IPL 2022 | ಗೆಲುವಿನ ಬಳಿಕ ಹಾರ್ದಿಕ್ ಪಾಂಡ್ಯ ಭಾವುಕ..!!
ಟೀಂ ಇಂಡಿಯಾದ ರಾಕ್ ಸ್ಟಾರ್ ಹಾರ್ದಿಕ್ ಪಾಂಡ್ಯ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲಾಡುತ್ತಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಬ್ಯಾಡ್ ಫಾರ್ಮ್, ಇಂಚೂರಿಯಿಂದಾಗಿ ಬಳಲುತ್ತಿದ್ದ ಹಾರ್ಧಿಕ್ ಪಾಂಡ್ಯ ಇದೀಗ ಸ್ಟ್ರಾಂಗ್ ಕಮ್ ಬ್ಯಾಕ್ ಮಾಡಿದ್ದಾರೆ.
15 ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಹಾರ್ಧಿಕ್ ಪಾಂಡ್ಯ, ಯಾರೂ ಊಹಿಸದ ರೀತಿಯಲ್ಲಿ ಗುಜರಾತ್ ಟೈಟಾನ್ಸ್ ತಂಡದ ನಾಯಕರಾದರು. ಕೇವಲ ಕ್ಯಾಪ್ಟನ್ ಆಗಿದ್ದು ಮಾತ್ರವಲ್ಲದೇ ತಂಡವನ್ನು ಚೊಚ್ಚಲ ಪ್ರಯತ್ನದಲ್ಲಿಯೇ ಫೈನಲ್ ಗೆ ಕರೆದ್ಯೂಯ್ದಿದ್ದಾರೆ.
ಮಂಗಳವಾರ ನಡೆದ ಕ್ವಾಲಿಫೇಯರ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ರಾಜಸ್ಥಾನ್ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. ಆ ಮೂಲಕ ಫೈನಲ್ ತಲುಪಿದೆ.
ಈ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದ್ದರು. ಡೇವಿಡ್ ಮಿಲ್ಲರ್ ಜೊತೆ ಸೇರಿದ ಪಾಂಡ್ಯ ಶತಕದ ಜೊತೆಯಾಟವಾಡಿ ಗುಜರಾತ್ ಗೆ ಜಯ ತಂದುಕೊಟ್ಟರು. ಪಂದ್ಯದಲ್ಲಿ ಗೆದ್ದು ನಂತರ ಮಾತನಾಡಿದ ಹಾರ್ಧಿಕ್ ಪಾಂಡ್ಯ, ಭಾವುಕರಾದರು.
ಜೀವನದಲ್ಲಿ ನಡೆಯುವ ಅನೇಕ ವಿಷಯಗಳು ನಮಗೆ ಸಂಯಮವನ್ನು ಕಲಿಸುತ್ತವೆ. ಕಳೆದ ಎರಡು ವರ್ಷಗಳಲ್ಲಿ ನನ್ನನ್ನು ನಾನು ಸಾಕಷ್ಟು ಬದಲಾಯಿಸಿಕೊಂಡಿದ್ದೇನೆ. ಇದರಲ್ಲಿ ನನ್ನ ಕುಟುಂಬ ಪ್ರಮುಖ ಪಾತ್ರ ಪೋಷಿಸಿದೆ. ಸದ್ಯ ಲಭಿಸಿರುವ ಯಶಸ್ಸಿನಿಂದ ನಾನು ಮೈ ಮರೆಯುವುದಿಲ್ಲ ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.
ತಂಡದಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಆಟಗಾರರಿದ್ದಾರೆ. ಅವರಿಂದಲೇ ನಮ್ಮ ತಂಡ ಉತ್ತಮವಾಗಿ ಆಡುತ್ತಿದೆ. ‘ತಂಡದಲ್ಲಿ 23 ಆಟಗಾರರಿದ್ದಾರೆ. ಅವರು ವಿಭಿನ್ನ ವ್ಯಕ್ತಿತ್ವ ಹೊಂದಿದ್ದಾರೆ. ನಮ್ಮ ಸುತ್ತಮುತ್ತ ಇರುವವರು ಸಕಾರಾತ್ಮಕವಾಗಿದ್ದರೆ ನಮಗೂ ಒಳ್ಳೆಯದು. ಅದೇ ನಮ್ಮ ಯಶಸ್ಸಿಗೆ ಕಾರಣ. ಡಗೌಟ್‌ನಲ್ಲಿ ಕುಳಿತ ಆಟಗಾರರು ಸಹ ಸಕಾರಾತ್ಮವಾಗಿರುತ್ತಾರೆ. ಸಾಮೂಹಿಕ ಪ್ರಯತ್ನದಿಂದ ಇಲ್ಲಿಗೆ ಬಂದಿದ್ದೇವೆ ಎಂದ್ದಾರೆ.
ಇದೇ ವೇಳೆ ರಶೀದ್ ಖಾನ್ ಬಗ್ಗೆ ಮಾತನಾಡಿದ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರು ಎಲ್ಲರನ್ನೂ ಪ್ರೋತ್ಸಾಹಿಸುತ್ತಾರೆ. ಡೇವಿಡ್ ಮಿಲ್ಲರ್ ಕೂಡ ಉತ್ತಮವಾಗಿ ಆಡುತ್ತಿದ್ದು, ತಂಡಕ್ಕೆ ನೆರವಾಗುತ್ತಿದ್ದಾರೆ ಎಂದಿದ್ದಾರೆ.
ಕಳೆದ ಐಪಿಎಲ್ ಸೀಸನ್ ನಲ್ಲಿ ಕೆಟ್ಟ ಪರಿಸ್ಥಿತಿ ಎದುರಿಸಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದರು. ಫಿಟ್ನೆಸ್ ಕೊರತೆಯಿಂದ ಟೀ ಮಿಂಡಿಯಾದಿಂದ ಕೂಡ ಔಟ್ ಆಗಿದ್ದರು. ಇನ್ನೇನು ಹಾರ್ದಿಕ್ ಕೆರಿಯರ್ ಮುಗಿದೇ ಹೋಯ್ತು ಅನ್ನುವಷ್ಟರಲ್ಲಿ ಗುಜರಾತ್ ಟೈಟಾನ್ಸ್ ಮೂಲಕ ಹಾರ್ದಿಕ್ ಪಾಂಡ್ಯಗೆ ಅದೃಷ್ಠದ ಬಾಗಿಲು ತೆರೆಯಿತು. ಗುಜರಾತ್ ತಂಡವನ್ನು ಉತ್ತಮವಾಗಿ ಮುಂದುವರೆಸಿದ ಹಾರ್ದಿಕ್ ಪಾಂಡ್ಯ ಪ್ರಶಸ್ತಿ ಮೇಲೆ ಕಣ್ಣಿಟ್ಟಿದ್ದಾರೆ.
ipl-2022-hardik-pandya-trying-be-neutral-no-much-feelings