ADVERTISEMENT
Sunday, March 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home IPL 2021

2021ರ ಐಪಿಎಲ್ ಟೂರ್ನಿಗೆ ಆರ್ ಸಿಬಿ ಫುಲ್ ಟೀಮ್…!

admin by admin
March 22, 2021
in IPL 2021, Newsbeat, ಐಪಿಎಲ್ 2021
virat kohli rcb ipl 2021
Share on FacebookShare on TwitterShare on WhatsappShare on Telegram

2021ರ ಐಪಿಎಲ್ ಟೂರ್ನಿಗೆ ಆರ್ ಸಿಬಿ ಫುಲ್ ಟೀಮ್…!

IPL 2021: Royal Challengers Bangalore Full Squad For 14th Edition

Related posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

March 22, 2026
ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

March 22, 2026

ipl 2021 rcb saakshatvರಾಯಲ್ ಚಾಲೆಂಜರ್ಸ್ ಬೆಂಗಳೂರು.. ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ ಎಂಬ ಹೆಗ್ಗಳಿಕೆ ಇದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಅಂತ ಫೇಮಸ್ ಆಗಿರುವ ಎಬಿಡಿ ವಿಲಿಯರ್ಸ್ ಆರ್ ಸಿಬಿ ತಂಡಗಳ ಪ್ರಮುಖ ಸ್ಟಾರ್ ಆಟಗಾರರು. ಅದೇ ರೀತಿ ಆರ್ ಸಿಬಿ ತಂಡದಲ್ಲಿ ಈ ಹಿಂದೆ ಘಟಾನುಘಟಿ ಆಟಗಾರರು ಆಡಿದ್ದಾರೆ.
ಆದ್ರೂ ಐಪಿಎಲ್ ನಲ್ಲಿ ಆರ್ ಸಿಬಿ ಸಾಧನೆ ಅಷ್ಟಕ್ಕಷ್ಟೇ.. ಪ್ರತಿ ಬಾರಿಯೂ ಅಭಿಮಾನಿಗಳು ಈ ಬಾರಿ ಕಪ್ ನಮ್ದೆ ಅಂತ ಅಭಿಯಾನ ಮಾಡ್ತಾರೆ. ಆದ್ರೆ ಆರ್ ಸಿಬಿ ಕಳೆದ 13 ವರ್ಷಗಳಿಂದಲೂ ತನ್ನ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಿದೆ. ಆದ್ರೂ ಅಭಿಮಾನಿಗಳು ಆರ್ ಸಿಬಿ ಮೇಲಿರುವ ಭರವಸೆ, ನಂಬಿಕೆ ಮತ್ತು ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ.
ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ ಆರ್ ಸಿಬಿ ಮೂರು ಬಾರಿ ರನ್ನರ್ ಅಪ್ ಆಗಿರೋದು ಶ್ರೇಷ್ಠ ಸಾಧನೆಯಾಗಿದೆ. ಮೂರು ಬಾರಿ ಪ್ಲೇ ಆಫ್‍ಗೆ ಸಮಾಧಾನಪಟ್ಟುಕೊಂಡಿದೆ. ಇನ್ನುಳಿದ ಏಳು ಆವೃತ್ತಿಗಳಲ್ಲಿ ನಿರಾಸೆಯ ಮೂಡಿಸುವಂತಹ ಪ್ರದರ್ಶನ ನೀಡಿದೆ.
ಒಟ್ಟಾರೆ ಐಪಿಎಲ್ ನಲ್ಲಿ ಆರ್ ಸಿಬಿ ತಂಡ 196 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 89 ಪಂದ್ಯಗಳನ್ನು ಗೆದ್ದುಕೊಂಡ್ರೆ, 100 ಪಂದ್ಯಗಳಲ್ಲಿ ಸೋತಿದೆ. ಎರಡು ಬಾರಿ ಟೈಗೊಂಡು ಗೆದ್ದಿದೆ. ಒಂದು ಬಾರಿ ಟೈ ಆಗಿ ಸೋತಿದೆ. ಐದು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.

IPL 2021: Royal Challengers Bangalore Full Squad For 14th Edition
ಇನ್ನು ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಯುಜುವೇಂದ್ರ ಚಾಹಲ್ ಅಗ್ರ ಸ್ಥಾನದಲ್ಲಿದ್ದಾರೆ. ಚಾಹಲ್ 121 ವಿಕೆಟ್ ಪಡೆದಿದ್ದಾರೆ. ಹಾಗೇ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ 5878 ರನ್ ದಾಖಲಿಸಿದ್ರೆ, ಎಬಿಡಿ ವಿಲಿಯರ್ಸ್ 4178 ರನ್ ಕಲೆ ಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐದು ಶತಕ ಹಾಗೂ 39 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 2016ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 973 ರನ್ ದಾಖಲಿಸಿದ್ದರು.
ಹಾಗೇ ಈ ಬಾರಿಯ ಐಪಿಎಲ್ ನಲ್ಲೂ ಆರ್ ಸಿಬಿ ತಂಡದ ಮೇಲೆ ಅಪಾರ ನಂಬಿಕೆ ಇದೆ. ಪ್ರಶಸ್ತಿ ಗೆಲ್ಲಬೇಕು ಅನ್ನೋದು ಅಭಿಮಾನಿಗಳ ಆಸೆ.
ಈ ಬಾರಿ ತಂಡಕ್ಕೆ ಯುವ ಬ್ಯಾಟ್ಸ್ ಮೆನ್ ಮಹಮ್ಮದ್ ಅಜರುದ್ದೀನ್, ಡಾನ್ ಕ್ರಿಸ್ಟಿಯಾನ್, ಗ್ಲೇನ್ ಮ್ಯಾಕ್ಸ್ ವೆಲ್ ಮೊದಲಾದವರು ಸೇರಿಕೊಂಡಿದ್ದಾರೆ. ಅದೇ ರೀತಿ ಜೋಶ್ ಪಿಲಿಪ್ಪೆ ಬದಲು ಫಿನ್ ಆಲೆನ್ ಕೊನೆಯ ಕ್ಷಣದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

2021ರ ಐಪಿಎಲ್ ಗೆ ಆರ್ ಸಿಬಿ ತಂಡ ಹೀಗಿದೆ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು

ವಿರಾಟ್ ಕೊಹ್ಲಿ (ನಾಯಕ), ಎಬಿಡಿ ವಿಲಿಯರ್ಸ್, ಯುಜುವೇಂದ್ರ ಚಾಹಲ್, ದೇವದತ್ತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮಹಮ್ಮದ್ ಸೀರಾಜ್, ಕಾನೆ ರಿಚಡ್ರ್ಸನ್, ಆಡಮ್ ಝಂಪಾ, ಫಿನ್ ಆಲೆನ್, ಶಹಾಬಾಝ್ ಅಹಮ್ಮದ್, ಪವನ್ ದೇಶಪಾಂಡೆ, (ಖರೀದಿ ಮಾಡಿದ ಆಟಗಾರರು) ಕೈಲ್ ಜಾಮಿಸನ್, ಗ್ಲೇನ್ ಮ್ಯಾಕ್ಸ್ ವೆಲ್, ಡಾನ್ ಕ್ರಿಸ್ಟಿಯಾನ್, ಸಚಿನ್ ಬೇಬಿ, ರಜತ್ ಪಟಿದಾರ್, ಮಹಮ್ಮದ್ ಅಜರುದ್ದೀನ್, ಸೂಯಾಶ್ ಪ್ರಭು ದೇಸಾಯಿ, ಭರತ್

#IPL2021 #RoyalChallengersBangalore #rcb #rcbFull Squad  #14th Editionipl #viratkohli #saakshatv #saakshatvsports #cricket #t-20cricket #bcci #ipl

Tags: #saakshatvbcciIPLipl 14th editionipl 2021rainewzrcb full teamRoyal Challengers Bangaloresaakshatvsportsvirat kohli
ShareTweetSendShare
Join us on:

Related Posts

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

ಗಂಗಾ ನದಿಯಲ್ಲಿ ಇಫ್ತಾರ್ ಕೂಟ 14 ಯುವಕರ ಬಂಧನ ಖಂಡಿಸಿದ ಓವೈಸಿ ಕೊಳಚೆ ನೀರು ಸೇರಿದಾಗ ಧಕ್ಕೆಯಾಗದ ಭಾವನೆ ಊಟ ಮಾಡಿದರೆ ಘಾಸಿಯಾಗುತ್ತದೆಯೇ

by Shwetha
March 22, 2026
0

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಪವಿತ್ರ ಗಂಗಾ ನದಿಯ ದೋಣಿಯೊಂದರಲ್ಲಿ ಇಫ್ತಾರ್ ಕೂಟ ನಡೆಸಿದ ಆರೋಪದ ಮೇಲೆ 14 ಮುಸ್ಲಿಂ ಯುವಕರನ್ನು ಪೊಲೀಸರು ಬಂಧಿಸಿರುವ ಘಟನೆ ಈಗ ಭಾರಿ...

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

ಹೆದರಿ ಹಿಂದೆ ಸರಿದಿಲ್ಲ ಭೇಟೆ ಆಡಲು ಹೊಂಚು ಹಾಕಿದ್ದಾರೆ ರಾಕಿಂಗ್ ಸ್ಟಾರ್ ಯಶ್ : ಧುರಂಧರ್ 2 ಅಬ್ಬರದ ನಡುವೆ ಟಾಕ್ಸಿಕ್ ಸೈಲೆಂಟ್ ಆಗಿದ್ದೇಕೆ!

by Shwetha
March 22, 2026
0

ಕನ್ನಡ ಚಿತ್ರರಂಗ ಮಾತ್ರವಲ್ಲ ಇಡೀ ಭಾರತೀಯ ಚಿತ್ರರಂಗವೇ ಕಾತುರದಿಂದ ಕಾಯುತ್ತಿದ್ದ ಮಹಾ ಘರ್ಷಣೆಯೊಂದು ಸ್ವಲ್ಪದರಲ್ಲೇ ತಪ್ಪಿದೆ. ಕೆಜಿಎಫ್ 2 ಬಿಡುಗಡೆಯಾಗಿ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ಯಶ್...

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

ನೆರೆಹೊರೆಯವರನ್ನು ನೆಮ್ಮದಿಯಿಂದ ಇರಲು ಬಿಡದ ಪಾಕಿಸ್ತಾನ ಮತ್ತು ಇಸ್ರೇಲ್ ಒಂದೇ ಪಾಕಿಸ್ತಾನದ ವಿರುದ್ಧ ಓವೈಸಿ ಆಕ್ರೋಶ

by Shwetha
March 22, 2026
0

ಹೈದರಾಬಾದ್ ನ ಐತಿಹಾಸಿಕ ಮೆಕ್ಕಾ ಮಸೀದಿಯಲ್ಲಿ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್ ಓವೈಸಿ ಅವರು ಪಾಕಿಸ್ತಾನದ ವಿರುದ್ಧ ಹಿಂದೆಂದೂ ಕಾಣದಂತಹ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮುಸ್ಲಿಂ...

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

ಬಾಯಿ ಚಪಲಕ್ಕೆ ಮಾತನಾಡುವ ಮೂರ್ಖರಿಗೆ ನಾನು ಉತ್ತರಿಸಲ್ಲ ಯತ್ನಾಳ್ ವಿರುದ್ಧ ಗುಡುಗಿದ ಬಿ ವೈ ವಿಜಯೇಂದ್ರ

by Shwetha
March 22, 2026
0

ರಾಜ್ಯ ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಹಾಗೂ ನಾಯಕರ ನಡುವಿನ ವಾಗ್ಯುದ್ಧ ದಿನದಿಂದ ದಿನಕ್ಕೆ ತಾರಕಕ್ಕೇರುತ್ತಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಬಿಜೆಪಿ ಉದ್ದೇಶಪೂರ್ವಕವಾಗಿ ಡಮ್ಮಿ ಅಭ್ಯರ್ಥಿಯನ್ನು...

ದಿನ ಭವಿಷ್ಯ (09-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

ದಿನ ಭವಿಷ್ಯ (22-03-2026) Daily Horoscope ಯಾವ ರಾಶಿಗೆ ಶುಭ..? ಯಾರಿಗೆ ಅಶುಭ..?

by Shwetha
March 22, 2026
0

ದಿನ ಭವಿಷ್ಯ: 22-03-2026 ಮೇಷ ರಾಶಿ: ಇಂದು ನಿಮಗೆ ಅತ್ಯಂತ ಉತ್ಸಾಹಭರಿತ ದಿನವಾಗಲಿದೆ. ಉದ್ಯೋಗದಲ್ಲಿ ನಿಮ್ಮ ಕಾರ್ಯಕ್ಷಮತೆಗೆ ತಕ್ಕ ಮನ್ನಣೆ ದೊರೆಯಲಿದ್ದು, ಹೊಸ ಜವಾಬ್ದಾರಿಗಳು ಸಿಗುವ ಸಾಧ್ಯತೆ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram