IPL 2022 | ಛೇ…!!! ಸೋಲಿನ ಬೆನ್ನಲ್ಲೆ RCBಗೆ ಮರ್ಮಾಘಾತ
ಹೊಸ ಜೋಷ್ ನೊಂದಿಗೆ 15ನೇ ಆವೃತ್ತಿಯ ಅಖಾಡಕ್ಕೆ ಧುಮುಕಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಉತ್ತಮ ಪ್ರದರ್ಶನದ ಹೊರತಾಗಿಯೂ ಸಂಕಷ್ಟಕ್ಕೆ ಸಿಲುಕಿದೆ.
ಸೋಲಿನೊಂದಿಗೆ ಟೂರ್ನಿಯನ್ನ ಶುರು ಮಾಡಿದ ರಾಯಲ್ ಚಾಲೆಂಜರ್ಸ್ ತಂಡ, ಬಳಿಕ ಹ್ಯಾಟ್ರಿಕ್ ಗೆಲುವುಗಳೊಂದಿಗೆ ಗೆಲುವಿನ ದಂಡಯಾತ್ರೆ ಮಾಡಿತು.
ಆದ್ರೆ ಈ ಹ್ಯಾಟ್ರಿಕ್ ಗೆಲುವಿನ ಆನಂದಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡ ಬ್ರೇಕ್ ಹಾಕಿತು. ಇದಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಕಮ್ ಬ್ಯಾಕ್ ಮಾಡಿದ ಆರ್ ಸಿಬಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಹೀನಾಯ ಸೋಲು ಕಂಡಿತು.
ಈ ಸೋಲಿನಿಂದ ಚೇತರಿಸಿಕೊಂಡು ಗೆಲುವಿನ ಟ್ರ್ಯಾಕ್ ಗೆ ಮರಳುತ್ತೆ ಅನ್ನುವಷ್ಟರದಲ್ಲಿ ಇದೀಗ ರಾಜಸ್ತಾನ್ ರಾಯಲ್ಸ್ ವಿರುದ್ಧ ಮುಗ್ಗರಿಸಿದೆ.
ಇದರೊಂದಿಗೆ 9 ಪಂದ್ಯಗಳಲ್ಲಿ ಆರ್ ಸಿಬಿ ಐದು ಪಂದ್ಯಗಳನ್ನು ಗೆದ್ದು, 4 ಪಂದ್ಯಗಳಲ್ಲಿ ಸೋಲು ಕಂಡಿದೆ. ನೆಟ್ ರನ್ ರೇಟ್ ಕೂಡ ಮೈನಸ್ 572 ಇದೆ. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ದೊಡ್ಡ ಚಿಂತೆಯನ್ನು ತಂದೊಡ್ಡಿದೆ.
ಯಾಕಂದರೇ ಈ ಬಾರಿಯ ಐಪಿಎಲ್ ನಲ್ಲಿ ಹತ್ತು ತಂಡಗಳು ಮುಖಾಮುಖಿಯಾಗಿರುವುದರಿಂದ ಟೂರ್ನಿ ಸಾಕಷ್ಟು ಜಿದ್ದಾಜಿದ್ದಿನಿಂದ ಕೂಡಿದೆ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಹೊರತುಪಡಿಸಿ ಉಳಿದ ಎಲ್ಲಾ ತಂಡಗಳು ಪ್ಲೇ ಆಫ್ಸ್ ಗೆ ಪ್ರವೇಶಿಸಲು ತಯಾರಿ ನಡೆಸಿವೆ.
ಈ ಪೈಕಿ ಕೊಲ್ಕತ್ತಾ ನೈಟ್ ರೈಡರ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಪ್ಲೇ ಆಫ್ಸ್ ರೇಸ್ ನಲ್ಲಿ ಕೊನೆಯ ಸ್ಥಾನದಲ್ಲಿವೆ. ರಾಜಸ್ಥಾನ್ ರಾಯಲ್ಸ್, ಗುಜರಾತ್ ಟೈಟಾನ್ಸ್ ಮೊದಲೆರಡು ಸ್ಥಾನದಲ್ಲಿದ್ದು, ಪ್ಲೇ ಆಫ್ಸ್ ರೇಸ್ ನಲ್ಲಿ ಅಗ್ರಸ್ಥಾನದಲ್ಲಿವೆ.
ಈ ಆರು ತಂಡಗಳನ್ನು ಹೊರತು ಪಡಿಸಿದರೇ ಪ್ಲೇ ಆಫ್ಸ್ ರೇಸ್ ನಲ್ಲಿ ಸನ್ ರೈಸರ್ಸ್ ಹೈದರಾಬಾದ್, ಲಕ್ನೋ ಸೂಪರ್ ಜೈಂಟ್ಸ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ.
ಹೀಗಾಗಿ ಸದ್ಯ 9 ಪಂದ್ಯಗಳನ್ನಾಡಿರುವ ಬೆಂಗಳೂರು ತಂಡ ಪ್ಲೇ ಆಫ್ಸ್ ಗೆ ಹೋಗಬೇಕಾದರೇ ಇನ್ನುಳಿದ ಐದು ಪಂದ್ಯಗಳಲ್ಲಿ ಕನಿಷ್ಠ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಲೇಬೇಕಾಗಿದೆ. ಜೊತೆಗೆ ರನ್ ರೇಟ್ ಹೆಚ್ಚಿಸಿಕೊಳ್ಳಬೇಕಿದೆ.
ಒಂದು ವೇಳೆ ಪಂದ್ಯ ಗೆದ್ದು ರನ್ ರೇಟ್ ನತ್ತ ಗಮನ ಹರಿಸದಿದ್ದರೇ ಬೆಂಗಳೂರು ತಂಡ ಈ ಬಾರಿಯ ಟೂರ್ನಿಯಿಂದಲೂ ಹೊರಬರೋದು ಪಕ್ಕಾ. ಆದ್ದರಿಂದ ಬೆಂಗಳೂರು ತಂಡ ಆದಷ್ಟು ಬೇಗ ಕಂ ಬ್ಯಾಕ್ ಮಾಡಲಿ ಅನ್ನೋದು ಆರ್ ಸಿಬಿ ಅಭಿಮಾನಿಗಳ ಆಶಯವಾಗಿದೆ.
IPL 2022 Playoff Scenario: RCB falter in playoff race