IPL 2022 | ಎದುರಾಳಿಗಳಿಗೆ ದೊಡ್ಡದಾಗಿ ಮೆಸೇಜ್ ಕಳುಹಿಸಿದ RCB ipl 2022 rcb practice match saaksha tv
ಇಂಡಿಯನ್ ಪ್ರಿಮಿಯರ್ ಲೀಗ್ ಆರಂಭಕ್ಕೆ ಇನ್ನೊಂದೇ ದಿನ ಬಾಕಿ ಇದೆ.
ಎಲ್ಲಾ ತಂಡಗಳು 15 ನೇ ಆವೃತ್ತಿಯ ಐಪಿಎಲ್ ಗಾಗಿ ಭರ್ಜರಿ ತಯಾರಿ ನಡೆಸಿವೆ. ಇದಕ್ಕೆ ಆರ್ ಸಿಬಿ ಕೂಡ ಹೊರತಾಗಿಲ್ಲ.
ಹೊಸ ನಾಯಕನ ನೇತೃತ್ವದಲ್ಲಿ ಈ ಸಲ ಕಪ್ ಗೆಲ್ಲುವ ವಿಶ್ವಾಸದಲ್ಲಿರುವ ಆರ್ ಸಿಬಿ ತಂಡದ ಓಪನರ್ ಗಳು ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದಕ್ಕೆ ಇದೀಗ ಉತ್ತರ ಸಿಕ್ಕಿದೆ.
ಪ್ರಾಕ್ಟೀಸ್ ನಲ್ಲಿ ತೊಡಗಿಕೊಂಡಿರುವ ಬೆಂಗಳೂರು ತಂಡ ಇಂಟ್ರಾ ಸ್ಕ್ವಾಡ್ ಪಂದಗಳನ್ನು ಆಡಿದೆ.
ಈ ಪಂದ್ಯದಲ್ಲಿ ಆರ್ಸಿಬಿ ಕೋಚ್ ಸಂಜಯ್ ಬಂಗಾರ್ ಆಟಗಾರರಿಗೆ ವಿಶೇಷ ಟಾರ್ಗೆಟ್ಗಳನ್ನು ನೀಡಿದ್ದರು..
ಅದರಂತೆ ಮೊದಲ 10 ಓವರ್ಗಳಲ್ಲಿ 80 ರಿಂದ 90 ರನ್ಗಳ ಟಾರ್ಗೆಟ್ ನೀಡಲಾಗಿತ್ತು.
ಈ ವೇಳೆ ಕಣಕ್ಕಿಳಿದ ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ಬ್ಯಾಟ್ಸ್ಮನ್ ಅನೂಜ್ ರಾವತ್ ಮೊದಲ 10 ಓವರ್ಗಳಲ್ಲಿ 117 ರನ್ ಬಾರಿಸಿದ್ದಾರೆ. ಇದರಲ್ಲಿ ಡುಪ್ಲೆಸಿಸ್ 77 ರನ್ ಬಾರಿಸಿದರೆ, ಅನೂಜ್ 44 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ರು.
ಇದಾದ ಬಳಿಕವೂ ಇದೇ ಜೋಡಿಯನ್ನ ಕೋಚ್ ಇನ್ನಿಂಗ್ಸ್ ಒಪನ್ ಮಾಡೋಕೆ ಬಿಟ್ಟಿದ್ದರು.
ಆಗಲೂ ಡುಪ್ಲೆಸಿಸ್ ಹಾಗೂ ಅನೂಜ್ ಜೋಡಿ ಮೊದಲ ವಿಕೆಟ್ಗೆ 100 ರನ್ಗಳ ಜೊತೆಯಾಟವಾಡಿದೆ.
ಬ್ಯಾಕ್ ಟು ಬ್ಯಾಕ್ ಇದೇ ಜೋಡಿಯನ್ನೇ ಆರಂಭಿಕರಾಗಿ ಆಡಿಸುತ್ತಿರುವುದರಿಂದ ಈ ಸಲ ಆರ್ಸಿಬಿ ಪರ ಅನೂಜ್ ರಾವತ್ ಹಾಗೂ ಫಾಫ್ ಡುಪ್ಲೆಸಿಸ್ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ. ipl 2022 rcb practice match saaksha tv