ಸೀವ್ ಆಗಿಲ್ಲ.

ಇನ್ನು ಉಭಯತಂಡಗಳು ಈವರೆಗೂ ಒಟ್ಟು 27 ಪಂದ್ಯಗಳನ್ನಾಡಿದ್ದು, ಇದರಲ್ಲಿ ಮುಂಬೈ ಇಂಡಿಯನ್ಸ್ 17, ಆರ್ ಸಿಬಿ 10 ಪಂದ್ಯಗಳನ್ನ ಗೆದ್ದಿದೆ.+

parking
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd