IPL 2022 : ಐಪಿಎಲ್ ನಲ್ಲಿ ಹೊಸ ನಾಯಕರು…
IPL-2022 ಶನಿವಾರ (ಮಾರ್ಚ್ 26) ಆರಂಭವಾಗಲಿದೆ. ವಾಂಖೆಡೆಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.
ವಿಶೇಷ ಏನಂದರೇ ಈ ಬಾರಿಯ ಐಪಿಎಲ್ ರಿಂಗ್ ನಲ್ಲಿರುವ 10 ತಂಡಗಳ ಪೈಕಿ ಎಂಟು ತಂಡಗಳನ್ನು ಭಾರತೀಯ ಕ್ರಿಕೆಟಿಗರು ಮುನ್ನಡೆಸುತ್ತಿದ್ದಾರೆ.
ಯಾವ ತಂಡವನ್ನು ಯಾರು ಮುನ್ನಡೆಸುತ್ತಿದ್ದಾರೆ ಎಂಬುದನ್ನು ನೋಡೋಣ.
ರೋಹಿತ್ ಶರ್ಮಾ (ಮುಂಬೈ ಇಂಡಿಯನ್ಸ್),
ರವೀಂದ್ರ ಜಡೇಜಾ (ಚೆನ್ನೈ ಸೂಪರ್ ಕಿಂಗ್ಸ್),
ಶ್ರೇಯಸ್ ಅಯ್ಯರ್ (ಕೋಲ್ಕತ್ತಾ ನೈಟ್ ರೈಡರ್ಸ್),
ಕೆಎಲ್ ರಾಹುಲ್ (ಲಕ್ನೋ ಸೂಪರ್ ಜೈಂಟ್ಸ್),
ಹಾರ್ದಿಕ್ ಪಾಂಡ್ಯ (ಗುಜರಾತ್ ಜೈಂಟ್ಸ್),
ಮಯಾಂಕ್ ಅಗರ್ವಾಲ್ (ಪಂಜಾಬ್, ಕಿಂಗ್ಸ್)
ರಿಷಬ್ ಪಂತ್ (ದೆಹಲಿ ಕ್ಯಾಪಿಟಲ್ಸ್)
ಇನ್ನು ಇನ್ನೆರಡು ತಂಡಗಳನ್ನು ವಿದೇಶಿ ಆಟಗಾರರು ಮುನ್ನಡೆಸುತ್ತಿದ್ದಾರೆ.
ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಡು ಪ್ಲೆಸಿಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ನಾಯಕತ್ವ ವಹಿಸಿದ್ದರೆ, ನ್ಯೂಜಿಲೆಂಡ್ ಸ್ಟಾರ್ ಕೇನ್ ವಿಲಿಯಮ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕರಾಗಿದ್ದಾರೆ. ipl-2022-full-list-captains-10-franchises