ಐಪಿಎಲ್ 2022 ಶುರುವಾಗೋದು ಯಾವಾಗ ಗೊತ್ತಾ..?
ಈ ವರ್ಷದ ಕ್ರಿಕೆಟ್ ಹಬ್ಬ, ಐಪಿಎಲ್ 2022, ಬಿಸಿಸಿಐ ಪೂರ್ವನಿರ್ಧರಿತ ದಿನಾಂಕಕ್ಕಿಂತ ಒಂದು ದಿನ ಮುಂಚಿತವಾಗಿ ಪ್ರಾರಂಭವಾಗುವ ಸಾಧ್ಯತೆಯಿದೆ.
ಬಿಸಿಸಿಐ ಆರಂಭದಲ್ಲಿ ಈ ವರ್ಷದ ಕ್ಯಾಶ್ ರಿಚ್ ಲೀಗ್ ಅನ್ನು ಮಾರ್ಚ್ 27 ರಂದು ಪ್ರಾರಂಭಿಸಲು ಯೋಜಿಸಿತ್ತು.
ಆದ್ರೆ ಲೀಗ್ನ ಅಧಿಕೃತ ಬ್ರಾಡ್ಕಾಸ್ಟರ್ ಸ್ಟಾರ್ ಇಂಡಿಯಾದ ಕೋರಿಕೆಯ ಮೇರೆಗೆ ಒಂದು ದಿನ (ಮಾರ್ಚ್ 26) ಲೀಗ್ ಅನ್ನು ಪ್ರಾರಂಭಿಸಲು ಬಿಸಿಸಿಐ ಸಿದ್ಧತೆ ನಡೆಸುತ್ತಿದೆ ಎಂದು ವರದಿಯಾಗಿದೆ.
ಮಾರ್ಚ್ 26 ರಂದು (ಶನಿವಾರ) ಲೀಗ್ ಆರಂಭವಾದರೆ ಮರುದಿನ ಡಬಲ್ ಹೆಡರ್ (ಎರಡು ಪಂದ್ಯಗಳು) ಆಡಬಹುದು ಎಂಬ ಪ್ರಸ್ತಾವನೆಯನ್ನು ಸ್ಟಾರ್ ಇಂಡಿಯಾ ಮುಂದಿಟ್ಟಿದೆ ಎಂದು ಬಿಸಿಸಿಐ ವಕ್ತಾರರು ತಿಳಿಸಿದ್ದಾರೆ.
ಇನ್ನೆರಡು ಮೂರು ದಿನಗಳಲ್ಲಿ ಈ ಬಗ್ಗೆ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅದೇ ದಿನ ಲೀಗ್ ವೇಳಾಪಟ್ಟಿಯನ್ನು ಪ್ರಕಟಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಏತನ್ಮಧ್ಯೆ, ಹೊಸ ಉದ್ದೇಶಿತ ದಿನಾಂಕದಂದು ಲೀಗ್ ಪ್ರಾರಂಭವಾದರೆ, ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಇನ್ನೂ ಕೆಲವು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳುವ ಸಾಧ್ಯತೆಗಳಿವೆ. ipl-2022-broadcaster-want-ipl-2022-start-march-26 saaksha tv









