ಅಯ್ಯಾರೇ.. ಶ್ರೇಯಸ್ ಗೆ ಅಷ್ಟು ಸೀನ್ ಇದ್ಯಾ..?
IPL 2022 Auction : ಐಪಿಎಲ್ ಮೆಗಾ ಹರಾಜಿನ ಸಮಯ ಸಮೀಪಿಸುತ್ತಿದ್ದಂತೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚುತ್ತಿದೆ. ಯಾವ ಆಟಗಾರ ಯಾವ ಫ್ರಾಂಚೈಸಿಗೆ ಹೋಗೋತ್ತಾನೆ..? ಯಾವ ಫ್ರಾಂಚೈಸಿ ಯಾರನ್ನ ಖರೀದಿಸುತ್ತದೆ. ಈ ಬಾರಿಯ ಮಿಲಿಯನ್ ಡಾಲರ್ ಪ್ಲೇಯರ್ ಯಾರಾಗುತ್ತಾರೆ ಅನ್ನೋ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಈ ಮಧ್ಯೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಈ ಬಾರಿಯ ಹರಾಜಿನಲ್ಲಿ ಹೆಚ್ಚಿನ ಬೆಲೆಗೆ ಮಾರಾಟವಾಗುವ ಆಟಗಾರ ಈತನೇ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.ಅಲ್ಲದೆ ಆ ಆಟಗಾರನಿಗಾಗಿ 10 ಫ್ರಾಂಚೈಸಿಗಳು ಮುಗಿಬೀಳಲಿವೆ. ಆತ ಯಾವದೇ ತಂಡಕ್ಕೆ ಹೋದ್ರೂ ನಾಯಕನಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ.
ಅಂದಹಾಗೆ ಚೋಪ್ರಾ ಹೇಳುತ್ತಿರುವ ಆ ಆಟಗಾರ ಬೇರೆ ಯಾರು ಅಲ್ಲ.. ಟೀಂ ಇಂಡಿಯಾದ ಯುವ ಬ್ಯಾಟರ್ ಶ್ರೇಯಸ್ ಅಯ್ಯರ್..!!!
ಹೌದು..! ಆಕಾಶ್ ಚೋಪ್ರಾ ಅವರ ಪ್ರಕಾರ, ಈ ಬಾರಿಯ ಮೆಗಾ ಹರಾಜಿನಲ್ಲಿ ಸ್ಟಾರ್ ಆಟಗಾರರ ಲೀಸ್ಟ್ ನಲ್ಲಿರುವ ಶ್ರೇಯಸ್ ಅಯ್ಯರ್ ದುಬಾರಿ ಆಟಗಾರನಾಗಲಿದ್ದಾರೆ.
”ಇಶಾನ್ ಕಿಶನ್ ಸ್ಟಾರ್ ಆಟಗಾರರ ಪಟ್ಟಿಯಲ್ಲಿಲ್ಲ. ಈ ಪಟ್ಟಿಯಲ್ಲಿ ಅವರು ಇದ್ದಿದ್ದರೆ ತೀವ್ರ ಪೈಪೋಟಿ ಏರ್ಪಡುತ್ತಿತ್ತು. ಹೀಗಾಗಿ ಇದೀಗ ಶ್ರೇಯಸ್ ಅಯ್ಯರ್ ಗೆ ಆ ಅವಕಾಶ ಸಿಕ್ಕಿದೆ. ಅವರೇ ಅತಿ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಾರೆ. ಪಂಜಾಬ್ ಕಿಂಗ್ಸ್ ತಂಡ ಕೂಡ ಅಯ್ಯರ್ ಗೆ ಮಣೆ ಹಾಕಬಹುದು. ಕೆಕೆಆರ್ ಅಥವಾ ಆರ್‌ಸಿಬಿಗೆ ಶ್ರೇಯಸ್ ನಾಯಕರಾಗುವ ಸಾಧ್ಯತೆಯಿದೆ ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.
ಆದ್ರೆ ಆಕಾಶ್ ಚೋಪ್ರಾ ಅಭಿಪ್ರಾಯಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶ್ರೇಯಸ್ ಅಯ್ಯರ್ ಒಳ್ಳೆ ಬ್ಯಾಟರ್ ನಿಜ, ಆದ್ರೆ ನೀವೇಳುವಂತೆ ಅವರಿಗಾಗಿ ತಂಡಗಳು ಮುಗಿಬೀಳುತ್ತಾವಾ ಅನ್ನೋ ದೌಟು.. ಹಾಗೇ ಶ್ರೇಯಸ್ ಅಯ್ಯರ್ ಗೆ ಅಷ್ಟು ಸೀನ್ ಇದ್ದಿದ್ದರೇ, ಡೆಲ್ಲಿ ಕ್ಯಾಪಿಟಲ್ಸ್ ತಂಡದಿಂದ ಅವರನ್ನ ಯಾಕೆ ಕೈ ಬಿಟ್ಟರು. ಯಾಕೆ ಅಯ್ಯಗೆ ಮತ್ತೆ ಕ್ಯಾಪ್ಟನ್ಸಿ ಸ್ಥಾನ ನೀಡಲಿಲ್ಲ..? ಅಹ್ಮದಾಬಾದ್ ತಂಡ ಯಾಕೆ ಅವರನ್ನ ಖರೀದಿಸುವ ಚಾನ್ಸ್ ಇದ್ದರೂ, ಮಣೆ ಹಾಕಲಿಲ್ಲ ಎಂದು ಕಮೆಂಟ್ ಗಳನ್ನ ಮಾಡ್ತಿದ್ದಾರೆ.









