IPL 2022 | ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಡೆಡ್ ಲೈನ್

1 min read
IPL 2022 BCCI deadline for new franchises

IPL 2022 | ಹೊಸ ಫ್ರಾಂಚೈಸಿಗಳಿಗೆ ಬಿಸಿಸಿಐ ಡೆಡ್ ಲೈನ್

ಐಪಿಎಲ್ ಹೊಸ ಫ್ರಾಂಚೈಸಿಗಳಾದ ಲಕ್ನೋ ಮತ್ತು ಅಹಮದಾಬಾದ್‌ಗೆ ಬಿಸಿಸಿಐ ಗಡುವು ನಿಗದಿಪಡಿಸಿದೆ.

ಮೆಗಾ ಹರಾಜಿಗೂ ಮುನ್ನ ಮೂವರು ಆಟಗಾರರನ್ನು ಆಯ್ಕೆ ಮಾಡುವ ವಿಚಾರದಲ್ಲಿ ಬಿಸಿಸಿಐ ಡೆಡ್ ಲೈನ್ ನೀಡಿದೆ.

ಜನವರಿ 22 ರಂದು ಸಂಜೆ 5 ಗಂಟೆ ಒಳಗಾಗಿ, ಎರಡೂ ತಂಡಗಳು ತಲಾ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದೆ.

ಇದಕ್ಕು ಮೊದಲು ಆಟಗಾರರ ನೇಮಕಾತಿಗೆ ಜನವರಿ 31ರವರೆಗೂ ಬಿಸಿಸಿಐ ಗಡುವು ನೀಡಿತ್ತು.

ಆದ್ರೆ ಮೂವರು ಆಟಗಾರರನ್ನು ಆಯ್ಕೆ ಮಾಡಿಕೊಳ್ಳಲು ಅಷ್ಟೊಂದು ಸಮಯಬೇಕಾಗಿಲ್ಲ ಎಂದು ಬಿಸಿಸಿಐ ಭಾವಿಸಿ, ಪರಿಷ್ಕೃತ ದಿನಾಂಕ ಪ್ರಕಟಿಸಿದೆ.

IPL 2022 BCCI deadline for new franchises saaksha tv

ಇದಲ್ಲದೇ ಐಪಿಎಲ್ ಮಂಡಳಿ ಸಭೆಯಲ್ಲಿ ಬಿಸಿಸಿಐ ಮತ್ತೊಂದು ಮಹತ್ವದ ಪ್ರಕಟನೆ ಮಾಡಿದೆ.

ಬೆಟ್ಟಿಂಗ್ ಆರೋಪ ಎದುರಿಸುತ್ತಿರುವ ಅಹಮದಾಬಾದ್ ಫ್ರಾಂಚೈಸಿಗೆ ಕ್ಲೀನ್ ಚಿಟ್ ನೀಡಿದೆ.

ಜೊತೆಗೆ ಮೆಗಾ ಹರಾಜಿನ ಮುಹೂರ್ತವನ್ನೂ ಅಂತಿಮಗೊಳಿಸಲಾಗಿದೆ. ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ಮೆಗಾ ಹರಾಜು ಪ್ರಕ್ರಿಯೆ  ನಡೆಸಲು ಚಿಂತನೆ ನಡೆಸಿದೆ.

ಏತನ್ಮಧ್ಯೆ, ಅಹಮದಾಬಾದ್ ಫ್ರಾಂಚೈಸಿ  ತಂಡ  ನಾಯಕನಾಗಿ ಹಾರ್ದಿಕ್ ಪಾಂಡ್ಯ, ಕೋಚ್ ಆಗಿ ಆಶಿಶ್ ನೆಹ್ರಾ ಮತ್ತು ಮಾರ್ಗದರ್ಶಕರಾಗಿ ಗ್ಯಾರಿ ಕರ್ಸ್ಟನ್ ಅವರನ್ನು ನೇಮಿಸಿಕೊಂಡಿದೆ.

ಮತ್ತೊಂದೆಡೆ, ಸಂಜೀವ್ ಗೋಯೆಂಕಾ ನೇತೃತ್ವದ ಲಕ್ನೋ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಆಂಡಿ ಫ್ಲವರ್, ಮೆಂಟರ್ ಆಗಿ ಗೌತಮ್ ಗಂಭೀರ್ ಅವರನ್ನು ನೇಮಿಸಿಕೊಂಡಿದೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd