IPL Mega Auction – ಕೋಟ್ಯಾಧಿಪತಿ ಕಿಶನ್, ದುಬಾರಿ ಬೆಲೆಗೆ ಉಳಿಸಿಕೊಂಡ ಮುಂಬೈ
ಬೆಂಗಳೂರಿನಲ್ಲಿ ನಡೆಯುತ್ತಿರುವ IPL ಮೆಗಾ ಹರಾಜಿನ ಮೊದಲ ದಿನ ವಿಕೆಟ್ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಅವರನ್ನ ಮುಂಬೈ ಇಂಡಿಯನ್ಸ್ 15.25 ಕೋಟಿ ರೂಪಾಯಿಗಳಿಗೆ ಖರೀದಿಸಿದೆ. ಈ ಮೂಲಕ ಯುವರಾಜ್ ಸಿಂಗ್ ನಂತರ ಎರಡನೇ ಅತ್ಯಂತ ದುಬಾರಿ ಬೆಲೆಗೆ ಹರಾಜಾದ ಭಾರತೀಯ ಆಟಗಾರನಾಗಿ ದಾಖಲೆ ಬರೆದಿದ್ದಾರೆ. ಇಶಾನ್ ಕಿಶನ್ ಮೂಲ ಬೆಲೆ 2 ಕೋಟಿ ರೂ.ಗಿಂತ 7 ಪಟ್ಟು ಹೆಚ್ಚು ಬೆಲೆಗೆ ಮಾರಾಟವಾಗಿದ್ದಾನೆ.
ಇಶಾನ್ ಕಿಶಾನ್ ಗಾಗಿ ಮುಂಬೈ ಇಂಡಿಯನ್ಸ್ ಗುಜರಾತ್ ಬಿಡ್ಡಿಂಗ್ ವಾರ್ ಗೆ ಇಳಿದಿದ್ದರು. ಕೊನೆಗೂ ಹೋಮ್ ಟೀಮ್ ಮಂಬೈ ಪಂಜಾಬ್ ಗುಜರಾತ್ ಹೈದ್ರಾಬಾದ್ ಟೀಮ್ ಗಳನ್ನ ಹರಾಜಿನಲ್ಲಿ ಸೋಲಿಸಿ ಅಂತಿಮವಾಗಿ 15.25 ಕೋಟಿಗೆ ತಮ್ಮದಾಗಿಸಿಕೊಂಡರು.
ಹರಾಜಿಗೂ ಮುಂಚೆ ಮುಂಬೈ ಫ್ರಾಂಚೈಸಿ ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಕೀರನ್ ಪೊಲಾರ್ಡ್ ಮತ್ತು ಸೂರ್ಯಕುಮಾರ್ ಯಾದವ್ ಅವರನ್ನ ಉಳಿಸಿಕೊಂಡಿತ್ತು. ಹಾಗಾಗಿ ಅನಿವಾರ್ಯವಾಗಿ ಇಶಾನ್ ಹರಾಜಿಗೆ ಬಂದಿದ್ದರು. ಕೊನೆಗೂ ಮುಂಬೈ ಟೀಂ ಇಶಾನ್ ಉಳಿಸಿಕೊಳ್ಳಲು ಸಫಲವಾಗಿದೆ.








