Sunil-Gavaskar | ಸುನಿಲ್ ಗವಾಸ್ಕರ್ ಮಾತಿಗೆ ನೆಟ್ಟಿಗರಿಂದ ಮಾತಿನ ಪೂಜೆ..!
ಟೀಂ ಇಂಡಿಯಾದ ದಿಗ್ಗಜ ಮತ್ತು ಕಾಮೆಂಟೇಟರ್ ಸುನಿಲ್ ಗವಾಸ್ಕರ್ ವಿರುದ್ಧ ನೆಟಿಜನ್‌ಗಳು ಕಿಡಿಕಾರಿದ್ದಾರೆ.
ಅಸಲಿಗೆ ನೀವು ಏನು ಮಾತನಾಡುತ್ತಿದ್ದಿರೋ ನಿಮಗೆ ಅರ್ಥವಾಗುತ್ತಿದ್ಯಾ..? ವಯಸ್ಸಿಗೆ ತಕ್ಕಂತೆ ಮಾತನಾಡುವುದನ್ನ ಕಲೀರಿ ಎಂದು ನೆಟ್ಟಿಗರು ಬೋಧಿಸುತ್ತಿದ್ದಾರೆ.
ರಾಜಸ್ಥಾನ್ ರಾಯಲ್ಸ್ ಹಿಟ್ಟರ್ ಶಿಮ್ರಾನ್ ಹೆಟ್ಮೆಯರ್ ಅವರ ಪತ್ನಿ ಬಗ್ಗೆ ಗವಾಸ್ಕರ್ ಮಾಡಿದ ವ್ಯಾಖ್ಯಾನಗಳು ಈಗ ಚರ್ಚೆಗೆ ಗ್ರಾಸವಾಗಿವೆ.
ಅಸಲಿಗೆ ಆಗಿದ್ದು ಏನಂದರೇ..
ರಾಜಸ್ಥಾನ್ ರಾಯಲ್ಸ್ ತಂಡ ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಿತ್ತು. ಈ ಪಂದ್ಯಕ್ಕೆ ವೆಸ್ಟ್ ಇಂಡೀಸ್ ಬ್ಯಾಟರ್ ಶಿಮ್ರಾನ್ ಹಿಟ್ ಮೇರ್ ತಂಡ ಸೇರಿಕೊಂಡಿದ್ದರು.
ಹಿಟ್ಮೆರ್ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೀಗಾಗಿ ಹಿಟ್ಮೇರ್ ತವರಿಗೆ ಹೋಗಿ ವಾಪಸ್ ಬಂದಿದ್ದಾರೆ.
ಅದರಂತೆ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಹಿಟ್ ಮೇರ್ ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದರು.
ಈ ಹಿನ್ನೆಲೆಯಲ್ಲಿ ಸುನಿಲ್ ಗವಾಸ್ಕರ್ ಅವರು ಹೆಟ್ಮೆಯರ್ ಅವರನ್ನು ಉದ್ದೇಶಿಸಿ, “ಹೆಟ್ಮೆಯರ್ ಪತ್ನಿಗೆ ಹೆರಿಗೆಯಾಗಿದೆ. ಹೆಟ್ಮೆಯರ್ ಈಗ ರಾಯಲ್ಸ್ ತಂಡಕ್ಕೆ ಡೆಲಿವರಿ ಮಾಡುತ್ತಾರಾ ಎಂದರು.
ಸುನೀಲ್ ಗವಾಸ್ಕರ್ ಅವರ ಈ ಹೇಳಿಕೆ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ನಾನಾ ಟೀಕೆಗಳನ್ನು ಮಾಡುತ್ತಿದ್ದಾರೆ. IPL 2022 gavaskar-blasted-comments-shimron-hetmyer-wife