Rohit Sharma | ನಾಯಕರಾಗಿ ಬ್ಯಾಟಿಂಗ್ ಮರೆತ್ರಾ ರೋಹಿತ್ ಶರ್ಮಾ..!

1 min read
IPL 2022 fans-troll-rohit-sharma-consecutive-failures saaksha tv

Rohit Sharma | ನಾಯಕರಾಗಿ ಬ್ಯಾಟಿಂಗ್ ಮರೆತ್ರಾ ರೋಹಿತ್ ಶರ್ಮಾ..!

ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅತ್ಯಂತ ಯಶಸ್ವಿ ನಾಯಕ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. 15 ಸೀಸನ್ ಗಳ ಐಪಿಎಲ್ ನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಬಾರಿ ಮುಂಬೈ ತಂಡವನ್ನ ಚಾಂಪಿಯನ್ ಮಾಡಿದ್ದಾರೆ.

ಕೇವಲ ನಾಯಕರಾಗಲ್ಲದೇ ಒಬ್ಬ ಬ್ಯಾಟರ್ ಆಗಿ ಕೂಡ ರೋಹಿತ್ ಶರ್ಮಾ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ಐಪಿಎಲ್ ನಲ್ಲಿ ಈ ವರೆಗೂ ರೋಹಿತ್ ಶರ್ಮಾ 216 ಪಂದ್ಯಗಳನ್ನಾಡಿದ್ದು, 30.69ರ ಸರಾಸರಿಯಲ್ಲಿ 5665 ರನ್ ಗಳಿಸಿದ್ದಾರೆ. ಇದರಲ್ಲಿ 40 ಅರ್ಧಶತಕ ಮತ್ತು ಒಂದು ಶತಕ ಕೂಡ ಇದೆ.

 ಆದರೆ ಋತುವಿನಲ್ಲಿ ರೋಹಿತ್ ಶರ್ಮಾ ಬ್ಯಾಟ್ ಅಬ್ಬರಿಸುತ್ತಿಲ್ಲ. ಈ ಋತುವಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ 41 ರನ್ ಗಳಿಸಿದ ರೋಹಿತ್ ಶರ್ಮಾ, ಆ ನಂತರದ ಪಂದ್ಯದಲ್ಲಿ ಸೈಲೆಂಟ್ ಆಗಿಬಿಟ್ಟಿದ್ದಾರೆ.

ರಾಜಸ್ಥಾನ ರಾಯಲ್ಸ್ ವಿರುದ್ಧದ ಪಂದ್ಯದಲ್ಲಿ 10 ರನ್ ಗಳಿಸಿದ್ದ ರೋಹಿತ್ ಶರ್ಮಾ, ಇದೀಗ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಅದೇ ಫಾರ್ಮ್ ಮುಂದುವರೆಸಿದ್ದಾರೆ. ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ 12 ಎಸೆತಗಳನ್ನು ಎದುರಿಸಿ 3 ರನ್ ಗಳನ್ನ ಮಾತ್ರ ಗಳಿಸಿದರು.

IPL 2022 fans-troll-rohit-sharma-consecutive-failures saaksha tv

ನಿಜ ಹೇಳಬೇಕಂದ್ರೆ ರೋಹಿತ್ ಶರ್ಮಾಗೆ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಕೆಕೆಆರ್ ವಿರುದ್ಧದ ಉತ್ತಮ ದಾಖಲೆ ಇದೆ. ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ರೋಹಿತ್ ಶರ್ಮಾ ಈವರೆಗೂ 1,015 ರನ್ ಗಳಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿ ಯಾವುದೇ ತಂಡದ ವಿರುದ್ಧ ಬ್ಯಾಟ್ಸ್‌ಮನ್ ಗಳಿಸಿದ ಗರಿಷ್ಠ ರನ್ ಆಗಿದೆ. ಅಂತಹ ಉತ್ತಮ ದಾಖಲೆ ಹೊಂದಿರುವ ಹಿಟ್‌ಮ್ಯಾನ್ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ವಿಕೆಟ್ ಉಳಿಸಿಕೊಳ್ಳಲು ಪ್ರಯತ್ನಿಸಿ ಔಟ್ ಆಗಿದ್ದಾರೆ.

ಹೀಗಾಗಿ ಸೋಶಿಯಲ್ ಮೀಡಿಯಾದಲ್ಲಿ ರೋಹಿತ್ ಶರ್ಮಾ ಬಗ್ಗೆ ಮುಂಬೈ ಇಂಡಿಯನ್ಸ್ ಅಭಿಮಾನಿಗಳು ಟ್ರೋಲ್ ಗಳನ್ನ ಮಾಡಲು ಶುರು ಮಾಡಿದ್ದಾರೆ.

ಮುಖ್ಯವಾಗಿ ರೋಹಿತ್ ಶರ್ಮಾ ಟೀಂ ಇಂಡಿಯಾದ ನಾಯಕರಾದ ಬಳಿಕ ಒತ್ತಡಕ್ಕೆ ಸಿಲುಕಿದ್ದಾರೆ. ಟಿ 20 ಯಲ್ಲೂ ರೋಹಿತ್ ಟೆಸ್ಟ್ ಮಾದರಿಯಲ್ಲಿ ಬ್ಯಾಟ್ ಬೀಸುತ್ತಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.

ಅಂದಹಾಗೆ ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಈ ಬಾರಿಯ ಐಪಿಎಲ್ ನಲ್ಲಿ ಸತತ ಮೂರು ಸೋಲುಗಳನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಸೋತ ಮುಂಬೈ ಬಳಿಕ ಆರ್ ಆರ್ ಮತ್ತು ಕೆಕೆಆರ್ ವಿರುದ್ಧ ಸೋಲುಂಡಿದೆ.

IPL 2022 fans-troll-rohit-sharma-consecutive-failures

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd