IPL 2022 | ಅಹಮದಾಬಾದ್ ನಲ್ಲಿ ಐಪಿಎಲ್ ನ ಫೈನಲ್ ಪಂದ್ಯ..
ಐಪಿಎಲ್ 15ನೇ ಸೀಸನ್ ಭಾರಿ ರಸವತ್ತಾಗಿ ಸಾಗುತ್ತಿದೆ. ಈ ಸೀಸನ್‌ನಲ್ಲಿ ಸದ್ಯ ಈಗಾಗಲೇ 35 ಪಂದ್ಯಗಳು ಪೂರ್ಣಗೊಂಡಿವೆ.
ಇನ್ನೂ 35 ಲೀಗ್ ಪಂದ್ಯಗಳು ಉಳಿದಿವೆ. ಈ ಹಿನ್ನೆಲೆಯಲ್ಲಿ ಬಿಸಿಸಿಐ ಭಾನುವಾರ ಪ್ಲೇ ಆಫ್ ಮತ್ತು ಫೈನಲ್ ಪಂದ್ಯಗಳ ಸ್ಥಳವನ್ನು ಅಂತಿಮಗೊಳಿಸಿದೆ.
ಮೇ 24 ಮತ್ತು 26 ರಂದು ಕೋಲ್ಕತ್ತಾದಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಆಯೋಜಿಸಿದರೆ, ಅಹಮದಾಬಾದ್ ನಲ್ಲಿ ಮೇ 27 ರಂದು ಕ್ವಾಲಿಫೈಯರ್ 2 ಜೊತೆಗೆ ಮೇ 29 ರಂದು ಫೈನಲ್ ಪಂದ್ಯಕ್ಕೆ ವೇದಿಕೆಯಾಗಲಿದೆ.
ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಈ ನಿರ್ಧಾರವನ್ನ ತೆಗೆದುಕೊಳ್ಳಲಾಗಿದೆ ಎಂದು ಬಿಸಿಸಿಐ ಅಧ್ಯಕ್ಷ ಗಂಗೂಲಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇದಲ್ಲದೆ ಈ ಪಂದ್ಯಗಳಿಗೆ ನೂರಕ್ಕೆ ನೂರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಲಾಗುವುದು ಎಂದಿದ್ದಾರೆ.

ಮೇ 22 ರವರೆಗೆ ಲೀಗ್ ಪಂದ್ಯಗಳಿಗೆ ನಿಗದಿಪಡಿಸಿದಂತೆ ಶೇಕಡಾ 50 ರಷ್ಟು ಪ್ರೇಕ್ಷಕರಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ.
ಮಹಿಳಾ ಟಿ20 ಚಾಲೆಂಜರ್ಸ್ ಬಗ್ಗೆಯೂ ಬಿಸಿಸಿಐ ಮಹತ್ವದ ನಿರ್ಧಾರ ಕೈಗೊಂಡಿದೆ.
ಮೇ 24-28ರವರೆಗೆ ಮೂರು ತಂಡಗಳೊಂದಿಗೆ ಮಹಿಳಾ ಟಿ20 ಚಾಲೆಂಜರ್ಸ್ ಟೂರ್ನಿಯನ್ನು ಲಕ್ನೋದಲ್ಲಿ ಆಯೋಜಿಸಲಿದೆ.
ಐಪಿಎಲ್ 2022 ರಲ್ಲಿ ಇದುವರೆಗೆ 35 ಪಂದ್ಯಗಳು ನಡೆದಿವೆ. ಇನ್ನೂ 35 ಲೀಗ್ ಪಂದ್ಯಗಳು ನಡೆಯಬೇಕಿದೆ.
ಪಾಯಿಂಟ್ ಪಟ್ಟಿಯಲ್ಲಿ ಗುಜರಾತ್ ಟೈಟಾನ್ಸ್, ಎಸ್‌ಆರ್‌ಎಚ್, ರಾಜಸ್ಥಾನ್ ರಾಯಲ್ಸ್ ಮತ್ತು ಆರ್‌ಸಿಬಿ ಮೊದಲ ನಾಲ್ಕು ಸ್ಥಾನಗಳಲ್ಲಿವೆ.
ಲಕ್ನೋ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಐದು, ಆರನೇ, ಕೆಕೆಆರ್ ಮತ್ತು ಪಂಜಾಬ್ ಏಳು ಮತ್ತು ಎಂಟನೇ ಸ್ಥಾನದಲ್ಲಿವೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡ ಒಂಭತ್ತನೇ ಸ್ಥಾನದಲ್ಲಿ, ಮುಂಬೈ ಇಂಡಿಯನ್ಸ್ ತಂಡ 10ನೇ ಸ್ಥಾನದಲ್ಲಿದೆ.
ipl-2022-knockout-final-matches-held-kolkata-ahmedabad-100-percent-crowd