IPL 2022 | ಟೀಂ ಇಂಡಿಯಾದಲ್ಲಿ ಮತ್ತೆ ಅವಕಾಶ : ಹಾರ್ದಿಕ್ ಹೇಳಿದ್ದೇನು..?
ಐಪಿಎಲ್ 2022 ರ ಋತುವಿನಲ್ಲಿ ಗುಜರಾತ್ ಟೈಟಾನ್ಸ್ ನಾಯಕತ್ವ ವಹಿಸಿಕೊಂಡ ಹಾರ್ದಿಕ್ ಪಾಂಡ್ಯ ಅವರ ಲಕ್ ಬದಲಾಗಿದೆ.
ಐಪಿಎಲ್‌ನ ಪ್ರಸಕ್ತ ಆವೃತ್ತಿಯಲ್ಲಿ ಬ್ಯಾಕ್ ಟು ಬ್ಯಾಕ್ ಅರ್ಧಶತಕಗಳನ್ನು ಗಳಿಸಿರುವ ಹಾರ್ದಿಕ್ ಪಾಂಡ್ಯ ಗುಜರಾತ್ ಅನ್ನು ಅಂಕಪಟ್ಟಿಯಲ್ಲಿ ಟಾಪರ್ ಆಗಿ ಇರಿಸಿದ್ದಾರೆ.
ಗುಜರಾತ್ ತಂಡ 7 ಪಂದ್ಯಗಳಲ್ಲಿ 6 ಗೆಲುವುಗಳು ಕಂಡಿದೆ.
ಈ ನಡುವೆ ಟೀಂ ಇಂಡಿಯಾಗೆ ರೀ ಎಂಟ್ರಿ ಕೊಡುವ ಬಗ್ಗೆ ಹಾರ್ದಿಕ್ ಪಾಂಡ್ಯ ಮಾತನಾಡಿದ್ದು, ನಾನು ಟೀಂ ಇಂಡಿಯಾಗೆ ವಾಪಸ್ ಆಗುವುದರ ಬಗ್ಗೆ ಚಿಂತನೆ ಮಾಡ್ತಿಲ್ಲ.
ನನ್ನ ಫೋಕಸ್ ಏನಿದ್ದರೂ ಈಗ ಗುಜರಾತ್ ತಂಡವನ್ನು ಚಾಂಪಿಯನ್ ಮಾಡುವುದಷ್ಟೆ ಎಂದಿದ್ದಾರೆ.
ಟೀಂ ಇಂಡಿಯಾಗೆ ಆಯ್ಕೆ ಆಗೋದು ನನ್ನ ಕೈಯಲ್ಲಿಲ್ಲ. ಅದು ಆಯ್ಕೆಗಾರರ ಕೈಯಲ್ಲಿದೆ.
ಸದ್ಯಕ್ಕೆ ನನ್ನ ಪ್ರದರ್ಶನ ನನಗೆ ತೃಪ್ತಿ ಎನಿಸುತ್ತಿದೆ. ಬೌಲಿಂಗ್ ಸುಧಾರಿಸಲು ಅವಿರತವಾಗಿ ಶ್ರಮಿಸುತ್ತಿದ್ದೇನೆ ಎಂದಿದ್ದಾರೆ ಪಾಂಡ್ಯ.
ಐಪಿಎಲ್ ಗೂ ಮುನ್ನಾ ಹಾರ್ದಿಕ್ ಪಾಂಡ್ಯ ಬ್ಯಾಡ್ ಫಾರ್ಮ್ ನಿಂದ ಟೀಂ ಇಂಡಿಯಾದಿಂದ ಕಿಕ್ ಔಟ್ ಆಗಿದ್ದರು.
ಜೊತೆಗೆ ಇಂಜೂರಿ ಸಮಸ್ಯೆ ಕೂಡ ಅವರನ್ನ ಕಾಡಿತ್ತು. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡ ಕೂಡ ರಿಟೈನ್ಡ್ ಮಾಡಿಕೊಳ್ಳಲಿಲ್ಲ.
ಆದ್ರೆ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಹಾರ್ದಿಕ್ ಗೆ ಮಣೆ ಹಾಕಿ ತಂಡದ ನಾಯಕತ್ವ ಜವಾಬ್ದಾರಿ ವಹಿಸಿತು. ಅದಕ್ಕೆ ತಕ್ಕಂತೆ ಹಾರ್ದಿಕ್ ಪ್ರದರ್ಶನ ನೀಡುತ್ತಿದ್ದಾರೆ.
ipl-2022-hardik-pandya-makes-big-statement-his-chances-team-india