ADVERTISEMENT
Tuesday, September 15, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

ಐಪಿಎಲ್ 2021 : ಪಂಜಾಬ್​​ ಪ್ಲೇ-ಆಫ್​ ಕನಸು ಜೀವಂತ

Mahesh M Dhandu by Mahesh M Dhandu
September 26, 2021
in IPL 2021, Newsbeat, ಐಪಿಎಲ್ 2021
Share on FacebookShare on TwitterShare on WhatsappShare on Telegram

ಶಾರ್ಜಾದ ಪಿಚ್​​ ಬ್ಯಾಟ್ಸ್​​ಮನ್​​ಗಳ ಆರ್ಭಟವನ್ನು ತಡೆದು ನಿಂತಿತು. ನಿಧಾನಗತಿಯ ಪಿಚ್​​ ಇದ್ದಿದ್ದರಿಂದ ಬ್ಯಾಟ್ಸ್​​ಮನ್​​ಗಳ ಲೆಕ್ಕಾಚಾರ ತಪ್ಪಿತು.

ಬೌಲರ್​​ಗಳು ಕಂಡೀಷನ್​​ನ ಸಂಪೂರ್ಣ ಲಾಭ ಪಡೆದು ಮಿಂಚಿದ್ರು. ಕೊನೆಯಲ್ಲಿ ಜೇಸನ್​​ ಹೋಲ್ಡರ್​​ ಸಿಡಿಲಬ್ಬರದ ಆಟ ಆಡಿದ್ರೂ ಪಂಜಾಬ್​​ ಗೆಲ್ಲಲಿಲ್ಲ.

Related posts

gaming-lokakke-entry-kotta-java-yezdi-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

September 15, 2026
2-koti-rupayi-vechchadalli-vc-naalegala-abhivruddhi-kamagarige-guddali-pooje

2 ಕೋಟಿ ರೂ. ವೆಚ್ಚದಲ್ಲಿ ವಿಸಿ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

September 15, 2026

5ರನ್​​ಗಳ ಜಯ ಸಾಧಿಸಿದ ಪಂಜಾಬ್​​ ಪ್ಲೇ-ಆಫ್​​ ಆಸೆ ಜೀವಂತ ಇದ್ದರೆ, ಹೈದ್ರಾಬಾದ್​​ ಇನ್ನುಳಿದ ಪಂದ್ಯವನ್ನು ಔಪಚಾರಿಕವಾಗಿ ಆಡಬೇಕಿದೆ.

ಶಾರ್ಜಾದಲ್ಲಿ ಟಾಸ್​​ ಗೆದ್ದ ಸನ್​​ರೈಸರ್ಸ್​ ಹೈದ್ರಾಬಾದ್​​ ಫೀಲ್ಡಿಂಗ್​​ ಆರಿಸಿಕೊಂಡಿತು. ಆರಂಭದಲ್ಲೇ ಪಿಚ್​​ ನಿಧಾನಗತಿಯಲ್ಲಿ ಇದ್ದಿದ್ದು ರಾಹುಲ್​​ ಮತ್ತು ಮಯಾಂಕ್​​ ರನ್​ ಬೇಟೆಗೆ ಅವಕಾಶ ಸಿಗಲಿಲ್ಲ.

21 ಎಸೆತಗಳಲ್ಲಿ 21 ರನ್​​ಗಳಿಸಿದ ರಾಹುಲ್​​ ಹೋಲ್ಡರ್​​ ಎಸೆತದಲ್ಲಿ ಔಟಾದ್ರು. ಮಯಾಂಕ್​​ ಕೂಡ 5 ರನ್​​ಗಳಿಸಿದ್ದಾಗ ಹೋಲ್ಡರ್​​ ಎಸೆತದಲ್ಲಿ ಲೆಕ್ಕಾಚಾರ ತಪ್ಪಿದ್ರು.

ಯುನಿವರ್ಸಲ್​ ಬಾಸ್​ ಕ್ರಿಸ್​​ಗೇಲ್​​ ಮೇಲೆ ನಿರೀಕ್ಷೆ ಇತ್ತು. ಆದ್ರೆ ಗೇಲ್​​ 17 ಎಸೆತಗಳಲ್ಲಿ 14ರನ್​​ಗಳಿಸಿದ್ದಾಗ ರಶೀದ್​ ಖಾನ್​​ ಎಸೆತದಲ್ಲಿ ಎಲ್​​ಬಿ ಬಲೆಗೆ ಬಿದ್ರು.

