ಪಡಿಕ್ಕಲ್ ಮೂಲ ಕೇರಳ.. ಆದ್ರೆ ಕರುನಾಡಿನ ಹುಡುಗ – ಶಶಿ ತರೂರ್ ಗೆ ದೊಡ್ಡ ಗಣೇಶ್ ತರಾಟೆ.!

1 min read
doddaganesh ipl 2021 saakshatv

ಪಡಿಕ್ಕಲ್ ಮೂಲ ಕೇರಳ.. ಆದ್ರೆ ಕರುನಾಡಿನ ಹುಡುಗ – ಶಶಿ ತರೂರ್ ಗೆ ದೊಡ್ಡ ಗಣೇಶ್ ತರಾಟೆ.!

shashi taruru ipl 2021 saakshatvಸಾಮಾಜಿಕ ಜಾಲ ತಾಣದಲ್ಲಿ ಬಿಟ್ಟಿ ಪ್ರಚಾರ ಗಿಟ್ಟಿಸಿಕೊಳ್ಳಲು ಹೋದ ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರಿಗೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.
ಭಾರತದಲ್ಲಿ ಕ್ರಿಕೆಟ್ ಅನ್ನೋದು ಧರ್ಮ. ಈ ಕ್ರಿಕೆಟ್ ಧರ್ಮದಲ್ಲಿ ಯಾವತ್ತೂ ಕೂಡ ಜಾತಿ ಮತ ಅಡ್ಡಿ ಬಂದಿಲ್ಲ. ಎಲ್ಲೋ ಒಂದು ಕಡೆ ನಾವು, ನಮ್ಮವ, ನಮ್ಮವರು ಅನ್ನೋ ಭಾವನೆಗಳು ವ್ಯಕ್ತವಾಗಿವೆ.
ಅಷ್ಟಕ್ಕೂ ಆಗಿದ್ದೇನು ? ಐಪಿಎಲ್ ನಲ್ಲಿ ಸದ್ಯ ಎರಡು ಶತಕಗಳು ದಾಖಲಾಗಿವೆ. ರಾಜಸ್ತಾನ ರಾಯಲ್ಸ್ ನಾಯಕ ಸಂಜು ಸಾಮ್ಸನ್ ಮತ್ತು ಆರ್ ಸಿಬಿ ಆಟಗಾರ ದೇವ್ ದತ್ ಪಡಿಕ್ಕಲ್ ಅವರು ಶತಕ ದಾಖಲಿಸಿ ಗಮನ ಸೆಳೆದಿದ್ದಾರೆ.

IPL 2021: Shashi Tharoor lauds Devdutt Padikkal and Sanju Samson
ಇದನ್ನೇ ಪ್ರಚಾರದ ಅಸ್ತ್ರವಾಗಿಟ್ಟುಕೊಂಡ ಶಶಿ ತರೂರ್, ಈ ಬಾರಿಯ ಐಪಿಎಲ್ ನಲ್ಲಿ ಎರಡು ಶತಕಗಳನ್ನು ದಾಖಲಿಸಿದ್ದು ಇಬ್ಬರು ಮಲೆಯಾಳಿಗಳು. ಇಷ್ಟು ದಿನ ಕೇರಳವನ್ನು ಕ್ರಿಕೆಟ್ ಆಟದ ಹಿನ್ನೀರು ಎಂದು ಕರೆಯಲಾಗುತ್ತಿತ್ತು. ಆದ್ರೆ ಎರಡು ಶತಕಗಳನ್ನು ದಾಖಲಿಸಿರುವ ಮಲೆಯಾಳಿಗಳು ಎಷ್ಟೊಂದು ಸೋಜಿಗ ಎಂದು ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿದ್ದರು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೊಡ್ಡ ಗಣೇಶ್, 2016ರಲ್ಲಿ ಕರ್ನಾಟಕದ ಕರುಣ್ ನಾಯರ್ ಟೆಸ್ಟ್ ಕ್ರಿಕೆಟ್ ನಲ್ಲಿ ತ್ರಿಶತಕ ದಾಖಲಿಸಿದ್ದಾಗ ನಮ್ಮವರು ಎಂದು ಹೇಳಿಕೊಂಡಿದ್ದರು. ಆದ್ರೆ ತಂಡದಿಂದ ಸ್ಥಾನ ಕಳೆದುಕೊಂಡಾಗ ಸುಮ್ಮನಿದ್ರು. ಈಗ ದೇವ್ ದತ್ ಪಡಿಕ್ಕಲ್ ವಿಚಾರದಲ್ಲೂ ಅದೇ ನಡೆಯುತ್ತಿದ್ದೆ. ಪಡಿಕ್ಕಲ್ ಕೇರಳ ಮೂಲದವರು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ಆದ್ರೆ ಕರುಣ್ ನಾಯರ್, ದೇವ್ ದತ್ ಪಡಿಕ್ಕಲ್ ಅವರನ್ನು ಕ್ರಿಕೆಟಿಗರನ್ನಾಗಿ ರೂಪಿಸಿದ್ದು ಕೇರಳವಲ್ಲ. ಬದಲಾಗಿ ಕರ್ನಾಟಕ. ಅವರಿಬ್ಬರು ಕೇರಳ ಮೂಲದವರಾಗಿರಬಹುದು. ಆದ್ರೆ ಕರ್ನಾಟಕದ ಹುಡುಗರು ಎಂದು ದೊಡ್ಡ ಗಣೇಶ್ ತಿರುಗೇಟು ನೀಡಿದ್ದಾರೆ.
shashi taruru tweet saakshatv ipl 2021ಹಾಗೇ ಪ್ರಸ್ತುತ ಕರ್ನಾಟಕದಲ್ಲಿ ಬೇರೆ ರಾಜ್ಯದ ಕ್ರಿಕೆಟಿಗರು ಇದ್ದಾರೆ. ಮೂಲ ಬೇರೆ ರಾಜ್ಯವಾದ್ರೂ ಅವರು ಕನ್ನಡಿಗರಾಗಿಯೇ ಇದ್ದುಕೊಂಡು ಕರ್ನಾಟಕಕ್ಕೆ ಹೆಮ್ಮೆ, ಗೌರವ ತಂದಿದ್ದಾರೆ.
ಉದಾಹರಣೆ, ರಾಹುಲ್ ದ್ರಾವಿಡ್ ಮೂಲತಃ ಕರ್ನಾಟಕದವರಲ್ಲ. ಆದ್ರೆ ಹುಟ್ಟಿ ಬೆಳೆದು ಭಾರತ ತಂಡವನ್ನು ಪ್ರತಿನಿಧಿಸಿರುವುದು ಕರ್ನಾಟಕದಿಂದ. ಅದೇ ರೀತಿ ಮನೀಷ್ ಪಾಂಡೆ, ಮಯಾಂಕ್ ಅಗರ್ ವಾಲ್, ಕರುಣ್ ನಾಯರ್, ಈಗ ದೇವ್ ದತ್ ಪಡಿಕ್ಕಲ್ ಹೀಗೆ ಅನೇಕ ಯುವ ಕ್ರಿಕೆಟಿಗರು ಇದ್ದಾರೆ. ಆದ್ರೆ ಅವರು ಕನ್ನಡಿಗರಾಗಿದ್ದುಕೊಂಡೇ ಕರ್ನಾಟಕವನ್ನೇ ಪ್ರತಿನಿಧಿಸುತ್ತಿದ್ದಾರೆ.
ಒಟ್ಟಿನಲ್ಲಿ ದೊಡ್ಡಗಣೇಶ್ ಹೇಳುತ್ತಿರುವುದು ಸರಿಯಾಗಿಯೇ ಇದೆ. ಬಿಟ್ಟಿ ಪ್ರಚಾರ ಪಡೆಯಲು ಹೋಗಿರುವ ಶಶಿ ತರೂರ್ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ ದೊಡ್ಡ ಗಣೇಶ್

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd