ಪೃಥ್ವಿ ಶಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾಕೆ ಸಿಗಲಿಲ್ಲ… ಕಾರಣ ಇಲ್ಲಿದೆ.. ?

1 min read
Prithvi Shaw Ricky Ponting saakshatv ipl delhi capitals

ಪೃಥ್ವಿ ಶಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕತ್ವ ಯಾಕೆ ಸಿಗಲಿಲ್ಲ… ಕಾರಣ ಇಲ್ಲಿದೆ.. ?

 Prithvi Shaw  Ricky Ponting saakshatv ipl delhi capitals ಪೃಥ್ವಿ ಶಾ.. ಟೀಮ್ ಇಂಡಿಯಾದ ಭರವಸೆಯ ಕ್ರಿಕೆಟಿಗನಾಗಿದ್ರೂ ತನ್ನ ವರ್ತನೆ, ಕಳಪೆ ಫಾರ್ಮ್‍ನಿಂದಾಗಿ ತಂಡದಿಂದ ದೂರ ಉಳಿಯಬೇಕಾಯ್ತು. ಆದ್ರೆ ಕಳೆದ ವಿಜಯ ಹಜಾರೆ ಟೂರ್ನಿಯಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರ ಗಮನವನ್ನು ಮತ್ತೆ ಸೆಳೆದಿದ್ದಾರೆ.
ಸದ್ಯ ಐಪಿಎಲ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ಯಾಂಪ್ ನಲ್ಲಿರುವ ಪೃಥ್ವಿ ಶಾ ಈ ಬಾರಿಯ ಐಪಿಎಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಮಾರ್ಗದರ್ಶನದಲ್ಲಿ ಕಠಿಣ ತರಬೇತಿಯನ್ನು ನಡೆಸುತ್ತಿದ್ದಾರೆ.
ಇದೇ ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರು ಪೃಥ್ವಿ ಶಾ ಅವರ ವಿಚಿತ್ರ ಹವ್ಯಾಸವನ್ನು ಬಹಿರಂಗಪಡಿಸಿದ್ದಾರೆ.
ಪೃಥ್ವಿ ಶಾ ಫಾರ್ಮ್ ನಲ್ಲಿದ್ದಾಗ ಹೆಚ್ಚು ಸಮಯ ನೆಟ್ಸ್ ನಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದ್ರೆ ಕಳಪೆ ಫಾರ್ಮ್ ನಲ್ಲಿದ್ದಾಗ ನೆಟ್ಸ್ ನಲ್ಲಿ ಅಭ್ಯಾಸ ನಡೆಸುವುದಿಲ್ಲ. ಇದು ಪೃಥ್ವಿ ಶಾ ಅವರ ವರ್ತನೆಯಾಗಿದೆ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಕಳೆದ ಐಪಿಎಲ್ ನಲ್ಲಿ ಪೃಥ್ವಿ ಶಾ ಕಳಪೆ ಫಾರ್ಮ್ ನಲ್ಲಿದ್ದರು. ಆಗ ನಾನು ಆತನನ್ನು ನೆಟ್ಸ್ ನಲ್ಲಿ ಅಭ್ಯಾಸ ನಡೆಸಿ ತಪ್ಪು ಎಲ್ಲಿ ಆಗುತ್ತಿದೆ ಎಂಬುದನ್ನು ಸರಿಪಡಿಸೋಣ ಅಂತ ಸಲಹೆ ಕೊಡುತ್ತಿದೆ. ಆದ್ರೆ ಶಾ ನನ್ನ ಮಾತು ಕೇಳುತ್ತಿರಲಿಲ್ಲ. ಇವತ್ತು ಬೇಡ. ನಾನು ಅದರ ಬಗ್ಗೆ ವರ್ಕ್ ಔಟ್ ಮಾಡಲ್ಲ ಎಂದು ಹೇಳುತ್ತಿದ್ದ ಎಂದು ರಿಕಿ ಪಾಂಟಿಂಗ್ ಹೇಳಿದ್ದಾರೆ.
ಈ ನಡುವೆ ಪೃಥ್ವಿ ಶಾಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗುವ ಎಲ್ಲಾ ಅರ್ಹತೆಗಳು ಕೂಡ ಪೃಥ್ವಿ ಶಾ ನಲ್ಲಿತ್ತು. ಯಾಕಂದ್ರೆ ಪೃಥ್ವಿ ಶಾ ಭಾರತ 19 ವಯೋಮಿತಿ, ಮುಂಬೈ ರಣಜಿ ತಂಡ ಸೇರಿದಂತೆ ಚಿಕ್ಕ ವಯಸ್ಸಿನಲ್ಲೇ ತಂಡವನ್ನು ಮುನ್ನಡೆಸಿದ್ದ ಅನುಭವ ಕೂಡ ಇತ್ತು.
 Prithvi Shaw  Ricky Ponting saakshatv ipl delhi capitals ಆದ್ರೆ ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ರಿಷಬ್ ಪಂತ್ ಗಿಂತ ಶಾ ಹೆಸರು ಮುಂಚೂಣಿಯಲ್ಲಿತ್ತು. ಆದ್ರೆ ಪೃಥ್ವಿ ಶಾ ಹೆಡ್ ಕೋಚ್ ಜೊತೆಗಿನ ವರ್ತನೆಯಿಂದ ನಾಯಕತ್ವದಿಂದ ವಂಚಿತರಾದ್ರು ಎಂಬ ಅನುಮಾನ ಕೂಡ ಕಾಡುತ್ತಿದೆ.

ಇದೀಗ ಪೃಥ್ವಿ ಶಾ ಅವರಿಗೆ ಜ್ಞಾನೋದಯವಾಗಿದೆ. ಎಲ್ಲಿ ತಪ್ಪು ಮಾಡುತ್ತಿದ್ದೇನೆ ಎಂಬುದು ಅರ್ಥವಾಗಿದೆ. ಈ ನಿಟ್ಟಿನಲ್ಲಿ ಸಾಕಷ್ಟು ಹೋಮ್ ವರ್ಕ್ ಮಾಡಿಕೊಂಡು ಕಠಿಣ ಅಭ್ಯಾಸ ಕೂಡ ನಡೆಸಿದ್ದಾರೆ. ಹೀಗಾಗಿ ವಿಜಯ ಹಜಾರೆ ಟೂರ್ನಿಯಲ್ಲಿ ದಾಖಲೆಯ ರನ್ ಪೇರಿಸಿದ್ದಾರೆ. 2021ರ ಐಪಿಎಲ್ ನಲ್ಲೂ ಅದೇ ಫಾರ್ಮ್ ಅನ್ನು ಮುಂದುವರಿಸಿಕೊಂಡು ಹೋಗುವ ಆತ್ಮವಿಶ್ವಾಸದಲ್ಲಿದ್ದಾರೆ.
ಏಪ್ರಿಲ್ 10ರಂದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಹೋರಾಟ ನಡೆಸಲಿವೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd