ದಕ್ಷಿಣಾಫ್ರಿಕಾ ಸ್ಪೀಡ್ ಗನ್ ಡೇಲ್ ಸ್ಟೇನ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಮುಂದಿನ ಐಪಿಎಲ್ ಭಾಗವಾಗಿ ಸ್ಟೇನ್ ಸನ್ ರೈಸರ್ಸ್ ಹೈದರಾಬಾದ್ ತಂಡ ಬೌಲಿಂಗ್ ಕೋಚ್ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ ಎಂದು ವರದಿಯಾಗಿದೆ. Dale Steyn saaksha tv
ಹೈದರಾಬಾದ್ ಪ್ರಾಂಚೈಸಿ ಈ ಬಗ್ಗೆ ಡೇಲ್ ಸ್ಟೇನ್ ಜೊತೆ ಮಾತನಾಡಿ ಒಪ್ಪಂದಕ್ಕೆ ಸಹಿ ಹಾಕಿಸಿಕೊಂಡಿದೆ. ಇದರ ಅಧಿಕೃತ ಪ್ರಕಟನೆಯೂ ಮುಂದಿನವಾರ ಆರಂಭದಲ್ಲಿ ಹೊರ ಬರುವ ಸಾಧ್ಯತೆಗಳಿವೆ.
ಅಂದಹಾಗೆ ಡೇನ್ ಸ್ಟೇನ್ ಐಪಿಎಲ್ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಮೊದಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಐಪಿಎಲ್ ನಲ್ಲಿ ಮಿಂಚಿದ್ದರು. ಬಳಿಕ 2013 ರಿಂದ 2015ರ ವರೆಗೆ ಸನ್‌ರೈಜರ್ಸ್ ಹೈದರಾಬಾದ್ ತಂಡ ಪರ ಬೌಲಿಂಗ್ ಮಾಡಿದ್ದರು. ಇದಾದ ಬಳಿಕ ಮತ್ತೆ ಆರ್ ಸಿಗೆ ಸೇರಿಕೊಂಡು ವಿದಾಯ ಘೋಷಣೆ ಮಾಡಿದ್ದಾರೆ.
ಇನ್ನು 38 ವರ್ಷದ ಸ್ಟೈನ್ ತನ್ನ ವೃತ್ತಿಜೀವನದಲ್ಲಿ 93 ಟೆಸ್ಟ್, 125 ಏಕದಿನ, 47 ಟಿ 20 ಪಂದ್ಯಗಳನ್ನಾಡಿದ್ದಾರೆ.. ಮ್ಯಾಚ್ ಗಳನ್ನು ಸೇರಿ 699 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದಲ್ಲದೇ 95 ಐಪಿಎಲ್ ಪಂದ್ಯಗಳಲ್ಲಿ 97 ವಿಕೆಟ್‌ಗಳು ಗಳಿಸಿದ್ದಾರೆ.