IPL 2022 | ಸಂಕಷ್ಟದಲ್ಲಿ ಆರ್ ಸಿಬಿ.. ಯಾಮಾರಿದ್ರೆ ಮನೆಗೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15ನೇ ಆವೃತ್ತಿ ಇಂಡಿಯನ್ ಪ್ರಿಮಿಯರ್ ಲೀಗ್ ನಲ್ಲಿ ಸೋಲು ಗೆಲುವುಗಳೊಂದಿಗೆ ಸಾಗುತ್ತಿದೆ. ಫಾಫ್ ಡುಪ್ಲಸಿಸ್ ನಾಯಕತ್ವ ಬೆಂಗಳೂರು ತಂಡ ಈ ಬಾರಿ ಚಾಂಪಿಯನ್ ಆಗುವ ನೆಚ್ಚಿನ ತಂಡಗಳಲ್ಲಿ ಒಂದು. ಆದ್ರೆ ಇದೀಗ ಆರ್ ಸಿಬಿ ತಂಡಕ್ಕೆ ಸಂಕಷ್ಟವೊಂದು ಎದುರಾಗಿದೆ. ಈಗ ಬೆಂಗಳೂರು ತಂಡದ ಆಟಗಾರರು ಸ್ವಲ್ಪ ಯಾಮಾರಿದ್ರೂ ಮನೆಗೆ ಹೋಗೋದು ಪಕ್ಕಾ.
ಹೌದು..! ಆರ್ ಸಿಬಿ ತಂಡ 15ನೇ ಆವೃತ್ತಿಯನ್ನ ಹೊಸ ಜೋಷ್ ನೊಂದಿಗೆ ಆರಂಭಿಸಿತ್ತು. ಆದ್ರೆ ಮೊದಲ ಪಂದ್ಯದಲ್ಲಿಯೇ ಪಂಜಾಬ್ ವಿರುದ್ಧ ಸೋಲು ಅನುಭವಿಸಿತು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಪಂದ್ಯಗಳಲ್ಲಿ ಗೆದ್ದ ಆರ್ ಸಿಬಿಗೆ ಚೆನ್ನೈ ತಂಡ ಬ್ರೇಕ್ ಹಾಕಿತು. ಇದಾದ ಬಳಿಕ ಲಕ್ನೋ ವಿರುದ್ಧ ಗೆದ್ದ ರೆಂಡ್ ಆರ್ಮಿಗೆ ಆರೆಂಜ್ ಆರ್ಮಿ ಹೈದರಾಬಾದ್ ತಂಡ ಮುಟ್ಟಿ ನೋಡಿಕೊಳ್ಳುವಂತಹ ಆಘಾತ ನೀಡಿತು. ಹೈದರಾಬಾದ್ ತಂಡದ ವಿರುದ್ಧ ಬೆಂಗಳೂರು ತಂಡ ಅತ್ಯಂತ ಹೀನಾಯವಾಗಿ ಸೋಲು ಕಂಡಿದೆ. ಇದು ಆರ್ ಸಿಬಿ ಪಾಳಯದಲ್ಲಿ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.
ಸದ್ಯ 10 ಅಂಕಗಳನ್ನು ಪಡೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಇಷ್ಟೇ ಅಂಕಗಳನ್ನು ಪಡೆದ ಎಸ್ ಆರ್ ಹೆಚ್, ರಾಜಸ್ಥಾನ್, ಲಕ್ನೋ ತಂಡಗಳು ಆರ್ ಸಿಬಿಗಿಂತ ಮುಂದೆ ಇವೆ. ಇದು ಆರ್ ಸಿಬಿಗೆ ಎಚ್ಚರಿಕೆಯ ಗಂಟೆಯಾಗಿದೆ.

ಯಾಕಂದರೇ ಈ ಬಾರಿ ಮುಂಬೈ, ಚೆನ್ನೈ ಹೊರೆತುಪಡಿಸಿ ಉಳಿದೆಲ್ಲಾ ತಂಡಗಳು ಪ್ಲೇ ಆಫ್ ರೇಸ್ ನಲ್ಲಿವೆ. ಅದರಲ್ಲೂ ಮುಖ್ಯವಾಗಿ ಆರ್ ಆರ್, ಎಸ್ ಆರ್ ಹೆಚ್, ಲಕ್ನೋ ಪೈಪೋಟಿ ನಡುವೆ ಬೆಂಗಳೂರು ಪ್ಲೇ ಆಫ್ಸ್ ತಲುಪಬೇಕಿದೆ. ಹೀಗಾಗಿ ಇನ್ನುಳಿದ ಆರು ಪಂದ್ಯಗಳಲ್ಲಿ ಆರ್ ಸಿಬಿ ಕನಿಷ್ಟ ಎಂದರೂ ಮೂರು ಪಂದ್ಯಗಳಲ್ಲಿ ಗೆಲ್ಲಲೇಬೇಕಿದೆ. ಜೊತೆಗೆ ರನ್ ರೇಟ್ ಕಾಪಿಟ್ಟುಕೊಳ್ಳುವುದು ಕೂಡ ಮೂಲಭೂತವಾಗಿದೆ. ಯಾಕಂದರೇ ಆರ್ ಸಿಬಿಗೆ ಹೋಲಿಕೆ ಮಾಡಿಕೊಂಡರೇ ಉಳಿದ ತಂಡಗಳ ರನ್ ರೇಟು ಉತ್ತಮವಾಗಿದೆ. ಹೀಗಾಗಿ ಪಂದ್ಯ ಗೆಲ್ಲುವುದರ ಜೊತೆ ಜೊತೆಗೆ ರನ್ ರೇಟ್ ಹೆಚ್ಚಿಸಿಕೊಳ್ಳುತ್ತಾ ಆರ್ ಸಿಬಿ ಸಾಗಬೇಕಿದೆ.
ಒಂದು ವೇಳೆ ಆರ್ ಸಿಬಿ ತಂಡ ಸ್ವಲ್ಪ ಯಾಮಾರಿದ್ರೂ ಎಂದಿನಂತೆ ಬರಿ ಕೈನಲ್ಲಿ ಮನೆಗೆ ಹೋಗಬೇಕಾಗುತ್ತದೆ. ಹೀಗಾಗಿ ಇನ್ಮುಂದೆ ಪ್ರತಿ ಪಂದ್ಯದಲ್ಲಿಯೂ ಗೆಲುವೊಂದೇ ಗುರಿ ಎಂಬಂತೆ ಆರ್ ಸಿಬಿ ಆಡಬೇಕಿದೆ. ಅದಕ್ಕಾಗಿ ತಂಡದಲ್ಲಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಬೇಕಿದೆ. ಮುಖ್ಯವಾಗಿ ಆರಂಭಿಕ ಅನೂಜ್ ರಾವತ್ ಬೇಗ ಫಾರ್ಮ್ ಗೆ ಬರಬೇಕಿದೆ. ಜೊತೆಗೆ ಬೆಂಗಳೂರು ತಂಡ ಕಪ್ ಗೆಲ್ಲಬೇಕಾದ್ರೆ ವಿರಾಟ್ ಫಾರ್ಮ್ ಅತಿ ಮುಖ್ಯವಾಗಿದ್ದು, ಅವರು ಆದಷ್ಟು ಬೇಗ ಫಾರ್ಮ್ ಗೆ ಬರೋದು ನಿರ್ಣಾಯಕವಾಗಿದೆ.
ipl-2022-rcb playoff chances 2022