IPL 2022 | ಡೆಲ್ಲಿ ಕ್ಯಾಪಿಟಲ್ಸ್ – ಪಂಜಾಬ್ ಕಿಂಗ್ಸ್ ಮ್ಯಾಚ್ ಶಿಫ್ಟ್
ಈ ಬಾರಿಯ ಐಪಿಎಲ್ ನಲ್ಲಿಯೂ ಕೊರೊನಾ ಕಾಟ ಮುಂದುವರೆದಿದೆ.
ಲೀಗ್ ಹಂತದ ಪಂದ್ಯಾವಳಿಗಳು ರೋಚಕತೆ ಪಡೆಯುತ್ತಿರುವ ಸಮಯದಲ್ಲಿಯೇ ಡೆಲ್ಲಿ ಕ್ಯಾಪಿಟಲ್ಸ್ ಪಾಳಯಕ್ಕೆ ಕೊರೊನಾ ಕಾಲಿಟ್ಟಿದೆ.
ಎಲ್ಲವೂ ಅಂದುಕೊಂಡಂತೆ ನಡೆದರೆ ಬುಧವಾರ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ಪಂದ್ಯ ನಡೆಯಬೇಕು.
ಆದ್ರೆ ಡೆಲ್ಲಿ ಕ್ಯಾಂಪ್ ನಲ್ಲಿ ಕೊರೊನಾ ಭೀತಿ ಹೆಚ್ಚಾಗಿರುವುದರಿಂದ ಪುಣೆಯಲ್ಲಿ ನಡೆಯಬೇಕಿದ್ದ ಪಂದ್ಯವನ್ನು ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣಕ್ಕೆ ಶಿಫ್ಟ್ ಮಾಡಲಾಗಿದೆ.
ನಾಳೆ ಬೆಳಗ್ಗೆ ನಡೆಯುವ ಆರ್ ಟಿ ಪಿಸಿಆರ್ ಟೆಸ್ಟ್ ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆಟಗಾರರು ನೆಗೆಟಿವ್ ಬಂದರೆ ಮಾತ್ರ ಪಂದ್ಯ ನಡೆಯಲಿದೆ.
ಡೆಲ್ಲಿ ಕ್ಯಾಪಿಟಲ್ಸ್ ಫಿಸಿಯೋ ಥೆರಪಿಸ್ಟ್ ಪ್ಯಾಟ್ರಿಕ್ ಫರ್ಹಾತ್, ಮಸಾಜ್ ಥೆರಪಿಸ್ಟ್ ಚೇತನ್ ಕುಮಾರ್, ಆಟಗಾರ ಮಿಚೆಲ್ ಮಾರ್ಷ್, ಟೀಮ್ ಡಾಕ್ಟರ್ ಆಭಿಜಿತ್ ಸೆಲ್ವಿ ಮತ್ತು ಸೋಶಿಯಲ್ ಮೀಡಿಯಾ ಕಂಟೆಂಟ್ ಟೀಮ್ ಮೆಂಬರ್ ಆಕಾಶ್ ಮಾನೆ ಕೋವಿಡ್ ಪಾಸಿಟಿವ್ ಆಗಿದ್ದಾರೆ. IPL 2022 Delhi Capitals – Punjab Kings match shift