ಐಪಿಎಲ್ 2021 | ರಾಹುಲ್ ವರ್ಸಸ್ ಸಂಜು : RR vs PBKS Preview
ಇವತ್ತಿನ ಐಪಿಎಲ್ ದಂಗಲ್ ನಲ್ಲಿ ಪಂಜಾಬ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಪಂಜಾಬ್ ಒಂದು ಬಾರಿ ಫೈನಲ್ ನಲ್ಲಿ ಮುಗ್ಗರಿಸಿದ್ರೆ, ರಾಜಸ್ಥಾನ್ ಒಂದು ಬಾರಿ ಚಾಂಪಿಯನ್ ಆಗಿದೆ. ಇನ್ನ ಕಳೆದ ವರ್ಷದ ಈ ಎರಡು ತಂಡಗಳು ಮೊದಲಾರ್ಧದಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ರೂ, ದ್ವಿತೀಯಾರ್ಧದಲ್ಲಿ ಮಕಾಡೆ ಮಲಗಿದ್ದವು. ಈಬಾರಿ ಹೊಸಬರ ಸೇರ್ಪಡೆ ಆಗಿದ್ದು, ಈ ಬಾರಿ ಯಾವ ರೀತಿ ಪ್ರದರ್ಶನ ನೀಡುತ್ವೆ ನೋಡಬೇಕು.
ಹೆಡ್ ಟು ಹೆಟ್
ಐಪಿಎಲ್ ನಲ್ಲಿ ಇಲ್ಲಿಯವರೆಗು ಈ ತಂಡಗಳು 21 ತಂಡಗಳಲ್ಲಿ ಮುಖಾಮುಖಿಯಾಗಿದ್ದು, 12 ಮ್ಯಾಚ್ ಗಳು ರಾಜಸ್ಥಾನ್ ಗೆದ್ದಿದ್ದರೇ ಪಂಜಾಬ್ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಗ್ರೌಂಡ್ ರಿಪೋರ್ಟ್
ಇಂದಿನ ಪಂದ್ಯ ಮುಂಬೈ ನಲ್ಲಿ ನಡೆಯಲಿದ್ದು, ಹೈ ಸ್ಕೋರಿಂಗ್ ಮ್ಯಾಚ್ ಆಗಲಿದೆ. ಎರಡೂ ತಂಡಗಳಲ್ಲಿ ಬಿಗ್ ಹಿಟ್ಟಿಂಗ್ ಬ್ಯಾಟ್ಸ್ ಮೆನ್ ಗಳ ದಂಡೇ ಇದ್ದು, ಔಟ್ ಅಂಡ್ ಔಟ್ ಫುಲ್ ಅಂಡ್ ಆಕ್ಷನ್ ಮಸಾಲಾ ಮ್ಯಾಚ್ ಆಗೋದ್ರಲ್ಲಿ ಡೌಟೇ ಇಲ್ಲ. ಟಾಸ್ ಗೆದ್ದ ಟೀಂ ಬೌಲಿಂಗ್ ಆಯ್ಕೆ ಮಾಡಿಕೊಳ್ಳುತ್ವೆ.
ಬಲಾಬಲ
ಎರಡೂ ತಂಡಗಳಲ್ಲಿ ಒಂದೇ ರೀತಿಯ ಸ್ಟ್ರೆಂಥ್ ಮತ್ತು ವಿಕ್ನೆಸ್ ಗಳು ಕಾಣಿಸುತ್ತಿವೆ. ಎರಡೂ ತಂಡಗಳಲ್ಲಿ ಟಾಪ್ ಆರ್ಡರ್ ಸಾಲಿಡ್ ಆಗಿದೆ. ಪಂಜಾಬ್ ಕಡೆ ರಾಹುಲ್,ಮಯಾಂಕ್, ಗೇಲ್, ಪೂರನ್ ಇದ್ದರೆ ರಾಜಸ್ಥಾನ್ ಕಡೆ ಸಂಜು ಸ್ಯಾಮ್ಸನ್, ಬೆನ್ ಸ್ಟ್ರೋಕ್ಸ್, ಬಟ್ಲರ್ ರಂತಹ ಬ್ಯಾಟ್ಸ್ ಮೆನ್ ಗಳಿದ್ದಾರೆ. ಅಂದ್ರೆ ಫಸ್ಟ್ ಟಾಪ್ ಆರ್ಡರ್ ಸ್ಟ್ರಾಂಗ್ ಇದೆ. ಆದ್ರೆ ಮಿಡಲ್ ಆರ್ಡರ್ ನಲ್ಲಿ ಎರಡೂ ತಂಡಗಳು ವೀಕ್ ಆಗಿರುವ ರೀತಿ ಕಾಣಿಸುತ್ವೆ. ಇದನ್ನ ಈ ಬಾರಿ ಹೊಸಬರು ಫಿಲ್ ಮಾಡುವ ಸಾಧ್ಯತೆಗಳಿವೆ.
ಇನ್ನ ಬೌಲಿಂಗ್ ನಲ್ಲೂ ಕೂಡ ಸೇಮ್ ವಿಕ್ನೆಸ್ ಎರಡೂ ತಂಡಗಳಲ್ಲಿದೆ. ಉಭಯ ತಂಡಗಳಲ್ಲಿ ವಿಕೆಟ್ ಟೇಕಿಂಗ್ ಬೌಲರ್ ನ ಕೊರತೆ ಇದೆ. ಈ ಬಾರಿಯ ಹರಾಜಿನಲ್ಲಿ ಪಂಜಾಬ್ ತಂಡ ಜೈಲ್ ರಿಚರ್ಡ್ ಸನ್, ರಾಜಸ್ತಾನ್ ತಂಡ ಕ್ರಿಸ್ ಮೋರಿಸ್ ಅವ್ರನ್ನ ಖರೀದಿಸಿದೆ. ಆದ್ರೆ ಇವರು ಯಾವ ರೀತಿ ಹೆಲ್ಪ್ ಆಗ್ತಾರೆ ಅನ್ನೋದನ್ನ ನೋಡಬೇಕಿದೆ. ಮುಖ್ಯವಾಗಿ ಕಳೆದ ಬಾರಿ ಪಂಜಾಬ್ ಗೆ ಜೋಫ್ರಾ ಆರ್ಚರ್ ಟ್ರಂಪ್ ಕಾರ್ಡ್ ಪ್ಲೇಯರ್ ಆಗಿದ್ದರು, ಆದ್ರೆ ಈ ಬಾರಿ ಅವರು ಐಪಿಎಲ್ ಆಡೋದು ಅನುಮಾನವಾಗಿದೆ.
ಆದ್ರೆ ಎರಡೂ ತಂಡಗಳಲ್ಲಿ ಟಾಪ್ ಆರ್ಡರ್ ಸ್ಟ್ರಾಂಗ್ ಇರೋದು ಪ್ಲಸ್ ಪಾಯಿಂಟ್ ಆಗಿದ್ದೂ, ಯಾವ ತಂಡದ ಟಾಪ್ ಆರ್ಡರ್ ಬ್ಲಾಸ್ಟ್ ಆಗುತ್ತೋ ಆ ತಂಡ ಗೆಲ್ಲೋದು ಖಚಿತ.
ಬೆಸ್ಟ್ ಇಲೆವನ್
ಪಂಜಾಬ್ : ಕೆ.ಎಲ್.ರಾಹುಲ್, ಮಯಾಂಕ್, ಗೇಲ್, ಪೂರನ್, ದೀಪಕ್ ಹೂಡಾ, ಶಾಕುಖ್ ಖಾನ್, ಮೋಸಿಸ್ ಹೆನ್ರಿಕೂಸ್, ಜೈ ರಿಚರ್ಡ್‍ಸನ್, ಶಮಿ, ಅರ್ಶೀದೀಪ್ ಸಿಂಗ್, ರವಿ ಬಿಸ್ನೈ
ರಾಜಸ್ಥಾನ್ : ಸಂಜು ಸ್ಯಾಮ್ಸನ್, ಬೆನ್ ಸ್ಕ್ರೋಕ್ಸ್, ಜೋಸ್ ಬಟ್ಲರ್, ರಿಯಾನ್ ಪರಗ್, ದೇವಿಡ್ ಮಿಲ್ಲರ್, ರಾಹುಲ್ ತೆವಾಟಿಯಾ, ಶಿವಂ ದುಬೆ,ಕ್ರಿಸ್ ಮೋರಿಸ್, ಶ್ರೇಯಸ್ ಗೋಪಾಲ್, ಕಾರ್ತಿಕ್ ತ್ಯಾಗಿ, ಉನಾದ್ಕಟ್.
ವಿನ್ನಿಂಗ್ ಚಾನ್ಸ್
ಆನ್ ಪೇಪರ್ ಟೀಂ ನೋಡಿದ್ರೆ ಪಂಜಾಬ್ ತಂಡ ಸ್ವಲ್ಪ ಬ್ಯಾಲನ್ಸಿಂಗ್ ಆಗಿದೆ. ಆದ್ದರಿಂದ ಪಂಜಾಬ್ ಗೆಲ್ಲೋ ಚಾನ್ಸ್ ಇದೆ.
ಪಂಜಾಬ್ 55% ರಾಜಸ್ಥಾನ್ 45%