ಇದೆಲ್ಲದರ ಮಧ್ಯೆ ಏಡಿಯನ್​​ ಮಾರ್ಕ್​ರಾಂ ರನ್​​ಕಲೆ ಹಾಕುತ್ತಿದ್ದರು. ನಿಕೊಲಸ್​​ ಪೂರನ್​ ಕೂಡ ಸೆಟ್​​ ಆಗುವ ಲಕ್ಷಣ ತೋರಿದ್ರು. ಆದರೆ ಪೂರನ್​ 8 ರನ್​​ಗಳಿಸಿದ್ದಾಗ ಸಂದೀಪ್​​ ಶರ್ಮಾ ಎಸೆತದಲ್ಲಿ ಕಾಟ್​​ ಅಂಡ್​​ ಬೋಲ್ಡ್​​ ಆದ್ರು.

27 ರನ್​​​ಗಳಿಸಿದ್ದ ಮಾರ್ಕ್​ ರಾಂ ಕೂಡ ಸಮದ್​​ ಎಸೆತದಲ್ಲಿ ಔಟಾಗಿ ಹೊರ ನಡೆದ್ರು.  ಪಂಜಾಬ್​​​ ಕೆಳ ಸರದಿಯ ಆಟಗಾರರು ಕೂಡ ಹೆಚ್ಚು ಹೊತ್ತು ಕ್ರೀಸ್​​ನಲ್ಲಿ ನಿಲ್ಲಲಿಲ್ಲ.

ನಿಗದಿತ 20 ಓವರುಗಳಲ್ಲಿ ಪಂಜಾಬ್​​ ಕಿಂಗ್ಸ್​​​​ 7 ವಿಕೆಟ್​​ ಕಳೆದುಕೊಂಡು 125 ರನ್​​ಗಳಿಸಿತು. ಜೇಸನ್​ ಹೋಲ್ಡರ್​​ 19 ರನ್​​ಗೆ 3 ವಿಕೆಟ್​​ ಪಡೆದು ಯಶಸ್ವಿ ಬೌಲರ್​​ ಎನಿಸಿಕೊಂಡರು.

IPL 2021 saaksha tv

 

ಗುರಿ ಬೆನ್ನಟ್ಟಿದ ಸನ್​​ರೈಸರ್ಸ್​ ಕೂಡ ಪಿಚ್​​​ ಕಾಟ ಕೊಟ್ಟಿತು. ವಾರ್ನರ್​​ ಮೊದಲ ಓವರ್​​ನಲ್ಲೇ ಶಮಿಗೆ ವಿಕೆಟ್​​ ಒಪ್ಪಿಸಿದ್ರು. ಕೇನ್​​ ವಿಲಿಯಮ್ಸನ್​​ 1 ರನ್​​ಗಳಿಸಿ ಶಮಿ ಬೌಲಿಂಗ್​​ನಲ್ಲಿ ಔಟ್​​ ಆದ್ರು.

ವೃದ್ಧಿಮಾನ್​​ ಸಾಹ ಮತ್ತು ಮನೀಷ್​​ ಪಾಂಡೆ ಜೊತೆಯಾಟ ತುಂಬಾ ನಿಧಾನವಾಗಿತ್ತು.  ಈ ಹಂತದಲ್ಲಿ ದಾಳಿಗಿಳಿದ ರವಿ ಬಿಷ್ಣೋಯಿ 13 ರನ್​​ಗಳಿಸಿದ್ದ ಪಾಂಡೆಯನ್ನು ಕ್ಲೀನ್​​ ಬೌಲ್ಡ್​​ ಮಾಡಿದ್ರು.

12 ರನ್​​ಗಳಿಸಿದ್ದ ಜಾಧವ್​​ ಕೂಡ ಬಿಷ್ಣೋಯಿ ಎಸೆತದಲ್ಲಿ ಬೌಲ್ಡ್​​ ಆದಾಗ ಪಂಜಾಬ್​​ ಗೆಲುವಿನ ಲೆಕ್ಕಾಚಾರ ಹಾಕಿಕೊಂಡಿತ್ತು. ಇದರ ಬೆನ್ನಲ್ಲೇ ಅಬ್ದುಲ್​​ ಸಮದ್​​ ಕೂಡ ಬಿಷ್ಣೋಯಿ ಮ್ಯಾಜಿಕ್​​​ಗೆ ವಿಕೆಟ್​​ ಒಪ್ಪಿಸಿ ಹೊರ ನಡೆದ್ರು.

ಎಲ್ಲಾ ಮುಗೀತು ಅಂದುಕೊಂಡಿದ್ದಾಗ ಕ್ರೀಸ್​​ಗೆ ಇಳಿದ ಜೇಸನ್​​ ಹೋಲ್ಡರ್​​ ಸಿಕ್ಸರ್​​ಗಳ ಸುರಿಮಳೆ ಮಾಡಲು ಆರಂಭಿಸಿದರು. ಪಂಜಾಬ್​​ ಬೌಲರ್​​ಗಳು ಲಯ ತಪ್ಪಿದ್ರು.

ಈ ಮಧ್ಯೆ ಸಾಹಾ 31 ರನ್​ಗಳಿಸಿದ್ದಾಗ ಇಲ್ಲದ ರನ್​​ ಕದಿಯಲು ಹೋಗಿ ರನೌಟ್​ ಬಲೆಯಲ್ಲಿ ಬಿದ್ರು. ರಶೀದ್​​ ಖಾನ್​​​​ ಕೂಡ ಔಟಾದ್ರು. ಈ ಮಧ್ಯೆ ಹೋಲ್ಡರ್​​ 29 ಎಸೆತಗಳಲ್ಲಿ 5 ಸಿಕ್ಸರ್​​​​​​ ಮೂಲಕ ಅಜೇಯ 47 ರನ್​​ಗಳಿಸಿದರೂ ಅದು ಗೆಲುವು ತಂದುಕೊಡಲಿಲ್ಲ.

ಅಂತಿಮವಾಗಿ ಹೈದ್ರಾಬಾದ್​​​ 20 ಓವರುಗಳಲ್ಲಿ 7 ವಿಕೆಟ್​​ ಕಳೆದುಕೊಂಡು 120 ರನ್​​ಗಳಿಸಿತು. ಪಂಜಾಬ್​​ ಪರ ಬಿಷ್ಣೋಯಿ 3 ವಿಕೆಟ್​​ ಪಡೆದು ಮಿಂಚಿದ್ರು.

ಈ ಗೆಲುವಿನ ಮೂಲಕ ಪಂಜಾಬ್​​ ಪ್ಲೇ-ಆಫ್​​ ಆಸೆ ಜೀವಂತವಾಗಿದ್ದರೆ, ಸನ್​​ ರೈಸರ್ಸ್​ ಹೈದ್ರಾಬಾದ್​​ ಅಂತಿಮ 4ರ ಘಟ್ಟದಿಂದ ಹೊರಬಿತ್ತು.

Tags: #Saaksha TVIPLPunjabsrh
ShareTweetSendShare
Join us on:

Related Posts

gaming-lokakke-entry-kotta-java-yezdi-isgl-2026-esports-tournament

ಗೇಮಿಂಗ್ ಲೋಕಕ್ಕೆ ಎಂಟ್ರಿ ಕೊಟ್ಟ ಜಾವಾ, ಯೆಜ್ಡಿ; ಇ-ಸ್ಪೋರ್ಟ್ಸ್ ಟೂರ್ನಿಯಲ್ಲಿ ಕ್ಲಾಸಿಕ್ ಬೈಕ್‌ಗಳ ದರ್ಬಾರ್!

by admin
September 15, 2026
0

ಬೆಂಗಳೂರು: ಬೈಕ್ ರೈಡಿಂಗ್ ಮತ್ತು ವಿಡಿಯೋ ಗೇಮಿಂಗ್... ಇವೆರಡೂ ಇಂದಿನ ಯುವಜನತೆಯ ಅಚ್ಚುಮೆಚ್ಚಿನ ಹವ್ಯಾಸಗಳು. ಇದೀಗ ಈ ಎರಡು ವಿಭಿನ್ನ ಲೋಕಗಳನ್ನು ಒಂದೇ ವೇದಿಕೆಯಲ್ಲಿ ತರಲು 'ಕ್ಲಾಸಿಕ್...

2-koti-rupayi-vechchadalli-vc-naalegala-abhivruddhi-kamagarige-guddali-pooje

2 ಕೋಟಿ ರೂ. ವೆಚ್ಚದಲ್ಲಿ ವಿಸಿ ನಾಲೆಗಳ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ

by admin
September 15, 2026
0

ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಪಾಂಡವಪುರ ತಾಲೂಕಿನ ಹಿರೇಮರಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 2 ಕೋಟಿ ರೂ. ವೆಚ್ಚದಲ್ಲಿ ವಿಸಿ ನಾಲೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು. ಹಿರೇಮರಳಿ...

hosa-ashaya-noothana-kayakalpadondige-karnataka-sangha-qatar-kannada-pathashale-punararambha

ಹೊಸ ಆಶಯ, ನೂತನ ಕಾಯಕಲ್ಪದೊಂದಿಗೆ ಕರ್ನಾಟಕ ಸಂಘ ಕತಾರ್‌ನ ‘ಕನ್ನಡ ಪಾಠಶಾಲೆ’ ಪುನರಾರಂಭ

by admin
September 15, 2026
0

ದೋಹಾ (ಕತಾರ್): ವಿದೇಶದಲ್ಲಿ ನೆಲೆಸಿರುವ ಕನ್ನಡಿಗರ ಮಕ್ಕಳಿಗೆ ಕನ್ನಡ ಭಾಷೆ, ನಾಡು-ನುಡಿ ಹಾಗೂ ಸಂಸ್ಕೃತಿಯ ಪರಿಚಯವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಕರ್ನಾಟಕ ಸಂಘ ಕತಾರ್ (KSQ)...

mandalao-vantara-launch-historic-elephant-conservation-programme-laos

ಮಂಡಲಾವೊ ಎಲಿಫೆಂಟ್ ಕನ್ಸರ್ವೇಶನ್ ಮತ್ತು ವಂತರಾದಿಂದ ಲಾವೋಸ್‌ನಲ್ಲಿ ಐತಿಹಾಸಿಕ ಆನೆ ಸಂರಕ್ಷಣಾ ಕಾರ್ಯಕ್ರಮಕ್ಕೆ ಚಾಲನೆ

by admin
September 15, 2026
0

* ಈ ಪಾಲುದಾರಿಕೆಯು ಆನೆಗಳ ಪಶುವೈದ್ಯಕೀಯ ಸಾಮರ್ಥ್ಯವನ್ನು ವಿಸ್ತರಿಸಲಿದೆ. ಆನೆಗಳಿಗೆ ವಿಶ್ರಾಂತಿ ಹಾಗೂ ಆಜೀವ ಆರೈಕೆಯನ್ನು ಒದಗಿಸಲಿದೆ ಮತ್ತು ಲಾವೋಸ್‌ನ ಕಾಡು ಆನೆಗಳ ಸಂರಕ್ಷಣೆಗೆ ಬಲ ತುಂಬಲಿದೆ....

mukesh-ambani-calls-for-more-women-leadership-in-corporate-sector

ಕಾರ್ಪೊರೇಟ್‌ ವಲಯಕ್ಕೆ ಮಹಿಳಾ ನಾಯಕತ್ವ ಅಗತ್ಯ: ಮುಕೇಶ್‌ ಅಂಬಾನಿ

by admin
September 15, 2026
0

ಮುಂಬಯಿ: ಭಾರತದ ಕಾರ್ಪೊರೇಟ್‌ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ಹಾಗೂ ತಾಯಂದಿರನ್ನು ಬೆಂಬಲಿಸಲು ಎಲ್ಲರೂ ಒಟ್ಟಾಗಿ ಉತ್ತಮ ವ್ಯವಸ್ಥೆಯನ್ನು ರೂಪಿಸಬೇಕು. ಇಲ್ಲಿ ಮಹಿಳಾ ನಾಯಕತ್ವ ಹೆಚ್ಚಬೇಕು ಎಂದು...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram