ತಾನು ಸೇಲ್ ಆಗದೇ ಇರಲು ಕಾರಣ ಬಿಚ್ಚಿಟ್ಟ ಕೇನ್
ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಸಾಕಷ್ಟು ಅಚ್ಚರಿ, ಕುತೂಹಲಗಳಿಗೆ ಕಾರಣವಾಗಿದೆ.
ಯಾರೂ ಊಹಿಸದ ಆಟಗಾರರು ದುಬಾರಿ ಬೆಲೆಗೆ ಮಾರಾಟವಾದ್ರೆ, ದುಬಾರಿ ಆಟಗಾರರಾಗುತ್ತಾರೆ ಅಂತ ಅಂದಾಜಿಸಲಾಗಿದ್ದ ಪ್ಲೇಯರ್ ಗಳು ಕಡಿಮೆ ಮೊತ್ತಕ್ಕೆ ಸೇಲ್ ಆದರು. ipl-2022-auction-kane-richardson reaction
ಇನ್ನು ವಿಚಿತ್ರ ಏನಂದರೇ ಸ್ಟಾರ್ ಆಟಗಾರರ ಎಂದು ಖ್ಯಾತಿ ಪಡೆದಿದ್ದ ಆಟಗಾರರತ್ತ ಫ್ರಾಂಚೈಸಿಗಳು ನೋಡಲೇ ಇಲ್ಲ. ಮುಖ್ಯವಾಗಿ ಸುರೇಶ್ ರೈನಾ, ಇಯಾನ್ ಮಾರ್ಗನ್, ಷಕಿಬ್ ಅಲ್ ಹಸನ್, ಆರೋನ್ ಪಿಂಚ್ ರನ್ನ ಫ್ರಾಂಚೈಸಿಗಳು ಖರೀಸಲೇ ಇಲ್ಲ.
ಹೀಗೆ ಖರೀದಿಯಾಗದೇ ಉಳಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸ್ಟಾರ್ ಕ್ರಿಕೆಟರ್ಸ್ ಆಡಂ ಜಂಪಾ, ಕೇನ್ ರಿಚರ್ಡ್ ಸನ್ ಕೂಡ ಇದ್ದಾರೆ. ಕಳೆದ ಸೀಸನ್ ನಲ್ಲಿ ಈ ಇಬ್ಬರೂ ಆರ್ ಸಿಬಿ ಪರ ಆಡಿದ್ದರು.
ಆದ್ರೆ ಈ ಬಾರಿ ಅವರು ಸೇಲ್ ಆಗಲಿಲ್ಲ. ಈ ಬಗ್ಗೆ ಸ್ಪಂದಿಸಿರುವ ಕೇನ್ ರಿಚರ್ಡ್ ಸನ್, ಆಡಂ ಜಂಪಾ ಅವರನ್ನ ಯಾರೂ ಕೊಂಡು ಕೊಂಡಿಲ್ಲ ಅನ್ನೋದನ್ನ ನನಗೆ ನಂಬೋಕೆ ಸಾಧ್ಯವಾಗುತ್ತಿಲ್ಲ.
ನಿಜ ಹೇಳುವುದಾದರೇ ನಾವು ಕಳೆದ ಸೀಸನ್ ಮಧ್ಯೆದಲ್ಲಿಯೇ ಟೂರ್ನಿಯಿಂದ ಹೊರ ನಡೆದೆವು. ಈ ಬಗ್ಗೆ ನಾನು ಜಂಪಾದೊಂದಿಗೆ ಮಾತನಾಡಿದೆ.
ಇದಕ್ಕೆ ನಾವು ಖಂಡಿತವಾಗಿಯೂ ಬೆಲೆ ಕಟ್ಟಬೇಕಾಗುತ್ತದೆ ಎಂದಿದ್ದೆ. ಆದ್ರೆ ಆ ಸಮಯದಲ್ಲಿ ನಾವು ವಾಪಸ್ ಆಸ್ಟ್ರೇಲಿಯಾಗೆ ಹೋಗೋದು ಅನಿವಾರ್ಯವಾಗಿತ್ತು.
ಮೆಗಾ ಹರಾಜಿನಲ್ಲಿ ಫ್ರಾಂಚೈಸಿಗಳು ನಮ್ಮ ಮೇಲೆ ಆಸಕ್ತಿ ತೋರಿಸದೇ ಇರಲು ಇದೂ ಕಾರಣವಾಗಿದೆ ಎಂದಿದ್ದಾರೆ ಕೇನ್ ರಿಚರ್ಡ್ ಸನ್, ಇನ್ನು ಮೆಗಾ ಹರಾಜಿಗೂ ಮುನ್ನಾ ಯಾವುದೇ ಫ್ರಾಂಚೈಸಿ ತಮ್ಮನ್ನ ಸಂಪರ್ಕಿಸಿಲ್ಲ ಎಂದು ಕೇನ್ ಸ್ಪಷ್ಟಪಡಿಸಿದ್ದಾರೆ.








