IPL 2022 | ವ್ಹಾ..! ಎಂಥಾ ಹೊಡೆತ.. 108 ಮೀಟರ್ ಭಾರಿ ಸಿಕ್ಸರ್..!!!

1 min read
ipl-2022-liam-livingstone-hits-biggest-six saaksha tv

IPL 2022 | ವ್ಹಾ..! ಎಂಥಾ ಹೊಡೆತ.. 108 ಮೀಟರ್ ಭಾರಿ ಸಿಕ್ಸರ್..!!!

ಭಾನುವಾರ  ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಿಟ್ಟರ್ ಲಿಯಾಮ್ ಲಿವಿಂಗ್ ಸ್ಟೋನ್ ಆಕಾಶವೇ ಮಿತಿ ಎಂಬಂತೆ ಅಬ್ಬರಿಸಿ ಬೊಬ್ಬಿರಿದ್ರು.  

ಬ್ಯಾಟಿಂಗ್ ನಲ್ಲಿ ಸುನಾಮಿ ಇನ್ನಿಂಗ್ಸ್ ಆಡಿದ ಲಿಯಾಮ್, 32 ಎಸೆತಗಳಲ್ಲಿ ಐದು ಬೌಂಡರಿ,  ಐದು ಸಿಕ್ಸರ್ ಗಳ ನೆರವಿನಿಂದ 60 ರನ್ ಗಳಿಸಿದರು.

ಈ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ ಹೊಡೆದ ಐದು ಸಿಕ್ಸರ್‌ಗಳ ಪೈಕಿ ಒಂದು ಸಿಕ್ಸರ್ ಇಡೀ ಋತುವಿನ ಹೈಲೈಟ್ ಆಗಿದೆ.

ಚೆನ್ನೈನ ಬೌಲರ್ ಮುಖೇಶ್ ಚೌಧರಿ ಅವರ ಬೌಲಿಂಗ್ ನಲ್ಲಿ ಲಿವಿಂಗ್ ಸ್ಟೋನ್  ಅದ್ಭುತ ಸಿಕ್ಸರ್ ಸಿಡಿಸಿದರು.

ಇದು 108 ಮೀಟರ್ ಗಳ ಭಾರಿ ಸಿಕ್ಸರ್ ಆಗಿದೆ. ಇದು ಸೀಸನ್ ನ ಅತಿ ದೊಡ್ಡ ಸಿಕ್ಸರ್ ಆಗಿದೆ.

ipl-2022-liam-livingstone-hits-biggest-six  saaksha tv

ಇದಕ್ಕು ಮುನ್ನ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ 104 ಮೀಟರ್ ಸಿಕ್ಸರ್ ಬಾರಿಸಿದ್ದರು.

ಲಿವಿಂಗ್‌ಸ್ಟೋನ್ ಆ ದಾಖಲೆಯನ್ನು ಮುರಿದ್ದಾರೆ.  ಇನ್ನು ಚೌಧರಿ ಓವರ್ ನಲ್ಲಿ 26 ರನ್ ಚಚ್ಚಿದರು.

ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಲಿವಿಂಗ್‌ಸ್ಟೋನ್ (32 ಎಸೆತಗಳಲ್ಲಿ 60; 5 ಬೌಂಡರಿ, 5 ಸಿಕ್ಸರ್; 2 ವಿಕೆಟ್) ಆಲ್ ರೌಂಡ್ ಪ್ರದರ್ಶನದೊಂದಿಗೆ ಪಂಜಾಬ್ ಕಿಂಗ್ಸ್ 54 ರನ್‌ಗಳಿಂದ ಘನ ಜಯ ಸಾಧಿಸಿತು.  

ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಲಿವಿಂಗ್ ಸ್ಟೋನ್ ಅವರ ನೆರವಿನಿಂದ ನಿಗದಿತ ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 180 ರನ್ ಗಳಿಸಿತು.  ipl-2022-liam-livingstone-hits-biggest-six

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd