ಐಪಿಎಲ್ 2021- ಸೂಪರ್ ಸಂಡೆಯ ಸೂಪರ್ ಮ್ಯಾಚ್ ನಲ್ಲಿ ಕೆಕೆಆರ್ – ಆರ್ ಸಿಬಿ ಫೈಟ್
14ನೇ ಆವೃತ್ತಿಯ 10ನೇ ಪಂದ್ಯದಲ್ಲಿ ಆರ್ ಸಿಬಿ ಮತ್ತು ಕೆಕೆಆರ್ ತಂಡಗಳು ಮುಖಾಮುಖಿಯಾಗಲಿವೆ.
ಚೆನ್ನೈನಲ್ಲಿ ಮಧ್ಯಾಹ್ನ 3.30ಕ್ಕೆ ನಡೆಯಲಿರುವ ಈ ಪಂದ್ಯ ರೋಚಕವಾಗಿ ಸಾಗುವುದರಲ್ಲಿ ಎರಡು ಮಾತಿಲ್ಲ. ಅಷ್ಟೇ ಅಲ್ಲ, ಈ ಪಂದ್ಯ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿಯವರಿಗೆ ಅವಿಸ್ಮರಣೀಯವಾಗಲಿದೆ. ಇದೇ ದಿನ ಅಂದ್ರೆ ಏಪ್ರಿಲ್ 18ರಂದು ವಿರಾಟ್ ಕೊಹ್ಲಿ 2008ರಲ್ಲಿ ಆರ್ ಸಿಬಿ ಪರ ಮೊದಲ ಪಂದ್ಯವನ್ನು ಆಡಿದ್ದರು. ಆ ನಂತರ ಕಳೆದ 14 ಆವೃತ್ತಿಗಳಲ್ಲಿ ವಿರಾಟ್ ಕೊಹ್ಲಿ ಆರ್ ಸಿಬಿ ಆಟಗಾರನಾಗಿ ಜೊತೆಗೆ ನಾಯಕನಾಗಿ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಈಗಾಗಲೇ ಆರ್ ಸಿಬಿ ಆಡಿರುವ ಎರಡು ಪಂದ್ಯಗಳಲ್ಲೂ ಜಯ ಸಾಧಿಸಿ ಫುಲ್ ಝೂಮ್ ನಲ್ಲಿದೆ. ಹೀಗಾಗಿ ವಿರಾಟ್ ಕೊಹ್ಲಿ ವಿನ್ನಿಂಗ್ ಕಾಂಬಿನೇಷನ್ ಏನಿದೆಯೋ ಅದನ್ನೇ ಮುಂದುವರಿಸಿಕೊಂಡು ಹೋಗುವ ಸಾಧ್ಯತೆ ಇದೆ.
ಇನ್ನೊಂದೆಡೆ ಕೆಕೆಆರ್ ತಂಡ ಮೊದಲ ಪಂದ್ಯವನ್ನು ಗೆದ್ರೂ ಎರಡನೇ ಪಂದ್ಯದಲ್ಲಿ ಸೋಲು ಅನುಭವಿಸಿದೆ. ಹೀಗಾಗಿ ಮೂರನೇ ಪಂದ್ಯದಲ್ಲಿ ಗೆಲುವನ್ನು ಎದುರು ನೋಡುತ್ತಿದೆ.
ಇನ್ನು ಎರಡು ತಂಡಗಳು ಐಪಿಎಲ್ ನಲ್ಲಿ 26 ಬಾರಿ ಕಾದಾಟ ನಡೆಸಿವೆ. ಇದ್ರಲ್ಲಿ ಆರ್ ಸಿಬಿ 12 ಬಾರಿ ಜಯ ಸಾಧಿಸಿದ್ರೆ, ಕೆಕೆಆರ್ 14 ಬಾರಿ ಗೆಲುವು ದಾಖಲಿಸಿದೆ. ಅಂಕಿ ಅಂಶಗಳ ಪ್ರಕಾರ ಕೆಕೆಆರ್ ಒಂದು ಹೆಜ್ಜೆ ಮುಂದಿದೆ.
ಮತ್ತೊಂದು ಅಂಕಿ ಅಂಶವನ್ನು ನೋಡುವುದಾದ್ರೆ, ಐಪಿಎಲ್ ನಲ್ಲಿ ಆರ್ ಸಿಬಿ 197 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 93 ಪಂದ್ಯಗಳಲ್ಲಿ ಜಯ ಹಾಗೂ 101 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಹಾಗೇ ಕೆಕೆಆರ್ ತಂಡ 194 ಪಂದ್ಯಗಳನ್ನು ಆಡಿದ್ದು, 100 ಪಂದ್ಯಗಳಲ್ಲಿ ಜಯ ಹಾಗೂ 94 ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಒಟ್ಟಿನಲ್ಲಿ ಉಭಯ ತಂಡಗಳಿಗೆ ಟೂರ್ನಿಯ ಮೂರನೇ ಪಂದ್ಯವಾಗಿದೆ. ಸೋಲಿನಿಂದ ಹೊರಬರಲು ಕೆಕೆಆರ್ ಹೋರಾಟ ನಡೆಸಿದ್ರೆ, ಗೆಲುವಿನ ಓಟವನ್ನು ಮುಂದುವರಿಸಿಕೊಂಡು ಹೋಗುವ ತವಕದಲ್ಲಿದೆ ಆರ್ ಸಿಬಿ
ಆರ್ ಸಿಬಿ ಸಂಭವನೀಯ ತಂಡ
ವಿರಾಟ್ ಕೊಹ್ಲಿ (ನಾಯಕ), ದೇವದತ್ ಪಡಿಕ್ಕಲ್, ಗ್ಲೇನ್ ಮ್ಯಾಕ್ಸ್ ವೆಲ್, ಎಬಿಡಿ ವಿಲಿಯರ್ಸ್, ಶಹಬಾಝ್ ಅಹ್ಮದ್, ಡಾನ್ ಕ್ರಿಸ್ಟಿಯಾನ್, ವಾಷಿಂಗ್ಟನ್ ಸುಂದರ್, ಕೈಲ್ ಜಾಮಿನ್ಸನ್, ಹರ್ಷೆಲ್ ಪಟೇಲ್, ಮಹಮ್ಮದ್ ಸೀರಾಜ್, ಯುಜುವೇಂದ್ರ ಚಾಹಲ್.
ಕೆಕೆಆರ್ ಸಂಭವನೀಯ ತಂಡ
ಶುಬ್ಮನ್ ಗಿಲ್, ನಿತೇಶ್ ರಾಣಾ, ರಾಹುಲ್ ತ್ರಿಪಾಠಿ, ಇಯಾನ್ ಮೊರ್ಗಾನ್ (ನಾಯಕ), ದಿನೇಶ್ ಕಾರ್ತಿಕ್, ಆಂಡ್ರೆ ರಸೆಲ್, ಶಕೀಬ್ ಆಲ್ ಹಸನ್, ಪ್ಯಾಟ್ ಕಮಿನ್ಸ್, ಹರ್ಭಜನ್ ಸಿಂಗ್, ವರುಣ್ ಚಕ್ರವರ್ತಿ, ಪ್ರಸಿದ್ದ್ ಕೃಷ್ಣ,