ಐಪಿಎಲ್ 2021 | ಟಾಸ್ ಗೆದ್ದ ಆರ್ ಸಿಬಿ ಬ್ಯಾಟಿಂಗ್ ಆಯ್ಕೆ
ಶಾರ್ಜಾ : ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಪ್ಲೇ ಆಫ್ ಗೇರಲು ಕೂದಲೆಳೆ ಅವಕಾಶ ಉಳಿಸಿಕೊಂಡಿರುವ ಕೆ.ಎಲ್.ರಾಹುಲ್ ನಾಯಕತ್ವದ ಪಂಬಾಬ್ ಕಿಂಗ್ಸ್, ಈ ಪಂದ್ಯಕ್ಕಾಗಿ ಮೂರು ಬದಲಾವಣೆ ಮಾಡಿಕೊಂಡಿದೆ.
ಫ್ಯಾಬಿಯನ್ ಅಲೆನ್ ಬದಲಿಗೆ ಹರ್ಪ್ರೀತ್ ಬ್ರರ್, ದೀಪಕ್ ಹೂಡಾ ಬದಲಿಗೆ ಮಂದೀಪ್ ಸಿಂಗ್ ಮತ್ತು ನಥನ್ ಎಲಿಸ್ ಬದಲಿಗೆ ಮೋಸಿಸ್ ಹೆನ್ರಿಕ್ಸ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಆರ್ ಸಿಬಿ ತಂಡ ಯಾವುದೇ ಬದಲಾವಣೆ ಮಾಡಿಕೊಂಡಿಲ್ಲ.
ತಂಡಗಳು:
ಬೆಂಗಳೂರು: ವಿರಾಟ್ ಕೊಹ್ಲಿ (ನಾ), ದೇವದತ್ ಪಡಿಕ್ಕಲ್, ಕೆಎಸ್ ಭರತ್ (ವಿ.ಕೀ), ಗ್ಲೆನ್ ಮ್ಯಾಕ್ಸ್ವೆಲ್, ಎಬಿ ಡಿ ವಿಲಿಯರ್ಸ್, ಶಹಬಾಜ್ ಅಹಮದ್, ಡ್ಯಾನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜುವೇಂದ್ರ ಚಾಹಲ್
ಪಂಜಾಬ್: ಕೆಎಲ್ ರಾಹುಲ್ (ನಾ & ವಿ.ಕೀ), ಮಯಾಂಕ್ ಅಗರ್ವಾಲ್, ನಿಕೋಲಸ್ ಪೂರನ್, ಏಡೆನ್ ಮಾರ್ಕ್ರಮ್, ಶಾರುಖ್ ಖಾನ್, ಮಂದೀಪ್ ಸಿಂಗ್, ಹರ್ ಪ್ರೀತ್ ಬ್ರಾರ್, ಮೋಸಿಸ್ ಹೆನ್ರಿಕ್ಸ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯಿ, ಅರ್ಷದೀಪ್ ಸಿಂಗ್









