2021ರ ಐಪಿಎಲ್ ಟೂರ್ನಿಗೆ ಆರ್ ಸಿಬಿ ಫುಲ್ ಟೀಮ್…!
IPL 2021: Royal Challengers Bangalore Full Squad For 14th Edition
ರಾಯಲ್ ಚಾಲೆಂಜರ್ಸ್ ಬೆಂಗಳೂರು.. ಐಪಿಎಲ್ ನಲ್ಲಿ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿರುವ ತಂಡ ಎಂಬ ಹೆಗ್ಗಳಿಕೆ ಇದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಅಂತ ಫೇಮಸ್ ಆಗಿರುವ ಎಬಿಡಿ ವಿಲಿಯರ್ಸ್ ಆರ್ ಸಿಬಿ ತಂಡಗಳ ಪ್ರಮುಖ ಸ್ಟಾರ್ ಆಟಗಾರರು. ಅದೇ ರೀತಿ ಆರ್ ಸಿಬಿ ತಂಡದಲ್ಲಿ ಈ ಹಿಂದೆ ಘಟಾನುಘಟಿ ಆಟಗಾರರು ಆಡಿದ್ದಾರೆ.
ಆದ್ರೂ ಐಪಿಎಲ್ ನಲ್ಲಿ ಆರ್ ಸಿಬಿ ಸಾಧನೆ ಅಷ್ಟಕ್ಕಷ್ಟೇ.. ಪ್ರತಿ ಬಾರಿಯೂ ಅಭಿಮಾನಿಗಳು ಈ ಬಾರಿ ಕಪ್ ನಮ್ದೆ ಅಂತ ಅಭಿಯಾನ ಮಾಡ್ತಾರೆ. ಆದ್ರೆ ಆರ್ ಸಿಬಿ ಕಳೆದ 13 ವರ್ಷಗಳಿಂದಲೂ ತನ್ನ ಅಭಿಮಾನಿಗಳನ್ನು ನಿರಾಸೆಗೊಳಿಸುತ್ತಿದೆ. ಆದ್ರೂ ಅಭಿಮಾನಿಗಳು ಆರ್ ಸಿಬಿ ಮೇಲಿರುವ ಭರವಸೆ, ನಂಬಿಕೆ ಮತ್ತು ಅಭಿಮಾನ ಮಾತ್ರ ಕಿಂಚಿತ್ತೂ ಕಮ್ಮಿಯಾಗಿಲ್ಲ.
ಕಳೆದ 13 ಐಪಿಎಲ್ ಟೂರ್ನಿಗಳಲ್ಲಿ ಆರ್ ಸಿಬಿ ಮೂರು ಬಾರಿ ರನ್ನರ್ ಅಪ್ ಆಗಿರೋದು ಶ್ರೇಷ್ಠ ಸಾಧನೆಯಾಗಿದೆ. ಮೂರು ಬಾರಿ ಪ್ಲೇ ಆಫ್ಗೆ ಸಮಾಧಾನಪಟ್ಟುಕೊಂಡಿದೆ. ಇನ್ನುಳಿದ ಏಳು ಆವೃತ್ತಿಗಳಲ್ಲಿ ನಿರಾಸೆಯ ಮೂಡಿಸುವಂತಹ ಪ್ರದರ್ಶನ ನೀಡಿದೆ.
ಒಟ್ಟಾರೆ ಐಪಿಎಲ್ ನಲ್ಲಿ ಆರ್ ಸಿಬಿ ತಂಡ 196 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ 89 ಪಂದ್ಯಗಳನ್ನು ಗೆದ್ದುಕೊಂಡ್ರೆ, 100 ಪಂದ್ಯಗಳಲ್ಲಿ ಸೋತಿದೆ. ಎರಡು ಬಾರಿ ಟೈಗೊಂಡು ಗೆದ್ದಿದೆ. ಒಂದು ಬಾರಿ ಟೈ ಆಗಿ ಸೋತಿದೆ. ಐದು ಪಂದ್ಯಗಳಲ್ಲಿ ಫಲಿತಾಂಶ ಬಂದಿಲ್ಲ.
IPL 2021: Royal Challengers Bangalore Full Squad For 14th Edition
ಇನ್ನು ಗರಿಷ್ಠ ವಿಕೆಟ್ ಪಡೆದವರ ಸಾಲಿನಲ್ಲಿ ಯುಜುವೇಂದ್ರ ಚಾಹಲ್ ಅಗ್ರ ಸ್ಥಾನದಲ್ಲಿದ್ದಾರೆ. ಚಾಹಲ್ 121 ವಿಕೆಟ್ ಪಡೆದಿದ್ದಾರೆ. ಹಾಗೇ ಬ್ಯಾಟಿಂಗ್ ನಲ್ಲಿ ವಿರಾಟ್ ಕೊಹ್ಲಿ 5878 ರನ್ ದಾಖಲಿಸಿದ್ರೆ, ಎಬಿಡಿ ವಿಲಿಯರ್ಸ್ 4178 ರನ್ ಕಲೆ ಹಾಕಿದ್ದಾರೆ. ಇನ್ನು ವಿರಾಟ್ ಕೊಹ್ಲಿ ಐದು ಶತಕ ಹಾಗೂ 39 ಅರ್ಧಶತಕಗಳನ್ನು ದಾಖಲಿಸಿದ್ದಾರೆ. 2016ರ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ 973 ರನ್ ದಾಖಲಿಸಿದ್ದರು.
ಹಾಗೇ ಈ ಬಾರಿಯ ಐಪಿಎಲ್ ನಲ್ಲೂ ಆರ್ ಸಿಬಿ ತಂಡದ ಮೇಲೆ ಅಪಾರ ನಂಬಿಕೆ ಇದೆ. ಪ್ರಶಸ್ತಿ ಗೆಲ್ಲಬೇಕು ಅನ್ನೋದು ಅಭಿಮಾನಿಗಳ ಆಸೆ.
ಈ ಬಾರಿ ತಂಡಕ್ಕೆ ಯುವ ಬ್ಯಾಟ್ಸ್ ಮೆನ್ ಮಹಮ್ಮದ್ ಅಜರುದ್ದೀನ್, ಡಾನ್ ಕ್ರಿಸ್ಟಿಯಾನ್, ಗ್ಲೇನ್ ಮ್ಯಾಕ್ಸ್ ವೆಲ್ ಮೊದಲಾದವರು ಸೇರಿಕೊಂಡಿದ್ದಾರೆ. ಅದೇ ರೀತಿ ಜೋಶ್ ಪಿಲಿಪ್ಪೆ ಬದಲು ಫಿನ್ ಆಲೆನ್ ಕೊನೆಯ ಕ್ಷಣದಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.
2021ರ ಐಪಿಎಲ್ ಗೆ ಆರ್ ಸಿಬಿ ತಂಡ ಹೀಗಿದೆ..!
ರಾಯಲ್ ಚಾಲೆಂಜರ್ಸ್ ಬೆಂಗಳೂರು
ವಿರಾಟ್ ಕೊಹ್ಲಿ (ನಾಯಕ), ಎಬಿಡಿ ವಿಲಿಯರ್ಸ್, ಯುಜುವೇಂದ್ರ ಚಾಹಲ್, ದೇವದತ್ತ್ ಪಡಿಕ್ಕಲ್, ನವದೀಪ್ ಸೈನಿ, ವಾಷಿಂಗ್ಟನ್ ಸುಂದರ್, ಮಹಮ್ಮದ್ ಸೀರಾಜ್, ಕಾನೆ ರಿಚಡ್ರ್ಸನ್, ಆಡಮ್ ಝಂಪಾ, ಫಿನ್ ಆಲೆನ್, ಶಹಾಬಾಝ್ ಅಹಮ್ಮದ್, ಪವನ್ ದೇಶಪಾಂಡೆ, (ಖರೀದಿ ಮಾಡಿದ ಆಟಗಾರರು) ಕೈಲ್ ಜಾಮಿಸನ್, ಗ್ಲೇನ್ ಮ್ಯಾಕ್ಸ್ ವೆಲ್, ಡಾನ್ ಕ್ರಿಸ್ಟಿಯಾನ್, ಸಚಿನ್ ಬೇಬಿ, ರಜತ್ ಪಟಿದಾರ್, ಮಹಮ್ಮದ್ ಅಜರುದ್ದೀನ್, ಸೂಯಾಶ್ ಪ್ರಭು ದೇಸಾಯಿ, ಭರತ್
#IPL2021 #RoyalChallengersBangalore #rcb #rcbFull Squad #14th Editionipl #viratkohli #saakshatv #saakshatvsports #cricket #t-20cricket #bcci #ipl