ಐಪಿಎಲ್ 2021- ಪಂಜಾಬ್ ಕಿಂಗ್ಸ್ ತಂಡದ ಫುಲ್ ಡಿಟೇಲ್ಸ್..!
IPL 2021: Punjab Kings full squad for IPL’s 14th edition
ಐಪಿಎಲ್ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ಈಗೀನ ಪಂಜಾಬ್ ಕಿಂಗ್ಸ್ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ.
ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ರೂ ಕೂಡ ಐಪಿಎಲ್ ನಲ್ಲಿ ಶ್ರೇಷ್ಠ ಮಟ್ಟದ ನಿರ್ವಹಣೆಯನ್ನು ನೀಡಿಲ್ಲ.
2014ರಲ್ಲಿ ರನ್ನರ್ ಅಪ್ ಗೆದ್ದುಕೊಂಡಿರುವುದು ಶ್ರೇಷ್ಠ ಸಾಧನೆ. ಹಾಗೇ 2008ರಲ್ಲಿ ಸೆಮಿಫೈನಲ್ ಪ್ರವೇಶಿಸಿರುವುದನ್ನು ಬಿಟ್ರೆ ಇನ್ನುಳಿದ ಟೂರ್ನಿಗಳಲ್ಲಿ ಲೀಗ್ ಗೆ ಸೀಮಿತವಾಗಿದೆ.
13 ಟೂರ್ನಿಗಳಲ್ಲಿ ಒಂದು ಬಾರಿ ರನ್ನರ್ ಅಪ್, ಒಂದು ಬಾರಿ ಸೆಮಿಫೈನಲ್ ಪ್ರವೇಶಿಸಿದೆ. ಇನ್ನುಳಿದಂತೆ ಮೂರು ಬಾರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದುಕೊಂಡಿದೆ. ಹಾಗೇ ಒಂದು ಬಾರಿ ಏಳನೇ ಸ್ಥಾನ, ನಾಲ್ಕು ಬಾರಿ ಐದನೇ ಸ್ಥಾನ ಮತ್ತು ಎರಡು ಬಾರಿ ಐದನೇ ಸ್ಥಾನ ಪಡೆದಿದೆ.
ಕಳೆದ ಆವೃತ್ತಿಯ ಆರಂಭದ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು. ಆದ್ರೆ ಕೊನೆಯಲ್ಲಿ ಆರನೇ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡಿದೆ.
ಇನ್ನು ಪಂಜಾಬ್ ಕಿಂಗ್ಸ್ ತಂಡಕ್ಕೆ ಇಲ್ಲಿಯ ತನಕ 12 ನಾಯಕರು ತಂಡವನ್ನು ಮುನ್ನಡೆಸಿದ್ದಾರೆ.
ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಒಟ್ಟು 191 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 88 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, 101 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಎರಡು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡಿವೆ.
ಪ್ರಸ್ತುತ ತಂಡವನ್ನು ಕೆ.ಎಲ್. ರಾಹುಲ್ ಅವರು ಮುನ್ನಡೆಸುತ್ತಿದ್ದಾರೆ. ಅನಿಲ್ ಕುಂಬ್ಳೆ ಅವರು ಹೆಡ್ ಕೋಚ್ ಆಗಿದ್ದಾರೆ. ಅವಿನಾಶ್ ವೈದ್ಯ ಮ್ಯಾನೇಜರ್. ಆಂಡಿ ಫ್ಲವರ್ ಆಸಿಸ್ಟೆಂಟ್ ಕೋಚ್, ವಾಸೀಮ್ ಜಾಫರ್ ಬ್ಯಾಟಿಂಗ್ ಕೋಚ್, ಡೇಮಿನ್ ರೈಟ್ ಬೌಲಿಂಗ್ ಕೋಚ್, ಜಾಂಟಿ ರೋಡ್ಸ್ ಫೀಲ್ಡಿಂಗ್ ಕೋಚ್ ಹಾಗೂ ಕ್ರಿಸ್ ಗೇಲ್ ಮೆಂಟರ್ ಆಗಿದ್ದಾರೆ.
ಪಂಜಾಬ್ ಕಿಂಗ್ಸ್
ಕೆ.ಎಲ್. ರಾಹುಲ್ (ನಾಯಕ & ವಿಕೆಟ್ ಕೀಪರ್), ಮಯಾಂಕ್ ಅಗರ್ ವಾಲ್, ಕ್ರಿಸ್ ಗೇಲ್, ಮನ್ ದೀಪ್ ಸಿಂಗ್, ಪ್ರಬ್ ಸಿಮ್ರಾನ್, ನಿಕೊಲಾಸ್ ಪೂರನ್ (ವಿಕೆಟ್ ಕೀಪರ್), ಸಫ್ರಾಝ್ ಖಾನ್, ದೀಪಕ್ ಹೂಡಾ, ಮುರುಗನ್ ಅಶ್ವಿನ್, ರವಿ ಬಿಸ್ನೋಯ್, ಹಪ್ರೀತ್ ಬ್ರಾರ್, ಮಹಮ್ಮದ್ ಶಮಿ, ಆರ್ಶಾದೀಪ್ ಸಿಂಗ್, ಇಶಾನ್ ಪೊರೆಲ್, ದರ್ಶನ್ ನಲ್ಕಂಡೆ, ಕ್ರೀಸ್ ಜೋರ್ಡಾನ್, (ಖರೀದಿ ಮಾಡಿದ ಆಟಗಾರರು) ಡೇವಿಡ್ ಮಲಾನ್, ಜಾಯ್ ರಿಚಡ್ರ್ಸನ್, ಶಾಹ್ರೂಖ್ ಖಾನ್, ರಿಲೆಯ್ ಮಿರೆಡಿತ್, ಮೊಯಿಸೆಸ್ ಹೆನ್ರಿಕ್ಸ್, ಜಲಜ್ ಸಕ್ಸೇನಾ, ಉತ್ಕ್ರಶ್ ಸಿಂಗ್, ಫಾಬಿಯನ್ ಆಲೆನ್, ಸೌರಭ್ ಕುಮಾರ್
#IPL 2021 #PunjabKings #IPL’s 14th edition #ipl #t-20cricket #k.l.rahul #bcci #saakshatv #saakshatvsports