Sandeep Sharma is next and he is SOLD to @PunjabKingsIPL for INR 50 Lakh
IPL 2022 Mega Auction Day 2 | RCBಯಲ್ಲಿದ್ದ ಸೈನಿ ರಾಯಲ್ಸ್ ಪಾಲು
2022 ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗಿದ್ದು, ಟೀಂ ಇಂಡಿಯಾದ ಬೌಲರ್ ಗಳಿಗೆ ಫ್ರಾಂಚೈಸಿಗಳು ಮಣೆ ಹಾಕಿದ್ದಾರೆ.
ಸಂದೀಪ್ ಶರ್ಮಾಗೆ 50 ಲಕ್ಷ ಕೊಟ್ಟು ಪಂಜಾಬ್ ತಂಡ ಖರೀದಿಸಿದೆ.
ಸಂದೀಪ್ ಶರ್ಮಾ ಐಪಿಎಲ್ ನಲ್ಲಿ ನೂರಕ್ಕೂ ಹೆಚ್ಚು ವಿಕೆಟ್ ಗಳನ್ನು ಪಡೆದಿದ್ದಾರೆ. ಕಳೆದ ಐಪಿಎಲ್ ನಲ್ಲಿ ಹೈದರಾಬಾದ್ ತಂಡದ ಪರ ಆಡಿದ್ದರು.
ಇನ್ನು ಆರ್ ಸಿಬಿಯಲ್ಲಿದ್ದ ನವದೀಪ್ ಸೈನಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ. 2.60 ಕೋಟಿಗೆ ಆರ್ ಆರ್ ತಂಡ ಸೈನಿಯನ್ನ ಖರೀದಿಸಿದೆ.
ಲೆಫ್ಟ್ ಹ್ಯಾಂಡ್ ಬೌಲರ್ ಉನಾದ್ಕಟ್ 1.30 ಕೋಟಿಗೆ ಮುಂಬೈ ಪಾಲಾಗಿದ್ದಾರೆ.