IPL 2022 | ವಿರಾಟ್ ಕೊಹ್ಲಿ ಕಥೆ ಮುಗೀತು..!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸ್ಟಾರ್ ಪ್ಲೇಯರ್ ವಿರಾಟ್ ಕೊಹ್ಲಿ ಮತ್ತೊಮ್ಮೆ ವಿಫಲರಾಗಿರೋದು ಗೊತ್ತಿರುವ ವಿಚಾರವೇ.
ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಓಪನರ್ ಆಗಿ ಕಣಕ್ಕಿಳಿದಿದ್ದರು.
ಬ್ಯಾಟಿಂಗ್ ಕ್ರಮಾಂಕದಲ್ಲಿ ಪ್ರಮೋಷನ್ ಪಡೆದರೂ ರನ್ ಗಳಿಸುವುರಲ್ಲಿ ವಿರಾಟ್ ಕೊಹ್ಲಿ ಮತ್ತೆ ವಿಫಲರಾದರು.
ಮೊದಲ ಔವರ್ ನಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ವಿರಾಟ್ ಕೊಹ್ಲಿ ಫಾರ್ಮ್ ಗೆ ಬಂದ ಸೂಚನೆ ನೀಡಿದರು.
ಆದ್ರೆ ನಂತರದ ಔವರ್ ನಲ್ಲಿಯೇ ವಿರಾಟ್ ಕೊಹ್ಲಿ ಪ್ರಸಿದ್ಧ ಕೃಷ್ಣ ಬೌಲಿಂಗ್ ನಲ್ಲಿ ಪರಾಗ್ ಗೆ ಕ್ಯಾಚ್ ನೀಡಿ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದರು. ಇದರೊಂದಿಗೆ ವಿರಾಟ್ ಕೊಹ್ಲಿ 9 ರನ್ ಗಳಿಗೆ ಪೆವಿಲಿಯನ್ ಸೇರಿಕೊಂಡರು.

ವಾಸ್ತವವಾಗಿ, ವಿರಾಟ್ ಕೊಹ್ಲಿ ಮೊದಲ ಓವರ್‌ನಲ್ಲಿ ಬೌಲ್ಟ್ ಬೌಲಿಂಗ್‌ನಲ್ಲಿ ಡಕ್ ಆಗುವ ಅಪಾಯವನ್ನು ತಪ್ಪಿಸಿಕೊಂಡಿದ್ದರು.
ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಲ್ಲಿ ವಿಫಲರಾದ ವಿರಾಟ್ ಕೊಹ್ಲಿ ಪ್ರಸಿದ್ಧ್ ಓವರ್‌ನಲ್ಲಿ ಶಾರ್ಟ್ ಪಿಚ್ ಎಸೆತವನ್ನು ಹಿಟ್ ಮಾಡಿದರು.
ಚೆಂಡು ಸೀದಾ ರಿಯಾನ್ ಪರಾಗ್ ಕೈ ಸೇರಿತು. ಅಂದಹಾಗೆ ಇದುವರೆಗೆ ಕೊಹ್ಲಿ 9 ಪಂದ್ಯಗಳನ್ನಾಡಿದ್ದು, 128 ರನ್ ಗಳಿಸಿದ್ದಾರೆ.
ಕೊಹ್ಲಿ ಗರಿಷ್ಠ ಸ್ಕೋರ್ 48 ರನ್. ಈ ಋತುವಿನಲ್ಲಿ ಎರಡು ಬಾರಿ ಕೊಹ್ಲಿ ಗೋಲ್ಡನ್ ಡಕ್ ಆಗಿದ್ದಾರೆ.
ಕೊಹ್ಲಿ ಪ್ರದರ್ಶನಕ್ಕೆ ಕ್ರಿಕೆಟ್ ಅಭಿಮಾನಿಗಳು ಮತ್ತೆ ಕೋಪಗೊಂಡಿದ್ದು, ಸೊಶಿಯಲ್ ಮೀಡಿಯಾದಲ್ಲಿ ಹಲವು ಟೀಕೆಗಳನ್ನು ಮಾಡುತ್ತಿದ್ದಾರೆ.
ಓಪನರ್ ಆಗಿ ಬಂದರೂ ಯಾವುದೇ ಪ್ರಯೋಜನಾ ಆಗುತ್ತಿಲ್ಲ. ನಿಮ್ಮ ಕಥೆ ಮುಗೀತು ಅಂತಾ ಕಿಡಿಕಾರುತ್ತಿದ್ದಾರೆ. ipl-2022-fans-troll-virat-kohli-consecutive-failures