ಐಪಿಎಲ್ 2021-ಪಡಿಕ್ಕಲ್ ಗೆ ಕೊರೋನಾ… ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸೋದು ಯಾರು ?

1 min read
RCB

ಐಪಿಎಲ್ 2021-ಪಡಿಕ್ಕಲ್ ಗೆ ಕೊರೋನಾ… ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸೋದು ಯಾರು ?

devadutt padikkal rcb bengaluru saakshatv14ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಕೋವಿಡ್ ಅಡ್ಡಿಯನ್ನುಂಟು ಮಾಡುವ ಸಾಧ್ಯತೆಗಳು ದಟ್ಟವಾಗುತ್ತಿವೆ. ಈಗಾಗಲೇ ಅಕ್ಷರ್ ಪಟೇಲ್ ಮತ್ತು ದೇವದತ್ತ್ ಪಡಿಕ್ಕಲ್ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಐಸೋಲೇಷನ್ ನಲ್ಲಿದ್ದಾರೆ. ಈ ನಡುವೆ ಕೆಕೆಆರ್ ತಂಡದ ನಿತೇಶ್ ರಾಣಾ ಅವರಿಗೂ ಕೋವಿಡ್ ಪಾಸಿಟಿವ್ ಬಂದಿದ್ದು, ಇದೀಗ ಚೇತರಿಸಿಕೊಂಡಿದ್ದಾರೆ. ಇದ್ರ ಬೆನ್ನಲ್ಲೇ ವಾಂಖೇಡೆ ಕ್ರೀಡಾಂಗಣದ ಸಿಬ್ಬಂದಿಗಳಿಗೂ ಕೋವಿಡ್ ಸೋಂಕು ದೃಢಪಟ್ಟಿದೆ.
ಏಪ್ರಿಲ್ 9ರಿಂದ ಐಪಿಎಲ್ ಟೂರ್ನಿ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಚೆನ್ನೈನಲ್ಲಿ ಹೋರಾಟ ನಡೆಸಲಿವೆ.
ಈ ನಡುವೆ, ಆರ್ ಸಿಬಿ ತಂಡಕ್ಕೆ ಪಂದ್ಯ ಶುರುವಾಗುವ ಮುನ್ನವೇ ಆಘಾತವಾಗಿದೆ. ತಂಡದ ಸ್ಪೋಟಕ ಆರಂಭಿಕ ದೇವದತ್ತ್ ಪಡಿಕ್ಕಲ್ ಅವರು ಮೊದಲ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ವಿರಾಟ್ ಜೊತೆ ಯಾರು ಇನಿಂಗ್ಸ್ ಆರಂಭಿಸುತ್ತಾರೆ ಅನ್ನೋದು ಪ್ರಶ್ನೆಯಾಗಿದೆ.
ಏತನ್ಮಧ್ಯೆ, ಈ ಬಾರಿಯ ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ತಂಡದ ಇನಿಂಗ್ಸ್ ಆರಂಭಿಸುವುದಾಗಿ ಹೇಳಿದ್ರು. ಆದ್ರೆ ಪಡಿಕ್ಕಲ್ ಬದಲು ಕೊಹ್ಲಿಯ ಜೊತೆ ಇನಿಂಗ್ಸ್ ಆರಂಭಿಸುವ ಭ್ಯಾಗ್ಯ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಕೂಡ ಇದೆ.
ಹಾಗೇ ನೋಡಿದ್ರೆ, ಮಹಮ್ಮದ್ ಅಜರುದ್ದೀನ್ ಅನ್ನೋ ಯುವ ಕ್ರಿಕೆಟಿಗ ಈಗಾಗಲೇ ದೇಶಿ ಕ್ರಿಕೆಟ್ ಟೂರ್ನಿಗಳಲ್ಲಿ ಮಿಂಚಿನ ಪ್ರದರ್ಶನ ನೀಡಿದ್ದಾರೆ. ಅಲ್ಲದೆ ಈ ಬಾರಿಯ ಐಪಿಎಲ್ ಮಹಮ್ಮದ್ ಅಜರುದ್ದೀನ್ ಅವರಿಗೆ ಟೆಸ್ಟಿಂಗ್ ಟೈಮ್ ಕೂಡ ಆಗಲಿದೆ. ವಿಕೆಟ್ ಕೀಪರ್ ಕೂಡ ಆಗಿರುವ ಮಹಮ್ಮದ್ ಅಜರುದ್ದೀನ್ ಅವರು ವಿರಾಟ್ ಕೊಹ್ಲಿ ಜೊತೆ ಇನಿಂಗ್ಸ್ ಆರಂಭಿಸುವ ಮೊದಲ ಆಯ್ಕೆಯಾಗಲಿದೆ.
ಇನ್ನೊಂದೆಡೆ ನ್ಯೂಜಿಲೆಂಡ್ ನ ಫಿನ್ ಆಲೆನ್ ಕೂಡ ಆರಂಭಿಕ ಸ್ಥಾನ ತುಂಬುವ ರೇಸ್ ನಲ್ಲಿದ್ದಾರೆ. ಸ್ಪೋಟಕ ಬ್ಯಾಟ್ಸ್‍ಮೆನ್ ಆಗಿರುವ ಫಿನ್ ಆಲೆನ್ ಮೇಲೆ ಕೂಡ ಸಾಕಷ್ಟು ನಿರೀಕ್ಷೆಗಳಿವೆ.
mohamamd azaruddin kerala rcb ipl saakshatvಒಟ್ಟಿನಲ್ಲಿ ಪಡಿಕ್ಕಲ್ ಅನುಪಸ್ಥಿತಿಯಲ್ಲಿ ಮಹಮ್ಮದ್ ಅಜರುದ್ದೀನ್ ಅವರಿಗೆ ಅದೃಷ್ಟ ಒಲಿದು ಬರಬಹುದು. ಈಗಾಗಲೇ ದೇಸಿ ಕ್ರಿಕೆಟ್ ನಲ್ಲಿ 37 ಎಸೆತಗಳಲ್ಲಿ ಶತಕ ದಾಖಲಿಸಿದ್ದ ದಾಖಲೆ ಕೂಡ ಮಹಮ್ಮದ್ ಅಜರುದ್ದೀನ್ ಹೆಸರಿನಲ್ಲಿದೆ. ಹೀಗಾಗಿ ಈ ಬಾರಿಯ ಐಪಿಎಲ್ ನಲ್ಲಿ ಮಹಮ್ಮದ್ ಅಜರುದ್ದೀನ್ ಅವರು ಟೀಮ್ ಇಂಡಿಯಾದ ಕದತಟ್ಟುವಂತಹ ಪ್ರದರ್ಶನ ನೀಡುತ್ತಾರಾ ಅನ್ನೋದನ್ನು ಕಾದುನೋಡಬೇಕಿದೆ. ಅಲ್ಲದೆ ವಿಕೆಟ್ ಕೀಪರ್ ಆಗಿರುವ ಅಜರುದ್ದೀನ್ ಅವರು ರಿಷಬ್ ಪಂತ್ ಗೆ ಪರ್ಯಾಯ ಆಟಗಾರನಾಗಿಯೂ ಹೊರಹೊಮ್ಮುವ ಸಾಧ್ಯತೆ ಇದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd