IPL 2022 | ಆ ಕ್ರಮಾಂಕದಲ್ಲಿ ಆಡೋದು ನನ್ನ ಕನಸ್ಸು
ಟೀಂ ಇಂಡಿಯಾ ಆಲ್‌ರೌಂಡರ್, ಗುಜರಾತ್ ಟೈಟಾನ್ಸ್ ನಾಯಕ ಹಾರ್ಧಿಕ್ ಪಾಂಡ್ಯ ಐಪಿಎಲ್-2022ರಲ್ಲಿ ಅದ್ಭುತ ಫಾರ್ಮ್‌ನಲ್ಲಿದ್ದಾರೆ.
ಈ ಋತುವಿನಲ್ಲಿ ಇದುವರೆಗೆ 6 ಪಂದ್ಯಗಳನ್ನು ಆಡಿರುವ ಹಾರ್ದಿಕ್ 295 ರನ್ ಗಳಿಸಿದ್ದಾರೆ.
ಅಲ್ಲದೆ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ 7 ಪಂದ್ಯಗಳನ್ನು ಆಡಿರುವ ಗುಜರಾತ್ 6 ಗೆಲುವಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕಳೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಕೆಕೆಆರ್ ವಿರುದ್ಧ 67 ರನ್ ಗಳಿಸಿದ್ದರು.
ಈ ಪಂದ್ಯದಲ್ಲಿ ಹಾರ್ದಿಕ್ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದರು.
ಈ ವಿಚಾರವಾಗಿ ಹಾರ್ದಿಕ್ ಪಾಂಡ್ಯ ಗುಜರಾತ್ ಟೈಟಾನ್ಸ್ ಕ್ರಿಕೆಟ್ ನಿರ್ದೇಶಕ ವಿಕ್ರಮ್ ಸೋಲಂಕಿ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ್ದಾರೆ.

‘ಮೂರನೇ ಸ್ಥಾನದಲ್ಲಿ ಆಡುವುದು ನನ್ನ ಕನಸು, 2016ರಲ್ಲಿ ನಾನು ಮುಂಬೈ ಪರ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ಸ್ ಮನ್ ಆಗಿದ್ದೆ.
ಅವರು ನನ್ನನ್ನು ಮೂರನೇ ಸ್ಥಾನಕ್ಕೆ ಬಡ್ತಿ ನೀಡಿದರು. ಆಗ ನನಗೆ ಅಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಲಿಲ್ಲ.
ಆದರೆ ಈಗ ನಾನು ಈ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ. ಆ ಸ್ಥಾನದಲ್ಲಿ ನಾನು ಅದ್ಭುತವಾಗಿ ಬ್ಯಾಟಿಂಗ್ ಮಾಡುತ್ತಿದ್ದೇನೆ.
ಸರಿಯಾದ ಸಮಯಕ್ಕೆ ಬ್ಯಾಟಿಂಗ್ ಗೆ ಬರುತ್ತಿರುವುದಕ್ಕೆ ತುಂಬಾ ಸಂತೋಷವಾಗಿದೆ.
ಶುಭ್‌ಮನ್ ಗಿಲ್ ಔಟಾದ ನಂತರ ನಾನು ನನ್ನ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ.
ನಾನು ಬ್ಯಾಟಿಂಗ್‌ಗೆ ಬಂದಾಗ ಗಿಲ್ ಕ್ರೀಸ್‌ನಲ್ಲಿದ್ದರೆ.. ಆಗ ನಾನು ವಿಭಿನ್ನವಾಗಿ ಆಡುತ್ತಿದ್ದೆ.
ಅವರು ಬೇಗನೆ ಔಟಾದರೆ, ನಾನು ಗಿಲ್ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದು ಹಾರ್ತಿಕ್ ಪಾಂಡ್ಯ ಹೇಳಿದ್ದಾರೆ. ipl-2022-no-3-was-always-my-dream-batting-position hardik pandya